ಅಕಾಡೆಮಿ ಕಾರ್ಯಕ್ರಮಗಳ ವಿಡಿಯೋಗಳು
ನಿಮ್ಹಾನ್ಸ್ ಶೈಕ್ಷಣಿಕ ವಿಡಿಯೋಗಳು
ಕುತೂಹಲಿ ವಿಡಿಯೋಗಳು
ಅಮೇರಿಕಾದ ಪಿಟ್ಸ್ಬರ್ಗನ ಕರ್ನೆಗಿ ಮೆಲ್ಲನ್ ವಿಶ್ವವಿದ್ಯಾನಿಲಯದ ಬೋಧನಾ ಸಿಬ್ಬಂದಿಗಳು ಈ ಕೆಮ್ ಕಲಕ್ಟೀವ್ ಅಭಿವೃದ್ಧಿಪಡಿಸಿದ್ದು, ವರ್ಚುಯಲ್ ಲ್ಯಾಬ್, ಸನ್ನಿವೇಶ-ಆಧಾರಿತ ಚಟುವಟಿಕೆಗಳ ಕಲಿಕಾ ಟ್ಯುಟೋರಿಯಲ್ ಮತ್ತು ಪರಿಕಲ್ಪನಾ ಪರೀಕ್ಷೆಗಳ ಒಂದು ಸಂಗ್ರವಾಗಿದೆ. ಇದನ್ನು ಬಳಸಿಕೊಂಡು ವಿದ್ಯಾರ್ಥಿಗಳು ರಸಾಯನ ವಿಜ್ಞಾನದ ತತ್ವಗಳನ್ನು ಪರಿಶೀಲಿಸಬಹುದಾಗಿದೆ ಹಾಗೂ ಕಲಿಯಬಹುದಾಗಿದೆ.
ಕೇಂದ್ರ ಸರ್ಕಾರದ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ‘ಐಸಿಟಿ ಮೂಲಕ ರಾಷ್ಟ್ರೀಯ ಶಿಕ್ಷಣ ಮಿಶನ್’ ಕಾರ್ಯಕ್ರಮದಡಿಯಲ್ಲಿರುವ ಈ ವರ್ಚುಯಲ್ ಲ್ಯಾಬ್, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಲ್ಲದೆ ಸಂಶೋಧನಾ ವಿದ್ಯಾರ್ಥಿಗಳೂ ಸಹ ವಿಜ್ಞಾನದ ಮೂಲ ಹಾಗೂ ಉನ್ನತ ತತ್ವಗಳನ್ನು ಪ್ರಯೋಗಗಳ ಮೂಲಕ ಕಲಿಯಲು ಸಹಕಾರಿಯಾಗಿದೆ.
ಭೌತ ವಿಜ್ಞಾನ, ರಸಾಯಿನಿಕ ವಿಜ್ಞಾನ ಮತ್ತು ಜೀವ ವಿಜ್ಞಾನ ವಿಷಯಗಳಲ್ಲಿ ಪ್ರಯೋಗಗಳನ್ನು ಆನ್ ಲೈನ್ ಲ್ಯಾಬ್ ಹೊಂದಿದೆ. ಈ ಕಾರ್ಯಕ್ರಮವು ಅಮೃತಾ ವಿಶ್ವವಿದ್ಯಾನಿಲಯ ಮತ್ತು ಮುಂಬಾಯಿನ ಸಿಡಿಎಸಿ (ಸಿಡ್ಯಾಕ್)ನ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗಿದೆ.
ಗೋ-ಲ್ಯಾಬ್ ವೈಜ್ಞಾನಿಕ ಸಮಸ್ಯೆಗಳ ಅಧ್ಯಯನಕ್ಕೆ ವರ್ಚುಯಲ್ ಪರಿಸರದಲ್ಲಿ ವ್ಯಾಪಕವಾದ ಆನ್ ಲೈನ್ ಪರಿಕರಗಳನ್ನು ಒದಗಿಸುತ್ತದೆ. ಬೋದಕರು ಆನ್ ಲೈನ್ ಪ್ರಯೋಗಾಲಯ ಮತ್ತು ಕಲಿಕಾ ತಂತ್ರಾಂಶಗಳನ್ನು ಬಳಸಿಕೊಂಡು ಕಸ್ಟಮೈಸ್ಡ್ ವರ್ಚುಯಲ್ ಪ್ರಯೋಗಾಲಯಗಳನ್ನು ನಿರ್ಮಿಸಬಹುದಾಗಿದೆ. ಅಲ್ಲದೆ, ವಿವಿಧ ಸಲಕರಣೆಗಳು ಮತ್ತು ಪ್ರಯೋಗಗಳನ್ನು ವಿಜ್ಞಾನದ ಕ್ಷೇತ್ರಗಳಾದ ಭೌತ ವಿಜ್ಞಾನ, ರಸಾಯನ ವಿಜ್ಞಾನ, ಖಗೋಳ ವಿಜ್ಞಾನ, ಜೀವ ವಿಜ್ಞಾನ, ಭೂಗೊಳ ಮತ್ತು ಗಣಿತ ವಿಜ್ಞಾನಗಳಲ್ಲಿ ಅನುಕರಿಸುವಲ್ಲಿ ವಿದ್ಯಾರ್ಥಿಗಳನ್ನು ಶಕ್ತಗೊಳಿಸಲು ಸಹಕಾರಿಯಾಗಲಿದೆ. ಇದಲ್ಲದೆ, ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರಶ್ನೆಗಳನ್ನು ಮತ್ತು ಸಿದ್ಧಾಂತಗಳನ್ನು ರೂಪಿಸುವ, ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವ ಮತ್ತು ತೀರ್ಮಾನಗಳನ್ನು ತೆಗೆದುಕೊಳ್ಳುವ ವಿಚಾರಣಾ ಸಾಮಥ್ರ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ
ಅಮೇರಿಕನ್ ಕೆಮಿಕಲ್ ಸೊಸೈಟಿಯು ರಸಾಯನಿಕ ವಿಜ್ಞಾನದ ಎಲ್ಲಾ ಕ್ಷೇತ್ರಗಳಲ್ಲಿನ ಮತ್ತು ಎಲ್ಲಾ ಪದವಿಯ ಒಟ್ಟು 157,000 ವೃತ್ತಿಪರ ಸದಸ್ಯ ವೃಂದವನ್ನು ಹೊಂದಿರುವ ಸಂಸ್ಥೆಯಾಗಿದೆ. ಇದು ಪ್ರಪಂಚದ ಬಹು ದೊಡ್ಡ ವೈಜ್ಞಾನಿಕ ಸೊಸೈಟಿಯಾಗಿದ್ದು, ಅಧಿಕೃತ ವೈಜ್ಞಾನಿಕ ಮಾಹಿತಿಯ ಪ್ರಮುಖ ಮೂಲವಾಗಿದೆ.