ಅಕಾಡೆಮಿಯು ರಾಜ್ಯ/ರಾಷ್ಟ್ರ ಮಟ್ಟದ ವಾರ್ಷಿಕ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನಗಳನ್ನು ಆಯೋಜಿಸುತ್ತಿದ್ದು, ಆರ್ಥಿಕ ವರ್ಷ 2019-20ನೇ ಸಾಲಿನಲ್ಲಿ ವಿಭಾಗಕ್ಕೆ ಒಂದರಂತೆ 4 ಸಮ್ಮೇಳನಗಳನ್ನು ಆಯೋಜಿಸಲಾಗುತ್ತಿದೆ. ಎರಡು-ಮೂರು ದಿನಗಳ ಸಮ್ಮೇಳನದಲ್ಲಿ ಶ್ರೇಷ್ಠ ವಿಜಾನಿಗಳು, ತಂತ್ರಜ್ಞಾನಿಗಳು, ಉದ್ಯಮಿಗಳಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಮುಂಚುಣಿ ವಿಷಯಗಳಲ್ಲಿ ಆಹ್ವಾನಿತ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತಿದೆ. ಅಲ್ಲದೆ, ವಿದ್ಯಾರ್ಥಿಗಳು, ವಿಜ್ಞಾನ ಅಧ್ಯಾಪಕರು, ವಿಜ್ಞಾನ ಬರಹಗಾರರು/ ಸಂವಹನಕಾರರು, ಎನ್‍ಜಿಒ/ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಇತರೆ ಆಸಕ್ತರಿಗೆ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು.
ಉದ್ದೇಶಗಳು
- ವಿದ್ಯಾರ್ಥಿಗಳು, ಶಿಕ್ಷಕರು, ಅಧ್ಯಾಪಕರು, ಅಧಿಕಾರಿಗಳು ಹಾಗೂ ಆಸಕ್ತ ಜನಸಾಮಾನ್ಯರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳ ಬೆಳವಣಿಗೆಗಳ ಬಗ್ಗೆ ಅರಿವು ಮೂಡಿಸುವುದು
- ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಯನ್ನು ಪ್ರೋತ್ಸಾಹಿಸುವುದು
- ವಿಜ್ಞಾನ ಮತ್ತು ತಂತ್ರಜ್ಞಾನಗಳ ಬೆಳವಣಿಗೆಗಳನ್ನು ಜನಪ್ರಿಯಗೊಳಿಸುವುದು
- ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳಸುವುದು
ಆರ್ಥಿಕ ವರ್ಷ 2019-’20 ರಲ್ಲಿ ಹಮ್ಮಿಕೊಂಡ ಸಮ್ಮೇಳನಗಳು
ಸ್ಥಳ | ಕೇಂದ್ರ ವಿಷಯ | ದಿನಾಂಕ | ಸಹಯೋಗ ಸಂಸ್ಥೆ | ಫಲಾನುಭವಿಗಳು |
ಬೆಂಗಳೂರು | ಜೀವ, ರಸಾಯನ ಮತ್ತು ಆರೋಗ್ಯ ವಿಜ್ಞಾನಗಳು | 2019ರ ಅಕ್ಟೋಬರ್ 24-26 | ರಾಮಯ್ಯ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಬೆಂಗಳೂರು | 700 ಪ್ರತಿನಿಧಿಗಳು 300 ಸಂಶೋಧನಾ ಪೋಸ್ಟರ್‌ಗಳು |
ಧಾರವಾಡ | ಗಣಿತ ವಿಜ್ಞಾನ ಮತ್ತು ಅದರ ಅನ್ವಯಿಕಗಳು | 2019ರ ನವೆಂಬರ್ 07 ಮತ್ತು 08 | ಕರ್ನಾಟಕ ವಿಶ್ವವಿದ್ಯಾಲಯ | 600 ಪ್ರತಿನಿಧಿಗಳು 200 ಸಂಶೋಧನಾ ಪೋಸ್ಟರ್‌ಗಳು |
ಮೈಸೂರು | ರಸಾಯನ ವಿಜ್ಞಾನದಲ್ಲಿ ಹೊಸ ಆವಿಷ್ಕಾರಗಳು | 2020ರ ಜನವರಿ 30-31 | ಮೈಸೂರು ವಿಶ್ವವಿದ್ಯಾಲಯ | 500 ಪ್ರತಿನಿಧಿಗಳು 170 ಸಂಶೋಧನಾ ಪೋಸ್ಟರ್‌ಗಳು |
ಬೀದರ್ | ಭೌತಶಾಸ್ತ್ರ ಹಾಗೂ ಸಂಬಂಧಿತ ವಿಜ್ಞಾನ ವಿಷಯಗಳು | 2020ರ ಮಾರ್ಚ್ 11-13 | ಬಿ.ವಿ. ಭೂಮರಡ್ಡಿ ಪದವಿ ಮಹಾವಿದ್ಯಾಲಯ, ಬೀದರ್ | 500 ಪ್ರತಿನಿಧಿಗಳು 120 ಸಂಶೋಧನಾ ಪೋಸ್ಟರ್‌ಗಳು |