ರಾಷ್ಟ್ರೀಯ ವಿಜ್ಞಾನ ಹಬ್ಬ

ಅರ್ಜಿ ಸಲ್ಲಿಸುವಿಕೆ ಆರಂಭ : ಪ್ರತಿ ವರ್ಷ ಸೆಪ್ಟೆಂಬರ್ ಅಥವಾ ಅಕ್ಟೋಬರ್

ಐ. ಆರ್. ಐ. ಎಸ್. ಪ್ರತಿ ವರ್ಷ ರಾಷ್ಟ್ರೀಯ ವಿಜ್ಞಾನ ಹಬ್ಬವನ್ನು ಇಂಟೆಲ್ ಟೆಕ್ನಾಲಜಿ ಇಂಡಿಯಾ ಪ್ರೈ.ಲಿ., ಮತ್ತು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಇಂಡೋ-ಅಮೇರಿಕಾ ವಿಜ್ಞಾನ ಮತ್ತು ತಂತ್ರಜ್ಞಾನ ವೇದಿಕೆ ಇವರ ಸಹಯೋಗದಲ್ಲಿ ನಡೆಸುತ್ತಿದೆ. ಈ ಕಾರ್ಯಕ್ರಮವು ಭಾರತದ ಯುವ ಸಂಶೋಧಕರಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕ ಸಂಶೋಧನೆಗೆ ಪ್ರೋತ್ಸಾಹ ಮತ್ತು ಪೋಷಣೆಯನ್ನು ನೀಡುತ್ತಿದೆ. ಈ ಕಾರ್ಯಕ್ರಮದಡಿಯಲ್ಲಿ ಉತ್ಕøಷ್ಟ ಪರಿಯೋಜನೆಯನ್ನು ಗುರುತಿಸಿ ಬಹುಮಾನ ನೀಡಲಾಗುತ್ತದೆ. ಅಲ್ಲದೆ, ವಿಜೇತರಿಗೆ ಅಮೇರಿಕಾದಲ್ಲಿ ಪ್ರತಿವರ್ಷ ನಡೆಯುವ ಜಗತ್ತಿನಲ್ಲೇ ಅತಿ ದೊಡ್ಡ ಕಾಲೇಜು ಪೂರ್ವ ಮಟ್ಟದ ವಿಜ್ಞಾನ ಮತ್ತು ಇಂಜಿನಿಯರಿಂಗ್ ಹಬ್ಬದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಕಲ್ಪಿಸಲಾಗುತ್ತದೆ.

ಈ ಅಂತಾರಾಷ್ಟ್ರೀಯ ಹಬ್ಬದಲ್ಲಿ 8 ರಿಂದ 12 ವರ್ಷ ವಯೋಮಿತಿಯ ವಿದ್ಯಾರ್ಥಿಗಳು ವೈಯಕ್ತಿಕವಾಗಿ ಅಥವಾ ಗರಿಷ್ಠ ಇಬ್ಬರನ್ನು ಹೊಂದಿರುವ ಗುಂಪುಗಳ ಮೂಲಕ ಭಾಗವಹಿಸಬಹುದಾಗಿದೆ. ಈ ಕಾರ್ಯಕ್ರಮದಲ್ಲಿ ಈ ಕೆಳಕಂಡ ಯಾವುದಾದರೊಂದು ಅಥವಾ ಹೆಚ್ಚಿನ ವಿಷಯ ವರ್ಗಗಳಲ್ಲಿ ಎಷ್ಟದರೂ ಪರಿಯೋಜನೆಗಳನ್ನು ಸಲ್ಲಿಸಬಹಾದಾಗಿದೆ:

 • ಪ್ರಾಣಿ ವಿಜ್ಞಾನ
 • ಸ್ವಭಾವ ಮತ್ತು ಸಮಾಜ ವಿಜ್ಞಾನ
 • ಜೀವರಸಾಯನ ಶಾಸ್ತ್ರ
 • ಜೀವಕೋಶ ಮತ್ತು ಅಣು ಜೀವಶಾಸ್ತ್ರ
 • ರಸಾಯನ ಶಾಸ್ತ್ರ
 • ಗಣಕ ವಿಜ್ಞಾನ
 • ಭೂಮಿ ಮತ್ತು ಗ್ರಹ ವಿಜ್ಞಾನ
 • ಇಂಜಿನಿಯರಿಂಗ್ : ಎಲೆಕ್ಟ್ರಿಕಲ್ ಮತ್ತು ಮ್ಯಾಕಾನಿಕಲ್
 • ಇಂಜಿನಿಯರಿಂಗ್ : ಮೆಟೀರಿಯಲ್ಸ್ ಮತ್ತು ಜೈವಿಕ ಇಂಜಿನಿಯರಿಂಗ್
 • ಶಕ್ತಿ ಮತ್ತು ಸಾರಿಗೆ
 • ಪರಿಸರ ನಿರ್ವಹಣೆ
 • ಪರಿಸರ ವಿಜ್ಞಾನ
 • ಗಣಿತ ವಿಜ್ಞಾನ
 • ಔಷಧಿ ಮತ್ತು ಆರೋಗ್ಯ ವಿಜ್ಞಾನಗಳು
 • ಸೂಕ್ಷ್ಮಜೀವಶಾಸ್ತ್ರ
 • ಭೌತಶಾಸ್ತ್ರ ಮತ್ತು ಖಗೋಳ ಶಾಸ್ತ್ರ
 • ಸಸ್ಯ ವಿಜ್ಞಾನ

ಅರ್ಜಿ : ಅರ್ಜಿಯನ್ನು ಆನ್‍ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶ

ಈ ಲಿಂಕ್ ಮೂಲಕ ಹೆಚ್ಚಿನ ವಿವರಗಳನ್ನು ಪಡೆಯಬಹುದಾಗಿದೆ.

ಇಂಡಿಯನ್ ಸೈನ್ಸ್ ಕಾಂಗ್ರೇಸ್

ISC logo

108ನೇ ಇಂಡಿಯನ್ ಸೈನ್ಸ್ ಕಾಂಗ್ರೇಸ್‍

ಜನವರಿ 3 ರಿಂದ 7, 2022 (ಕೋವಿಡ್ 19 ನಿಂದಾಗಿ ಮುಂದೂಡಲ್ಪಟ್ಟಿದೆ)

ಧ್ಯೇಯ ವಾಕ್ಯ: ಮಹಿಳಾ ಸಬಲೀಕರಣದೊಂದಿಗೆ ಸುಸ್ಥಿರ ಅಭಿವೃದ್ಧಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ

ಇಂಡಿಯನ್ ಸೈನ್ಸ್ ಕಾಂಗ್ರೇಸ್ ಅಸೋಸಿಯೇಷನ್‍ರ ವತಿಯಿಂದ 108ನೇ ಇಂಡಿಯನ್ ಸೈನ್ಸ್ ಕಾಂಗ್ರೇಸ್‍ನ್ನು 2022ರ ಜನವರಿ 3 ರಿಂದ 7ರವರೆಗೆ ಪುಣೆಯ ಸಿಂಬಯೋಸಿಸ್ ಅಂತರಾಷ್ಟ್ರೀಯ (ಡೀಮ್ಡ್) ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ನಡೆಸಲಾಗುತ್ತಿದೆ. ಈ ಸೈನ್ಸ್ ಕಾಂಗ್ರೇಸ್ ಒಂದು ಬೃಹತ್ ಪ್ರಮಾಣದ ಕಾರ್ಯಕ್ರಮವಾಗಿದ್ದು, ದೇಶ ವಿದೇಶಗಳಿಂದ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು, ನೋಬೆಲ್ ಪಾರಿತೋಷಕ ವಿಜೇತರು, ವಿಜ್ಞಾನಿಗಳು, ಭೋದನಾ ಸಿಬ್ಬಂದಿ, ಸಂಶೋಧಕರು ಮತ್ತು ಇತರೆ ಆಸಕ್ತರು ಭಾಗವಹಿಸುತ್ತಾರೆ. ಆಹ್ವಾನಿತ ಉಪನ್ಯಾಸಗಳು ಮತ್ತು ಆಯ್ದ ಸಂಶೋಧನಾ ಲೇಖನಗಳನ್ನು ವಿವಿಧ ತಾಂತ್ರಿಕ ಗೋಷ್ಠಿಗಳಾದ ಕೃಷಿ ಮತ್ತು ಅರಣ್ಯ, ಪ್ರಾಣಿ, ಪಶುವೈದ್ಯ ಮತ್ತು ಮೀನುಗಾರಿಕೆ ವಿಜ್ಞಾನ, ರಸಾಯನಿಕ ವಿಜ್ಞಾನ, ಭೂ ವಿಜ್ಞಾನ ವ್ಯವಸ್ಥೆ, ಇಂಜಿನಿಯರಿಂಗ್ ವಿಜ್ಞಾನ, ಪರಿಸರ ವಿಜ್ಞಾನ, ಪಿ.ಸಿ.ಬಿ. ವಸ್ತು ವಿಜ್ಞಾನ, ಗಣಿತ ವಿಜ್ಞಾನ, ವೈದ್ಯಕೀಯ ವಿಜ್ಞಾನ, ಜೀವ ತಂತ್ರಜ್ಞಾನ ಮತ್ತು ಸಸ್ಯ ವಿಜ್ಞಾನಗಳಲ್ಲಿ ಮಂಡಿಸಲಾಗುವುದು.

ಮಕ್ಕಳ ವಿಜ್ಞಾನ ಕಾಂಗ್ರೇಸ್

ಈ ಬೃಹತ್ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಒಂದು ಅವಕಾಶ ಕಲ್ಪಿಸಲು ಇಂಡಿಯನ್ ಸೈನ್ಸ್ ಕಾಂಗ್ರೇಸ್‍ನ ಭಾಗವಾಗಿ ಮಕ್ಕಳ ವಿಜ್ಞಾನ ಕಾಂಗ್ರೇಸ್‍ನ್ನು 2020ರ ಜನವರಿ 4 ರಿಂದ 6 ರವರೆಗೆ ಮೂರು ದಿನಗಳ ಕಾಲ ಈ ಕಾರ್ಯಕ್ರಮವನ್ನು ನಡೆಸಲಾಯಿತು. ಇದರಲ್ಲಿ ಭಾಗವಹಿಸಲು ಯಾವುದೇ ನೊಂದಾವಣೆ ಶುಲ್ಕವಿರುವುದಿಲ್ಲ ಹಾಗೂ ವಸತಿ ಮತ್ತು ಆಹಾರ ಕೂಪನ್ನುಗಳನ್ನು ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ಖ್ಯಾತ ವಿಜ್ಞಾನಿಗಳಿಂದ ಆಹ್ವಾನಿತ ಉಪನ್ಯಾಸಗಳು, ವಿಜ್ಞಾನ ವಸ್ತು ಪ್ರದರ್ಶನ, ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ ಮತ್ತು ಇತರೆ ಸ್ಪರ್ಧೇಗಳನ್ನು ಏರ್ಪಡಿಸಲಾಗುವುದು.

ಮಹಿಳಾ ವಿಜ್ಞಾನ ಕಾಂಗ್ರೇಸ್

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆಯನ್ನು ಪ್ರತಿಬಿಂಬಿಸಲು ಇಂಡಿಯನ್ ಸೈನ್ಸ್ ಕಾಂಗ್ರೇಸ್ ಕಾರ್ಯಕ್ರಮದ ಭಾಗವಾಗಿ ಮಹಿಳಾ ವಿಜ್ಞಾನ ಕಾಂಗ್ರೇಸನ್ನು ನಡೆಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ನೊಂದಾವಣಿ ಮೂಲಕ ಭಾಗವಹಿಸಬಹುದಾಗಿದ್ದು, ಯಾವುದೇ ಪ್ರತ್ಯೇಕ ನೋಂದಾವಣಿ ಶುಲ್ಕವಿರುವುದಿಲ್ಲ.

ಪ್ರಶಸ್ತಿಗಳು

ಐ.ಎಸ್.ಸಿ.ಎ. ಪ್ರಶಸ್ತಿ : ಭಾರತೀಯ ವಿಜ್ಞಾನಿಗಳನ್ನು ಗೌರವಿಸಲು ಮತ್ತು ಪ್ರೋತ್ಸಾಹಿಸಲು 40 ಕ್ಕೂ ಹೆಚ್ಚು ಪ್ರಶಸ್ತಿ/ಉಪನ್ಯಾಸ/ಶಿಷ್ಯವೇತನಗಳನ್ನು ನೀಡುತ್ತಿದ್ದಾರೆ.

ಯುವ ವಿಜ್ಞಾನಿ ಪ್ರಶಸ್ತಿ : ಐ.ಎಸ್.ಸಿ.ಎ. ಭಾರತೀಯ ಯುವ ವಿಜ್ಞಾನಿಗಳನ್ನು ಪ್ರೋತ್ಸಾಹಿಸಲು ವಿವಿಧ ವಿಭಾಗಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ನೀಡುತ್ತಿದೆ. ಈ ಪ್ರಶಸ್ತಿಯು ರೂ. 25,000/ಗಳ ನಗದು ಬಹುಮಾನ ಮತ್ತು ಅರ್ಹತಾ ಪ್ರಮಾಣ ಪತ್ರವನ್ನು ಹೊಂದಿದೆ.

ಅತ್ಯುತ್ತಮ ಪೋಸ್ಟರ್ ಪ್ರಶಸ್ತಿ : ಐ.ಎಸ್.ಸಿ.ಎ. ಪ್ರತಿ ವಿಬಾಗದಲ್ಲಿ ಎರಡು ಅತ್ಯುತ್ತಮ ಪೋಸ್ಟರ್ ಪ್ರಶಸ್ತಿಯನ್ನು ನೀಡುತ್ತಿದ್ದು, ಈ ಪ್ರಶಸ್ತಿಯು ರೂ. 5,000/ಗಳ ನಗದು ಬಹುಮಾನ ಮತ್ತು ಅರ್ಹತಾ ಪ್ರಮಾಣ ಪತ್ರವನ್ನು ಹೊಂದಿದೆ.

ಈ ಲಿಂಕ್ ಮೂಲಕ ಹೆಚ್ಚಿನ ವಿವರಗಳನ್ನು ಪಡೆಯಬಹುದಾಗಿದೆ

ಗೂಗಲ್ ವಿಜ್ಞಾನ ಹಬ್ಬ

Google Science Fair logo

ಅರ್ಜಿ ಸಲ್ಲಿಸುವಿಕೆ ಆರಂಭ : ಪ್ರತಿ ವರ್ಷ ಸೆಪ್ಟೆಂಬರ್ ಮಾಹೆಯಲ್ಲಿ

ಗೂಗಲ್ ವಿಜ್ಞಾನ ಹಬ್ಬ ಲೋಗೋ

ಅರ್ಜಿ ಸಲ್ಲಿಸುವಿಕೆ ಆರಂಭ : ಪ್ರತಿ ವರ್ಷ ಸೆಪ್ಟೆಂಬರ್ ಮಾಹೆಯಲ್ಲಿ

ಗೂಗಲ್ ವಿಜ್ಞಾನ ಹಬ್ಬವು ವಿಜ್ಞಾನ ಮತ್ತು ಇಂಜಿನಿಯರಿಂಗ್ ಪರಿಯೋಜನೆಯ ಆನ್‍ಲೈನ್ ಸ್ಪರ್ಧೆಯಾಗಿದ್ದು, ಜಗತ್ತಿನಾದ್ಯಂತ 13 ರಿಂದ 18 ವರ್ಷ ವಯೋಮಿತಿಯ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ವೈಚಾರಿಕತೆ ಮತ್ತು ಸಮಸ್ಯೆಗಳ ಪರಿಹಾರದ ಮೂಲಕ ತಮ್ಮ ಸುತ್ತಮುತ್ತಲಿನ ಪ್ರಪಂಚವನ್ನು ಬದಲಾಯಿಸುವತ್ತ ಮುಂದಾಗಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸುವುದು ಹೇಗೆ: ವೈಯಕ್ತಿಕವಾಗಿ ಅಥವಾ ಗರಿಷ್ಠ 3 ವಿದ್ಯಾರ್ಥಿಗಳನ್ನು ಒಳಗೊಂಡ ಒಂದು ಗುಂಪು ಆನ್‍ಲೈನ್ ಮೂಲಕ ಭಾಗವಹಿಸಬಹುದಾಗಿದೆ. ಸ್ಪರ್ಧಾಳುಗಳು ಈ ಕೆಳಕಂಡ ಯಾವುದಾದರೊಂದು ವಿಷಯಗಳನ್ನು ಮುಖ್ಯ ವಿಷಯಗಳನ್ನಾಗಿ ಹಾಗೂ ಅದರಡಿ ಗರಿಷ್ಠ ಎರಡು ಉಪ ವಿಷಯಗಳನ್ನು ಆಯ್ಕೆ ಮಾಡಿ ಕೊಂಡು ಪ್ರವೇಶಿಸಬಹುದಾಗಿದೆ.

