ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಪ್ರಖ್ಯಾತಿಗೆ ಹತ್ತು ನಿಮಿಷಗಳು: ವೀಡಿಯೊ ಉಪನ್ಯಾಸ ಸ್ಪರ್ಧೆ

ವಿದ್ಯಾರ್ಥಿಗಳು, ಶಿಕ್ಷಕರು, ಸಂಶೋಧಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತಮ್ಮ ಜ್ಞಾನ, ಸೃಜನಶೀಲತೆ, ವಿಶ್ಲೇಷಣೆ, ಪ್ರಸ್ತುತಿ ಮತ್ತು ಸಂವಹನಾ ಕೌಶಲ್ಯಗಳನ್ನು ಪ್ರದರ್ಶಿಸಲು ಅನುವು ಮಾಡಿಕೊಡಲು ಮತ್ತು ಆ ಮೂಲಕ ರಾಜ್ಯದಲ್ಲಿ ಯುವ ಸಂವಹನ ಕಾರ್ಯಪಡೆಯನ್ನು ಸಿದ್ಧಗೊಳಿಸುವ ಸಲುವಾಗಿ ಅಕಾಡೆಮಿಯು ” ಪ್ರಖ್ಯಾತಿಗೆ ಹತ್ತು ನಿಮಿಷಗಳು: ವೀಡಿಯೊ ಉಪನ್ಯಾಸ ಸ್ಪರ್ಧೆ” ಯನ್ನು ಆಯೋಜಿಸುತ್ತಿದೆ.

ಪ್ರಕ್ರಿಯೆ

  • ಆಸಕ್ತರು ವೀಡಿಯೊ ಪರಿಕಲ್ಪನೆಯನ್ನು ತಿಳಿಸುವ 2 ನಿಮಿಷಗಳ ವಿಷುಯಲ್ ಸಂಕ್ಷಿಪ್ತವನ್ನು (ವೀಡಿಯೊ ಕ್ಲಿಪ್ಪಿಂಗ್) ವೆಬ್ ಸೈಟ್ ನಲ್ಲಿ ಲಭ್ಯವಿರುವ ನಿಗದಿತ ನಮೂನೆಯಲ್ಲಿ ಪ್ರಕಟಣೆ ನೀಡಿದ ಒಂದು ತಿಂಗಳೊಳಗೆ ಸಲ್ಲಿಸಬೇಕು.
  • ವೀಡಿಯೊ ಕಳುಹಿಸಬೇಕಾದ ಇ-ಮೇಲ್: video.ksta@gmail.com
  • ಸಲ್ಲಿಸಲಾದ ಸ್ವೀಕೃತಿಗಳನ್ನು ಒಂದು ತಜ್ಞ ಸಮಿತಿ ಮೂಲಕ ಪರಿಶೀಲಿಸಿ, ಒಂದು ತಿಂಗಳ ಒಳಗಾಗಿ ಆಯ್ಕೆಯಾದ ಸ್ವೀಕೃತಿಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅನುಮತಿಯನ್ನು ನೀಡಲಾಗುವುದು; ಕೇವಲ ಅನುಮತಿ ನೀಡಿದ ಸ್ಪರ್ಧಾಳುಗಳಿಗೆ ಮಾತ್ರ ವೀಡಿಯೋ ಸಲ್ಲಿಸಲು ಅವಕಾಶ ನೀಡಲಾಗುತ್ತದೆ
