ಶರೀರಶಾಸ್ತ್ರ/ವೈದ್ಯಕೀಯ ನೊಬೆಲ್ ಪ್ರಶಸ್ತಿ 2023
1 min readಪ್ರೊ. ಕ್ಯಾತೇಲನ್ ಕರಿಕೊ &
ಪ್ರೊ. ದ್ರೂ ವೈಸ್ಮನ್
ಕೋವಿಡ್-19 ವಿರುದ್ಧ ಪರಿಣಾಮಕಾರಿ mRNA ಲಸಿಕೆಗಳ ಅಭಿವೃದ್ಧಿಗೆ ಅನುವು ಮಾಡಿಕೊಟ್ಟ ನ್ಯೂಕ್ಲಿಯೊಸೈಡ್ ಬೇಸ್ ಮಾರ್ಪಾಡುಗಳಿಗೆ ಸಂಬಂಧಿಸಿದ ಅವರ ಆವಿಷ್ಕಾರ
2020 ರ ಆರಂಭದಲ್ಲಿ ಬಂದೆರೆಗಿದ ಕೋವಿಡ್ -19 ಸಾಂಕ್ರಾಮಿಕದ ವಿರುದ್ಧ ಪರಿಣಾಮಕಾರಿ mRNA ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಪ್ರೊ. ಕ್ಯಾತೇಲನ್ ಕರಿಕೊ ಮತ್ತು ಪ್ರೊ. ದ್ರೂ ವೈಸ್ಮನ್ ರವರ ಆವಿಷ್ಕಾರವು ಸಹಕಾರಿಯಾಯಿತು. mRNA ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯೊಂದಿಗೆ ಹೇಗೆ ಸಂವಹನ ನಡೆಸುತ್ತದೆ ಎಂಬುದರ ಬಗ್ಗೆ ನಮ್ಮಲ್ಲಿರುವ ತಿಳುವಳಿಕೆಯನ್ನು ಬದಲಾಯಿಸಿದ ಇವರ ಅದ್ಭುತ ಸಂಶೋಧನೆಯಿಂದಾಗಿ ಮಾನವ ಉಳಿವಿಗೆ ಸವಾಲಾದ ಸಮಯದಲ್ಲಿ ಲಸಿಕೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಯಿತು.