ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ 2021
ಪ್ರೊ. ಬೆಂಜಮಿನ್ ಲಿಸ್ಟ್ &
ಪ್ರೊ. ಡೇವಿಡ್ ಮ್ಯಾಕ್ ಮಿಲನ್
ಅಣು ನಿರ್ಮಾಣಕ್ಕೆ ನಿಖರವಾದ ಹೊಸ ಸಾಧನವಾದ “ಅಸಮ್ಮಿತಿ ಜೈವಿಕ ಪ್ರಚೋದಕದ ಅಭಿವೃದ್ಧಿಗಾಗಿ” ಜರ್ಮನಿಯ ಪ್ರೊ. ಬೆಂಜಮಿನ್ ಲಿಸ್ಟ್ ಮತ್ತು ಅಮೇರಿಕಾದ ಪ್ರೊ. ಡೇವಿಡ್ ಮ್ಯಾಕ್ ಮಿಲನ್ ರವರಿಗೆ ರಸಾಯನಶಾಸ್ತ್ರದಲ್ಲಿ ಜಂಟಿಯಾಗಿ 2021ರ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ. ಇದು ಔಷಧೀಯ ಸಂಶೋಧನೆಯ ಮೇಲೆ ಹೆಚ್ಚಿನ ಪರಿಣಾಮ ಬೀರಲಿದ್ದು, ಹಸಿರು ರಸಾಯನಶಾಸ್ತ್ರದ ಅಭಿವೃದ್ಧಿಗೆ ನಾಂದಿಯಾಗಲಿದೆ.