  • ಅನುಮೋದನೆ ನೀಡಿದ ಎರಡು ತಿಂಗಳೊಳಗಾಗಿ ಪ್ರಸ್ತುತಿಯನ್ನು ವೀಡಿಯೊ ಮಾಡಿ ಅಕಾಡೆಮಿಗೆ ಸಲ್ಲಿಸಬೇಕು.
  • ಉಪನ್ಯಾಸದ ಮಾಧ್ಯಮವು ಕನ್ನಡ ಅಥವಾ ಆಂಗ್ಲ ಭಾಷೆಯಲ್ಲಿರಬೇಕು, ಸೈಟ್ ನಲ್ಲಿ ಚಿತ್ರೀಕರಿಸಿದ ಫುಟೇಜ್ ಗಳು, ಆನಿಮೇಶನ್ ಗಳು, ಕಂಪ್ಯೂಟರ್ ಚಿತ್ರಗಳು, ರೇಖಾಚಿತ್ರಗಳು, ಡೇಟಾ, ಸಂದರ್ಶನಗಳು ಮತ್ತು ಇತ್ಯಾದಿಗಳನ್ನು ಒಳಗೊಂಡಿರಬಹುದು.
  • ವೀಡಿಯೋ ಸ್ವಂತಿಕೆಯಾಗಿ ಸ್ಪರ್ಧಿಯ ಆಸ್ತಿಯಾಗಿರಬೇಕು. ಈ ಹಿಂದೆ ಪ್ರಕಟಿತವಾಗಿರಬಾರದು (ಅಂತರ್ಜಾಲವೂ ಸೇರಿದಂತೆ) ಮತ್ತು ಯಾವುದೇ ಇತರ ಸ್ಪರ್ಧೆಗೆ ಸಲ್ಲಿಸಿರಬಾರದು
  • ಭಾಷೆಯ ಬಳಕೆ, ದೃಶ್ಯ, ಪ್ರಸ್ತುತಿ ಮತ್ತು ಇತರೆ ವಿಷಯಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ಪ್ರೇಕ್ಷಕರಿಗೆ ಪ್ರದರ್ಶಿಸಲು ಯೋಗ್ಯವಾಗಿರಬೇಕು
  • ವೀಡಿಯೊ ಗರಿಷ್ಠ 10 ನಿಮಿಷಗಳದ್ದಾಗಿರಬೇಕು
  • ಸ್ಪರ್ಧಿಗಳು MP4, MOV, MPEG, FLV, ಮತ್ತು AVI ಸ್ವರೂಪಗಳಲ್ಲಿ 1920×1080 ರೆಸಲ್ಯೂಶನ್ ನಲ್ಲಿ ವೀಡಿಯೊ ಸಲ್ಲಿಸಬಹುದು

