ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ 2021
ಪ್ರೊ. ಸಿಯುಕುರೊ ಮನಬೆ ಮತ್ತು ಪ್ರೊ. ಕ್ಲಾಸ್ ಹ್ಯಾಸೆಲ್ಮನ್ಲಿ &
ಪ್ರೊ. ಜಾರ್ಜಿಯೊ ಪ್ಯಾರಿಸಿ
ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ 2021: ಅಮೆರಿಕಾದ ಸಿಯುಕುರೊ ಮನಬೆ ಮತ್ತು ಜರ್ಮನಿಯ ಕ್ಲಾಸ್ ಹ್ಯಾಸೆಲ್ಮನ್ ರವರಿಗೆ ಪ್ರಶಸ್ತಿಯ ಅರ್ಧ ಭಾಗವನ್ನು ಜಂಟಿಯಾಗಿ “ಭೂಮಿಯ ಹವಾಮಾನದ ಭೌತಿಕ ಮಾಡಲಿಂಗ್ ಹಾಗೂ ಹವಮಾನ ವ್ಯತ್ಯಾಸದ ಪ್ರಮಾಣೀಕರಣ ಮತ್ತು ಜಾಗತಿಕ ತಾಪಮಾನದ ಏರಿಕೆಯನ್ನು ಖಾತರಿಯಾಗಿ ಊಹಿಸಲು ಮಾಡಿದ ಸಂಶೋಧನೆಗಾಗಿ” ಮತ್ತು ಉಳಿದ ಅರ್ಧಭಾಗವನ್ನು ಇಟಲಿಯ ಜಾರ್ಜಿಯೊ ಪ್ಯಾರಿಸಿರವರಿಗೆ “ಪರಮಾಣುವಿನಿಂದ ಹಿಡಿದು ಗ್ರಹಗಳವರೆಗಿನ ಭೌತಿಕ ವಿಧಾನಗಳಲ್ಲಿನ ಅವ್ಯವಸ್ಥೆ ಮತ್ತು ಏರಿಳಿತಗಳ ಪರಸ್ಪರ ಸಂಬಂಧದ ಆವಿಷ್ಕಾರಕ್ಕಾಗಿ” ನೀಡಲಾಗಿದೆ