 • ಸಸ್ಯ ಮತ್ತು ಪ್ರಾಣಿ
 • ಆಹಾರ ವಿಜ್ಞಾನ
 • ಭೂಮಿ ಮತ್ತು ಪರಿಸರ ವಿಜ್ಞಾನ
 • ಆವಿಷ್ಕಾರಗಳು ಮತ್ತು ನಾವೀನ್ಯತೆ
 • ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ಸ್
 • ರೋಬೋಟಿಕ್ಸ್
 • ಜೀವಶಾಸ್ತ್ರ
 • ನಡವಳಿಕೆ ಮತ್ತು ಸಮಾಜ ವಿಜ್ಞಾನಗಳು
 • ಶಕ್ತಿ ಮತ್ತು ಬಾಹ್ಯಾಕಾಶ
 • ಖಗೋಳ ಭೌತಶಾಸ್ತ್ರ
 • ಗಣಕ ವಿಜ್ಞಾನ ಮತ್ತು ಗಣಿತ

ಪ್ರಶಸ್ತಿಯ ವರ್ಗಗಳು

ಪ್ರಯೋಗ ವರ್ಗ

 • ಸೈಂಟಿಫಿಕ್ ಅಮೇರಿಕಾ ಸಂಶೋಧಕ ಪ್ರಶಸ್ತಿ
 • ನ್ಯಾಷನಲ್ ಜಿಯೋಗ್ರಾಫಿಕ್ ಪರಿಶೋಧಕ ಪ್ರಶಸ್ತಿ

ಇಂಜಿನಿಯರಿಂಗ್ ವರ್ಗ

 • ದಿ ಲಿಂಗೂ ಎಡುಕೇಶನ್ ಬಿಲ್ಡರ್ ಪ್ರಶಸ್ತಿ
 • ದಿ ವರ್ಜಿನ್ ಗ್ಯಾಲಾಕ್ಟಿಕ್ ಪ್ರ್ರಶಸ್ತಿ

ಮಹೋನ್ನತ ಪ್ರಶಸ್ತಿ

ಮೇಲಿನ ವರ್ಗಗಳಲ್ಲಿನ ಉತ್ತಮವಾದ ವಿಜೇತರನ್ನು ಮಹೊನ್ನತ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಮಹೋನ್ನತ ಪ್ರಶಸ್ತಿ ವಿಜೇತರಿಗೆ ಮೇಲ್ಕಂಡ ವರ್ಗಗಳಲ್ಲಿ ಪ್ರಶಸ್ತಿಯನ್ನು ನೀಡಲಾಗುವುದಿಲ್ಲ ಆದರೆ, ಮಹೊನ್ನತ ಪ್ರಶಸ್ತಿ ವಿಜೇತರು ಕಮ್ಯೂನಿಟಿ ಇಂಪಾಕ್ಟ್ ಪ್ರಶಸ್ತಿಗೆ ಸ್ಪರ್ಧಿಸಲು ಅರ್ಹರಾಗಿರುತ್ತಾರೆ.

ಇತರೆ ಪ್ರಶಸ್ತಿಗಳು

 • ಕಮ್ಯೂನಿಟಿ ಇಂಫಾಕ್ಟ್ ಪ್ರಶಸ್ತಿ
 • ಸ್ಪೂರ್ತಿದಾಯಕ ಶಿಕ್ಷಕ ಪ್ರಶಸ್ತಿ – ಈ ಪ್ರಶಸ್ತಿಯು ವಿಜ್ಞಾನ ಹಬ್ಬದ ಸ್ಪರ್ಧೆಗಳಿಗೆ ವಿದ್ಯಾರ್ಥಿಗಳನ್ನು ಭಾಗವಹಿಸಲು ಪ್ರೋತ್ಸಾಹಿಸಿ ಪ್ರಮುಖ ಪಾತ್ರ ವಹಿಸಿದ ಶಿಕ್ಷಕನಿಗೆ ನೀಡಲಾಗುವುದು.