ಅರ್ಹತೆ & ವಿಷಯಗಳು

  • ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿ ವಾಸಿಸುತ್ತಿರುವ ಗರಿಷ್ಟ 35 ವರ್ಷ ವಯಸ್ಸಿನ ವ್ಯಕ್ತಿ ಈ ಸ್ಪರ್ಧೆ ಭಾಗವಹಿಸಬಹುದು
  • ವಿದ್ಯಾರ್ಥಿಗಳು, ಶಿಕ್ಷಕರು, ಸಂಶೋಧಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರು ಅರ್ಹರು
  • ವಿಷಯ: ಆರೋಗ್ಯ & ನೈರ್ಮಲ್ಯ, ಆಹಾರ ಭದ್ರತೆ, ಜಲಪ್ರಪಂಚ, ಖಗೋಳಶಾಸ್ತ್ರ, ಶಕ್ತಿ

ಮೌಲ್ಯಮಾಪನ & ಪ್ರಶಸ್ತಿಗಳು

  • ಸೃಜನಶೀಲತೆ & ನೈಜತೆಗೆ; ಉಪನ್ಯಾಸದ ರಚನೆ; ತಾಂತ್ರಿಕ ವಿಷಯ; ದೃಶ್ಯ ಸಾಧನಗಳು ಮತ್ತು ಭೌತಿಕ ಉದಾಹರಣೆಗಳು; ಸಂವಹನ ಕೌಶಲ್ಯಗಳು; ಮತ್ತು ಪ್ರಸ್ತುತಿಗೆ ಸಂಬಂಧಿಸಿದ ಮಾನದಂಡಗಳೊಂದಿಗೆ, ತಜ್ಞ ಮೌಲ್ಯಮಾಪಕರ ಮೂಲಕ ಸಲ್ಲಿಕೆಯಾದ  ವೀಡಿಯೊಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ.
  • ನುಡಿಯಲ್ಲಿ ನಿರರ್ಗಳತೆ ಮತ್ತು ಓದುವಿಕೆಯಲ್ಲಿ ಸ್ಪಷ್ಟತೆ’ ನಿರ್ಣಾಯಕ ಮಾನದಂಡಗಳಲ್ಲಿ ದಾಗಿರುತ್ತದೆ
  • ಪ್ರಶಸ್ತಿಗಳು:  ಸುವರ್ಣ ಪ್ರಶಸ್ತಿ: ರೂ 25,000/-; ಬೆಳ್ಳಿ ಪ್ರಶಸ್ತಿ: ರೂ. 15,000/-; ವಿಶೇಷ ಜ್ಯೂರಿ ಪ್ರಶಸ್ತಿ: ರೂ. 10,000/-.  ವೀಡಿಯೊಗಳನ್ನು ಸ್ವೀಕರಿಸಿದ ಎರಡು ತಿಂಗಳ ಒಳಗಾಗಿ ಅಕಾಡೆಮಿಯ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು
  • ಶ್ರೇಯಾಂಕದ ಮೇಲೆ ಆಯ್ಕೆ ಮಾಡಿದ ಮೊದಲ 30 ಸ್ಪರ್ಧಿಗಳಿಗೆ ಅಕಾಡೆಮಿಯಲ್ಲಿ ಮೂರು ದಿನಗಳ ಕಾರ್ಯಾಗಾರದಲ್ಲಿ ತಜ್ಞರ ತಂಡ ಸಂವಹನ ಕೌಶಲ್ಯವನ್ನು ಮತ್ತು ತರಬೇತಿಯನ್ನು ನೀಡಲಾಗುವುದು. ಆಯವ್ಯಯ : 3 ದಿನಗಳ ಕಾರ್ಯಾಗಾರಕ್ಕೆ ರೂ. 2 ಲಕ್ಷ (ಪ್ರಯಾಣ ಮತ್ತು ವಸತಿ ಶುಲ್ಕ ಸೇರಿದಂತೆ) .
  • ಸಲ್ಲಿಸಿದ ವೀಡಿಯೊಗಳ ಹಕ್ಕುಸ್ವಾಮ್ಯವನ್ನು ಅಕಾಡೆಮಿಯು ಹೊಂದಿರುತ್ತದೆ ಮತ್ತು ಬಹುಮಾನ ವಿಜೇತ ವೀಡಿಯೊಗಳನ್ನು ವೆಬ್ ಸೈಟ್ ಮತ್ತು ಇತರ ಮಾಧ್ಯಮಗಳ ಮೂಲಕ ಪ್ರಕಟಿಸಲಾಗುತ್ತದೆ
  • ಸ್ಪರ್ಧೆಗಾಗಿ ಯಾವುದೇ ವೀಡಿಯೊಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಹಕ್ಕನ್ನು ಅಕಾಡೆಮಿಯು ಕಾಯ್ದಿರಿಸಿದೆ ಮತ್ತು ಈ ವಿಷಯದಲ್ಲಿ ಅಕಾಡೆಮಿಯ ನಿರ್ಧಾರವು ಅಂತಿಮ ಮತ್ತು ಪಾಲನೀಯ

