ಶರೀರಶಾಸ್ತ್ರ/ವೈದ್ಯಕೀಯ ನೊಬೆಲ್ ಪ್ರಶಸ್ತಿ 2021
ಪ್ರೊ. ಡೇವಿಡ್ ಜೂಲಿಯಸ್ &
ಪ್ರೊ. ಆರ್ಡೆಮ್ ಪಟಪೌಷಿಯನ್
2021ರ ಶರೀರಶಾಸ್ತ್ರ/ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ಅಮೇರಿಕಾದ ಪ್ರೊ. ಡೇವಿಡ್ ಜೂಲಿಯಸ್ ಮತ್ತು ಪ್ರೊ. ಆರ್ಡೆಮ್ ಪಟಪೌಷಿಯನ್ ರವರಿಗೆ ಜಂಟಿಯಾಗಿ ನೀಡಲಾಗುತ್ತಿದೆ. ನಮ್ಮ ಆಂತರಿಕ ಮತ್ತು ಬಾಹ್ಯ ಪರಿಸರದೊಂದಿಗೆ ಶಾಖ, ಶೀತ ಮತ್ತು ಯಾಂತ್ರಿಕ ಬಲದಂತಹ ಪ್ರಚೋದನೆಗಳನ್ನು ಅನುಭವಿಸುವ, ವಿಶ್ಲೇಸುವ ಮತ್ತು ಸಂವಹನ ಮಾಡುವ ನಮ್ಮ ಸಾಮರ್ಥ್ಯಕ್ಕೆ ಮೂಲಭೂತವಾದಂತಹ ಆಣ್ವಿಕ ಆಧಾರವನ್ನು ತಮ್ಮ ಸಂಶೋಧನೆಯ ಮೂಲಕ ವಿವರಿಸುವ ಮೂಲಕ ಪ್ರಕೃತಿಯ ರಹಸ್ಯಗಳಲ್ಲೊಂದನ್ನು ಬಿಚ್ಚಿಟ್ಟ ಕೀತ್ರಿ ಇವರಿಗೆ ಸಲ್ಲುತ್ತದೆ.