ಈ ಲಿಂಕ್ ಗೂಗಲ್ ವಿಜ್ಞಾನ ಹಬ್ಬದ ಹೆಚ್ಚಿನ ವಿವರವನ್ನು ನೀಡುತ್ತದೆ

ಜೀನಿಯಸ್ ಒಲಂಪಿಯಡ್

ಕೋವಿಡೆ ಪಿಡುಗಿನಿಂದಾಗಿ 2020ರ ಕಾರ್ಯಕ್ರಮವನ್ನು ನಡೆಸಲಾಗುತ್ತಿಲ್ಲ

ಜೀನಿಯಸ್ ಒಲಂಪಿಯಡ್ ಒಂದು ಅಂತಾರಾಷ್ಟ್ರೀಯ ಮಟ್ಟದ ಪರಿಸರ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರೌಢಶಾಲಾ ಪರಿಯೋಜನಾ ಸ್ಪರ್ಧೆಯಾಗಿದೆ. ಇದರ ಸಂಸ್ಥಾಪಕರಾದ ಟೆರಾ ಸೈನ್ಸ್ ಅಂಡ್ ಎಜುಕೇಶನ್ ಸಂಸ್ಥೆಯು ನ್ಯೂಯಾರ್ಕ್‍ನ ಓಸ್‍ವೆಗೋ ನಲ್ಲಿರುವ ಸ್ಟೇಟ್ ಯುನಿರ್ವಸಿಟಿಯವರ ಸಹಯೋಗದೊಂದಿಗೆ ಆಯೋಜಿಸಿಕೊಂಡು ಬರುತ್ತಿದ್ದು, ಈ ಕೆಳಕಂಡ ವಿಷಯಗಳಲ್ಲಿ ಪರಿಸರಕ್ಕೆ ಕೇಂದ್ರೀಕೃತವಾಗಿರುವ ಪರಿಯೋಜನೆಗಳ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ :

 • ಜೀನಿಯಸ್ ವಿಜ್ಞಾನ
 • ಜೀನಿಯಸ್ ದೃಶ್ಯ ಮತ್ತು ಪ್ರದರ್ಶಕ ಕಲೆಗಳು
 • ಜೀನಿಯಸ್ ವ್ಯಾಪಾರ
 • ಜೀನಿಯಸ್ ಸೃಜನಾತ್ಮಕ ಬರವಣಿಗೆ
 • ಜೀನಿಯಸ್ ರೋಬೊಟಿಕ್ಸ್

ಜೀನಿಯಸ್ ವಿಜ್ಞಾನ

ಜೀನಿಯಸ್ ವಿಜ್ಞಾನ ಸ್ಪರ್ಧೆಯಲ್ಲಿ ಈ ಕೆಳಕಂಡ ಯಾವುದಾದರೊಂದು ವಿಭಾಗಗಳಲ್ಲಿ ವೈಜ್ಞಾನಿಕ ವಿಧಾನದ ಮೂಲಕ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುವ ಮಾರ್ಗವನ್ನು ವಿದ್ಯಾರ್ಥಿಗಳಿಂದ ಅಪೇಕ್ಷಿಸಲಾಗುತ್ತದೆ.

ವಿಜ್ಞಾನ | ಪರಿಸರ ಗುಣ ಮಟ್ಟ
ವಿಜ್ಞಾನ | ಜೀವಶಾಸ್ತ್ರ ಮತ್ತು ಜೀವವೈವಿಧ್ಯತೆ
ವಿಜ್ಞಾನ | ಸಂಪನ್ಮೂಲ ಮತ್ತು ಶಕ್ತಿ
ವಿಜ್ಞಾನ | ಮಾನವ ಜೀವಶಾಸ್ತ್ರ

ಪ್ರತಿಯೊಂದು ಜೀನಿಯಸ್ ಪರಿಯೋಜನೆಯನ್ನು ಗರಿಷ್ಠ ಇಬ್ಬರು ವಿದ್ಯಾರ್ಥಿಗಳು ತಯಾರಿಸಿ ಮಂಡಿಸಬಹುದಾಗಿದೆ. ಪರಿಯೋಜನೆಗಳನ್ನು ಮಾದರಿ ಮೂಲಕ ಮಂಡಿಸಿದರೆ ಒಳ್ಳೆಯದು, ಆದರೆ ಕಡ್ಡಾಯವಲ್ಲ. ಆದ್ಯಾಗ್ಯೂ, ದತ್ತಾಂಶ, ಗ್ರಾಫಿಕ್ಸ್, ಚಿತ್ರಗಳು ಮತ್ತು ರೇಖಾಚಿತ್ರಗಳನ್ನೊಳಗೊಂಡ ಸಂಶೋಧನಾ ಲೇಖನವನ್ನು ಅಗತ್ಯವಾಗಿ ಮಂಡಿಸಬೇಕಾಗುತ್ತದೆ.