ನಿಯಮಗಳು ಮತ್ತು ನಿಬಂಧನೆಗಳು

  • ಸ್ಪರ್ಧೆಯನ್ನು ರದ್ದುಗೊಳಿಸುವ ಅಥವಾ ಈ ನಿಯಮಗಳನ್ನು ತನ್ನ ವಿವೇಚನೆಗೆ ತಕ್ಕಂತೆ ಮಾರ್ಪಡಿಸುವ ಹಕ್ಕನ್ನು ಆಕಾಡೆಮಿ ಕಾಯ್ದಿರಿಸಿದೆ. ಅಕಾಡೆಮಿಯ ನಿರ್ಧಾರಗಳು ಅಂತಿಮ ಮತ್ತು ಪಾಲನೀಯ    
  • ಒಬ್ಬರಿಗೆ ಒಂದು ಪ್ರವೇಶ. ಒಂದಕ್ಕಿಂತ ಹೆಚ್ಚು ಸಲ್ಲಿಕೆಯಾದರೆ ಅನರ್ಹಗೊಳಿಸಲಾಗುತ್ತದೆ
  • ವೀಡಿಯೋ ಸ್ವಂತಿಕೆಯಾಗಿರಬೇಕು ಮತ್ತು ಅದರ ಹಕ್ಕು ಸ್ಪರ್ಧಿಗೆ ಸೇರಿದ್ದಾಗಿರಬೇಕು
  • ವೀಡಿಯೊದಲ್ಲಿ ತೋರಿಸಲಾದ ಯಾವುದೇ ಸ್ಥಳ ಸಂಬಂಧಿಸದವರಿಂದ ಅನುಮತಿಯನ್ನು ಪಡೆಯಿರಿ
  • ಸಲ್ಲಿಕೆಗಳು ಇತರ ವೀಡಿಯೊಗಳು ಮರು-ಸಂಪಾದಿಸಲಾದ ಆವೃತ್ತಿಗಳಾಗಿರಬಾರದು
  • ವೀಡಿಯೊಗಳಲ್ಲಿ ಪ್ರಕಟಿತ ಪಠ್ಯ, ಸಂದರ್ಶನಗಳು, ವೀಡಿಯೊ ರೆಕಾರ್ಡ್ ಅಥವಾ 3ನೇ ಪಾರ್ಟಿ ಕೃತಿಗಳ ಬಳಸಿಕೊಂಡಿದ್ದಲ್ಲಿ (ಉದಾ. ಪ್ರಾಪ್ ಗಳು, ಸಂಗೀತ, ಫೋಟೋಗಳು, ಇತ್ಯಾದಿ), ಅವುಗಳ ಬಳಕೆಗೆ ಸಮ್ಮತಿ, ಪರವಾನಗಿ, ಹಕ್ಕುಸ್ವಾಮ್ಯ ಪಡೆದಿರುವ ಬಗ್ಗೆ ಲಿಖಿತ ಸಹಿ ಮಾಡಿದ ಸಮ್ಮತಿ ಪಡೆದಿರಬೇಕು
  • ಬೌದ್ಧಿಕ ಆಸ್ತಿ ಹಕ್ಕುಗಳ ವಿವಾದಗಳನ್ನು ಒಳಗೊಂಡಿರುವ ಸಲ್ಲಿಕೆಗಳು ಪ್ರವೇಶದಾರನ ಜವಾಬ್ದಾರಿಯಾಗಿರಬೇಕು ಮತ್ತು ಸಂಘಟಕರು ಯಾವುದೇ ರೀತಿ ಇದಕ್ಕೆ ಸಂಬಂಧ ಹೊಂದಿರುವುದಿಲ್ಲ
  • ವಿಜೇತರು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಗಳು ಮತ್ತು ನಿಬಂಧನೆಗಳ ಉಲ್ಲಂಘನೆಗಳಿಗೆ ಒಳಪಟ್ಟರೆ, ಅವರಿಗೆ ನೀಡಿರುವ ಪ್ರಮಾಣಪತ್ರಗಳು, ಟ್ರೋಫಿಗಳು/ ಪದಕಗಳು ಮತ್ತು ಬಹುಮಾನಗಳನ್ನು ಹಿಂದಿರುಗಿಸಬೇಕು
  • ಸ್ಪರ್ಧೆಗೆ ವೀಡಿಯೊ ಸಲ್ಲಿಸುವ ಮೂಲಕ, ಸ್ಪರ್ಧಿಯು ವೀಡಿಯೊ ಮೂಲ ಕೃತಿ ತನ್ನದೆಂದು ಎಲ್ಲಾ ಹಕ್ಕುಗಳ ಹೊಂದಿರುವ ಏಕೈಕ ಮಾಲೀಕನೆಂದು ದೃಡೀಕರಿಸಿದಂತಾಗುತ್ತದೆ.
