ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ತರೆಬೇತುದಾರರಿಗೆ ತರಬೇತಿ

ಉದ್ದೇಶಗಳು

 • ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದ ಮುಂಚುಣಿ ಕ್ಷೇತ್ರಗಳಲ್ಲಿ ಬೊದಕರಿಗೆ ಮೌಲ್ಯದಾರಿತ ತರಬೇತಿ ನೀಡುವ ಕೇಂದ್ರವಾಗಿ ಕಾರ್ಯನಿರ್ವಹಿಸುವುದು.
 • ವಿಜ್ಞಾನ ಮತ್ತು ತಂತ್ರಜ್ಞಾನದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಉನ್ನತ ತರಬೇತಿಯನ್ನು ಕಾಲೇಜು ಉಪನ್ಯಾಸಕರಿಗೆ ನೀಡುವುದು.
 • ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳಲ್ಲಿ ಪರಿಣಾಮಕಾರಿ ಬೊದನಾ ವ್ಯವಸ್ಥೆ ಮತ್ತು ಕಾರ್ಯತಂತ್ರವನ್ನು ವಿನ್ಯಾಸಗೊಳಿಸುವುದು ಹಾಗೂ ಬೋದಕರಲ್ಲಿ ಕೌಶಲ್ಯ ವೃದ್ಧಿ ಹಾಗೂ ಬದಲಾಗುತ್ತಿರುವ ಪಠ್ಯಕ್ರಮಗಳ ಅಗತ್ಯಗಳಿಗನುಸಾರ ವಿಶೇಷ ತರಬೇತಿಯನ್ನು ನೀಡುವುದು.
 • ಮಲ್ಟಿ ಮೀಡಿಯಾ ಕಲಿಕಾ ಸಾಮಾಗ್ರಿಗಳನ್ನು ತಯಾರಿಸಲು ಅನುವಾಗುವಂತಹ ಕಲಾತ್ಮಕ ಕೇಂದ್ರವನ್ನು ಅಭಿವೃದ್ದಿಪಡಿಸುವುದು.
 • ತರಬೇತಿ ಮತ್ತು ಪ್ರಯೋಗ ಕೈಪಿಡಿಗಳು, ವಿಡಿಯೋ ಟ್ಯುಟೋರಿಯಲ್, ಗಣಕಯಂತ್ರ ಆದಾರಿತ ಬೋದನಾ ಕಲಿಕಾ ಸಾಮಾಗಿಗಳನ್ನು ತಯಾರಿಸಿ ವಿತರಿಸುವುದು.
 • ಸಾರ್ವಜನಿಕ ಮತ್ತು ಉದ್ಯಮಿಗಳ ಜೊತೆ ಒಡಂಬಡಿಕೆ ಮಾಡಿಕೊಂಡು ಶಿಕ್ಷಣ ತರಬೇತಿ ಕಾರ್ಯಕ್ರಮಗಳನ್ನು ನಡೆಸುವುದು.

ಸೌಲಭ್ಯಗಳು

 • ಉದ್ದೇಶಿತ ಕೇಂದ್ರವು ತರಬೇತಿ ಕೊಠಡಿ, ಕಲಿಕಾ ಸಾಮಾಗ್ರಿ ತಯಾರಿಕಾ ಕೇಂದ್ರ, ಪ್ರಯೋಗಾಲಯ ಮತ್ತು ವಸತಿ ಗೃಹಗಳನ್ನು ಹೊಂದಿರುತ್ತದೆ.
  • ತರಬೇತಿ ಕೊಠಡಿ: ಯಲಹಂಕದಲ್ಲಿರುವ ಮುಖ್ಯ ಕಛೇರಿ ಕಟ್ಟಡದಲ್ಲಿ 120 ಆಸನಗಳುಳ್ಳ ತರಬೇತಿ ಕೊಠಡಿಯನ್ನು ನಿರ್ಮಿಸಲಾಗುತ್ತಿದೆ. ಈ ಕೊಠಡಿಗೆ ಎಲ್ಲಾ ರೀತಿಯ ಐ.ಸಿ.ಟಿ. ಸೌಲಭ್ಯಗಳನ್ನು ಅಳವಡಿಸಲಾಗುತ್ತಿದೆ.
  • ವಸತಿ ಗೃಹ : ಕಾಲೇಜುಗಳು/ವಿಶ್ವವಿದ್ಯಾನಿಲಯಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲು ಉತ್ತಮ ವಸತಿ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ.
  • ಪ್ರಯೋಗಾಲಯ: ಬೌತ ವಿಜ್ಞಾನ, ರಸಾಯನ ವಿಜ್ಞಾನ, ಜೀವವಿಜ್ಞಾನ, ಹವಾಮಾನ ಮತ್ತು ವಾತಾವರಣ ವಿಜ್ಞಾನ, ಜಿಯೊಇನ್ಪಾಮ್ರ್ಯಾಟಿಕ್ಸ್ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದ ಮುಂಚುಣಿ ವಿಷಯಗಳಲ್ಲಿ ತರಬೇತಿಯನ್ನು ನೀಡಲಾಗುವುದು.
Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content