ಈ ಲಿಂಕ್ ಜೀನಿಯಸ್ ವಿಜ್ಞಾನದ ಹೆಚ್ಚನ ವಿವರಗಳನ್ನು ನೀಡುತ್ತದೆ.

ಜೀನಿಯಸ್ ದೃಶ್ಯ ಮತ್ತು ಪ್ರದರ್ಶಕ ಕಲೆಗಳು

ಈ ಸ್ಪರ್ಧೆಯಲ್ಲಿ ಪರಿಸರ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಬಗ್ಗೆ ಜನಸಾಮಾನ್ಯರಲ್ಲಿನ ಕಾಳಜಿಗೆ ಒತ್ತು ಕೊಡುವ ಉದ್ದೇಶವನ್ನು ಹೊಂದಿದ್ದು, ಈ ಕೆಳಕಂಡ ಉಪ ವಿಷಯಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ವಿವರಗಳನ್ನು ಕೆಳಕಂಡ ಲಿಂಕ್ ಮೂಲಕ ಪಡೆಯಬಹುದಾಗಿದೆ

ಈ ಲಿಂಕ್ ಜೀನಿಯಸ್ ಕಲೆ ಬಗ್ಗೆ ಹೆಚ್ಚನ ವಿವರಗಳನ್ನು ನೀಡುತ್ತದೆ

ಈ ಲಿಂಕ್ ಜೀನಿಯಸ್ ಸಂಗೀತದ ಹೆಚ್ಚನ ವಿವರಗಳನ್ನು ನೀಡುತ್ತದೆ ಜೀನಿಯಸ್ ಸಂಗೀತ

ಜೀನಿಯಸ್ ಬ್ಯುಸಿನೆಸ್

ಪರಿಸರದ ಮೌಲ್ಯಗಳ ಬಗ್ಗೆ ವ್ಯಾಪಾರ ಮತ್ತಯ ವ್ಯವಹಾರ ಕ್ಷೇತ್ರದಲ್ಲಿ ಜಾಗೃತಿ ಮೂಡಿಸುವ ಹಾಗೂ ತಮ್ಮ ಕಾರ್ಯಾಚರಣೆಯ ಪ್ರದೇಶದಲ್ಲಿ ಪರಿಸರ ಮತ್ತು ಸಮಾಜದ ಬಗ್ಗೆ ಸಕಾರಾತ್ಮಕ ಉದ್ದೇಶವನ್ನಿಟ್ಟುಕೊಂಡು ಮಾರುಕಟ್ಟೆಗೆ ಹಸಿರು ಉತ್ಪನ್ನಗಳು ಮತ್ತು ಸೇವೆಗಳನ್ನು ತರುವ ಉದ್ದೇಶವನ್ನು, ಸಾಮಾಜಿಕ ಜವಾಬ್ದಾರಿಯುನ್ನು ಹೊಂದಿರುವ ಬ್ಯುಸಿನೆಸ್ ಯೋಜನೆಯನ್ನು ಈ ಸ್ಪರ್ದೆಯಲ್ಲಿ ಗುರುತಿಸಲಾಗುತ್ತದೆ. ಈ ಸ್ಪರ್ಧೆಯಲ್ಲಿ ಗರಿಷ್ಠ ಇಬ್ಬರು ವಿದ್ಯಾರ್ಥಿಗಳು ಬ್ಯುಸಿನೆಸ್ ಯೋಜನೆಯನ್ನು ತಯಾರಿಸಿ ಮಂಡಿಸಬಹುದಾಗಿದೆ.