  • ಈ ಮೊದಲು ವಿಡಿಯೂ ಎಲ್ಲೂ ಪ್ರಕಟಿಸಿರಬಾರದು, ಯಾವುದೇ ಕೃತಿಚೌರ್ಯ, ಎರವಲು, ನಕಲು ಅಥವಾ ಮಾಡಲು ಅನುಮತಿಸುವುದಿಲ್ಲ
  • ವೀಡಿಯೊ ಮತ್ತು ಅದರ ವಿಷಯದ ಹಕ್ಕುಸ್ವಾಮ್ಯವು ಸ್ಪರ್ಧೆಯ ಪ್ರವೇಶದಾರನು ಉಳಿಸಿಕೊಂಡಿದ್ದರೂ, ಸ್ಪರ್ಧೆಯನ್ನು ಪ್ರವೇಶಿಸುವ ಮೂಲಕ ಅಕಾಡೆಮಿಯು ವೀಡಿಯೊವನ್ನು ಆನ್ ಲೈನ್ ಮತ್ತು/ಅಥವಾ ಯಾವುದೇ ಸಾರ್ವಜನಿಕ ಯಾವುದೇ ನಿರ್ಬಂಧವಿಲ್ಲದೆ ಪ್ರದರ್ಶಿಸುವ ಹಕ್ಕನ್ನು ಒದಗಿಸಿದಂತಾಗುತ್ತದೆ
  • ವೀಡಿಯೊ ತಲುಪದಿರುವ, ತಡವಾಗಿ ಬಂದ, ಬೇರೆ ವಿಳಾಸಕ್ಕೆ ಸಲ್ಲಿಸಿದ ಅಥವಾ ಅಂಚೆಯ ವಿಳಂಬಗಳಿಗೆ ಅಕಾಡೆಮಿಯು ಜವಾಬ್ದಾರಿಯಲ್ಲ.
  • ತಾವು ಆಯ್ಕೆ ಮಾಡಿಕೊಂಡ ಚಿತ್ರೀಕರಣ ಸ್ಥಳದಲ್ಲಿ ಚಿತ್ರೀಕರಿಸಲು ಅನುಮತಿ ಪಡೆಯುವ ಜವಾಬ್ದಾರಿ ತಮ್ಮದೇ. ನಿಷೇಧಿಸಲ್ಪಟ್ಟ ಅಥವಾ ಕಾನೂನಿನಿಂದ ನಿರ್ಬಂಧಿಸಲ್ಪಟ್ಟಿರುವ ಸ್ಥಳಗಳಲ್ಲಿ ಚಿತ್ರೀಕರಿಸಿದ ವಿಡಯೋ ಸ್ಪರ್ಧೆಗೆ ಅನರ್ಹ
  • ಅಕಾಡೆಮಿಯು ಸ್ಪರ್ಧಿಯ ಹೆಸರನ್ನು ವೆಬ್ ಸೈಟ್ ನಲ್ಲಿ ಬಳಸಲು ಒಪ್ಪಬೇಕು ಮತ್ತು ಇದಕ್ಕೆ ಯಾವುದೇ ಸಂಭಾವನೆ ಇಲ್ಲರುವುದಿಲ್ಲ
  • ಅಕಾಡೆಮಿ ಮತ್ತು ಸಹ-ಸಂಘಟಕರು ಸ್ಪರ್ಧೆಯ ಸಮಯದಲ್ಲಿ ಎಲ್ಲಾ ವೀಡಿಯೊವನ್ನು ಪ್ರಚಾರ ಚಟುವಟಿಕೆಗಳಿಗಾಗಿ ಬಳಸುವ ಹಕ್ಕನ್ನು ಹೊಂದಿರುತ್ತಾರೆ
  • 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ತಂಡದ ಸ್ಪರ್ಧಿಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಪೋಷಕರು ಅಥವಾ ಕಾನೂನು ಬದ್ಧ ಪಾಲಕರಿಂದ ಅನುಮತಿಯನ್ನು ಪಡೆದಿರಬೇಕು

ಅರ್ಜಿ ನಮೂನೆ

word format
Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content