ಈ ಲಿಂಕ್ ಜೀನಿಯಸ್ ಬ್ಯುಸಿನೆಸ್ ನ ಹೆಚ್ಚನ ವಿವರಗಳನ್ನು ನೀಡುತ್ತದೆ

ಜೀನಿಯಸ್ ಸೃಜನಾತ್ಮಕ ಬರವಣಿಗೆ

ಬರವಣಿಗೆಯ ಮೂಲಕ ಜಾಗತಿಕ ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಅವುಗಳ ಪರಿಹಾರಗಳ ಬಗ್ಗೆ ಕಾರ್ಯೋನ್ಮುಖರಾಗಲು ಜನಸಾಮಾನ್ಯರಿಗೆ ಕರೆ ನೀಡುವ ಯೋಜನೆಗಳನ್ನು ಪುರಸ್ಕರಿಸಲಾಗುವುದು. ಈ ಸ್ಪರ್ಧೆಯನ್ನು ಈ ಕೆಳಕಂಡ ಉಪ ವಿಭಾಗಗಳಲ್ಲ್ಲಿ ಒಬ್ಬ ವಿದ್ಯಾರ್ಥಿಯು ಒಂದು ಯೋಜನೆಯನ್ನು ಮಾತ್ರ ತಯಾರಿಸಿ ಸಲ್ಲಿಸಬಹುದಾಗಿದೆ:

 • ಸೃಜನಾತ್ಮಕ ಬರವಣಿಗೆ | ಕಿರುಕಥೆ
 • ಸೃಜನಾತ್ಮಕ ಬರವಣಿಗೆ | ಪ್ರಬಂಧ
 • ಸೃಜನಾತ್ಮಕ ಬರವಣಿಗೆ | ಕಾವ್ಯ

ಈ ಸೃಜನಾತ್ಮಕ ಬರವಣಿಗೆ ಸ್ಪರ್ಧೆಯಲ್ಲಿ ತಮ್ಮ ಬರವಣಿಗೆಯನ್ನು ಸಭಿಕರ ಮುಂದೆ ಓದಿ ಮಂಡಿಸಬೇಕಾಗುತ್ತದೆ. ಇದಕ್ಕೆ 5 ನಿಮಿಷಗಳ ಕಾಲಾವಕಾಶವಿದ್ದು, ನಂತರ ತೀರ್ಪುಗಾರರಿಂದ ಪ್ರತಿಕ್ರಿಯೆ ಮಂಡಿಸಲಾಗುವುದು.

ಈ ಲಿಂಕ್ ಜೀನಿಯಸ್ ವಿವಿಧ ಸ್ಪರ್ಧೆಗಳ ಹೆಚ್ಚನ ವಿವರಗಳನ್ನು ನೀಡುತ್ತದೆ

ಜೀನಿಯಸ್ ರೋಬೊಟಿಕ್ಸ್

ಜೀನಿಯಸ್ ಒಲಂಪಿಯಾಡ್‍ನಲ್ಲಿ ರೊಬೊಟಿಕ್ಸ್ ಬಗ್ಗೆ ಹೊಸ ವಿಭಾವನ್ನು 2017 ನೇ ಸಾಲಿನಲ್ಲಿ ಪ್ರಾರಂಭಿಸಲಾಗಿದೆ. ಈ ಸ್ಪರ್ಧೆಯನ್ನು ಕೆಳಕಂಡ ಉಪ ವಿಭಾಗಗಳಲ್ಲಿ ನಡೆಸಲಾಗುವುದು:

 • ರೋಬೊಟಿಕ್ಸ್ | ಮಾಸ್ಟರ್ ಗೇಮ್
 • ರೋಬೊಟಿಕ್ಸ್ | ಲೈನ್ ಫಾಲೋವರ್
 • ರೋಬೊಟಿಕ್ಸ್ | ಸುಮೋ

ಈ ಲಿಂಕ್ ಜಿನಿಯಸ್ಮಾ ರೋಬೋಟಿಕ್ಸ್ ನ ಮಾನದಂಡಗಳು ಮತ್ತು ನಿಯಮಗಳ ವಿವರಣೆಯನ್ನು ನೀಡುತ್ತದೆ.

ಹಕ್ಕುಗಳು 2019- ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ. Copyright (c) 2019. Karnataka Science & Technology Academy
ಈ ವೆಬ್‌ಸೈಟ್ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಗೆ ಸೇರಿದೆ. This is the official website of Karnataka Science and Technology Academy
Skip to content