
ಅರ್ಜಿ ಸಲ್ಲಿಸಲು ದಿನಾಂಕ ಮುಗಿದಿದೆ
ಮುಂದಿನ ಪ್ರಕಟಣೆ: ಜೂನ್ 1, 2024
ಕನ್ನಡದಲ್ಲಿ ವಿಜ್ಞಾನ ವಿಷಯದ ಪುಸ್ತಕಗಳ ಬರವಣಿಗೆಯನ್ನು ಪ್ರೋತ್ಸಾಹಿಸಲು ಹಾಗೂ ಕನ್ನಡದಲ್ಲಿ ವಿಜ್ಞಾನದ ಪುಸ್ತಕಗಳು ಹೆಚ್ಚು ಹೆಚ್ಚಾಗಿ ಹೊರಬರಲು ಅನುವು ಮಾಡಿಕೊಡುವ ಸಲುವಾಗಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ 2009-10ನೇ ಸಾಲಿನಿಂದ ‘ಶ್ರೇಷ್ಠ ಪುಸ್ತಕ’ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯನ್ನು 2 ವರ್ಷಗಳಿಗೊಮ್ಮೆ ನೀಡಲಾಗುವುದು.
ಪ್ರಶಸ್ತಿ
- ಈ ಪ್ರಶಸ್ತಿಯನ್ನು ಎರಡು ವರ್ಷಗಳಿಗೊಮ್ಮೆ ಮೇಲ್ಕಂಡ ನಾಲ್ಕು ವಿಭಾಗಗಳಲ್ಲಿ ಆಯ್ದ ಲೇಖಕರಿಗೆ ನೀಡಲಾಗುವುದು. ಆಯ್ಕೆಯಾದ ಪ್ರತೀ ಲೇಖಕರಿಗೆ ರೂ. 25 ಸಾವಿರಗಳ ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುವುದು.
- ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿ ಅಕಾಡೆಮಿಯ ವೆಬ್‌ಸೈಟ್‌ನಲ್ಲಿ ಹಾಗೂ ದಿನಪತ್ರಕೆಯಲ್ಲಿ ಸುದ್ದಿಯಾಗಿ ಪ್ರಕಟಿಸಲಾಗುವುದು. ಆಸಕ್ತ ಲೇಖಕರು ವಿಜ್ಞಾನ, ತಂತ್ರಜ್ಞಾನ, ಕೃಷಿ ಮತ್ತು ವೈದ್ಯಕೀಯ ವಿಷಯದಲ್ಲಿ ಪ್ರಕಟಗೊಂಡ ಪುಸ್ತಕದ ನಾಲ್ಕು ಪ್ರತಿಗಳನ್ನು ನಿಗದಿತ ಅರ್ಜಿಯೊಂದಿಗೆ ಸಲ್ಲಿಸಬೇಕು.
- ತಜ್ಞರ ಸಮಿತಿಯು ಸಲ್ಲಿಕೆಯಾದ ಪುಸ್ತಕಗಳನ್ನು ಪರಿಶೀಲಿಸಿ, ಅತ್ಯುತ್ತಮ ಪುಸ್ತಕಗಳ ಪಟ್ಟಿಯನ್ನು ಕಾರ್ಯಕಾರಿ ಸಮಿತಿಯಲ್ಲಿ ಮಂಡಿಸಿ, ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಲೇಖಕರ ವಿವರವನ್ನು ಅಕಾಡೆಮಿಯ ವೆಬ್‌ಸೈಟ್‌ನಲ್ಲಿ ಹಾಗೂ ದಿನಪತ್ರಿಕೆಯಲ್ಲಿ ಸುದ್ದಿಯಾಗಿ ಪ್ರಕಟಿಸಲಾಗುವುದು ಹಾಗೂ ಪ್ರಶಸ್ತಿ ವಿತರಣೆಯನ್ನು ಅಕಾಡೆಮಿಯ ವಾರ್ಷಿಕ ಸಮ್ಮೇಳನದಲ್ಲಿ ವಿತರಿಸಲಾಗುವುದು.
ಅರ್ಹತೆ
- ಕಳೆದ ಎರಡು ವರ್ಷಗಳಲ್ಲಿ ಪ್ರಕಟಗೊಂಡ ಪುಸ್ತಕಗಳನ್ನು ಪ್ರಶಸ್ತಿಗೆ ಸಲ್ಲಿಸಬಹುದಾಗಿದೆ (ಜನವರಿ 01, 2021 ರಿಂದ ಡಿಸೆಂಬರ್ 31, 2022). ಯಾವುದೇ ತರಗತಿ, ಪದವಿ-ಪೂರ್ವ, ಪದವಿ, ಸ್ನಾತಕೋತ್ತರ ಪದವಿ ಅಥವಾ ಇನ್ನಿತರ ಯಾವುದೇ ಕೋರ್ಸ್‍ಗಳ ಪಠ್ಯ ಪುಸ್ತಕಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ.
- ಒಂದು ವಿಷಯದಲ್ಲಿ ಒಬ್ಬ ಲೇಖಕ ಗರಿಷ್ಠ ಎರಡು ಪುಸ್ತಕಗಳನ್ನು ಮಾತ್ರ ಸಲ್ಲಿಸಬಹುದಾಗಿದೆ.
- 2017ರಿಂದ ಈಚೆಗೆ ಅಕಾಡೆಮಿಯಿಂದ ಯಾವುದೇ ವಿಷಯದಲ್ಲಿ ಶ್ರೇಷ್ಠ ಲೇಖಕ ಪ್ರಶಸ್ತಿಯನ್ನು ಪಡೆದ ಲೇಖಕರನ್ನು ಪರಿಗಣಿಸಲಾಗುವುದಿಲ್ಲ. 2017ರಿಂದ ಹಿಂದೆ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಪಡೆದ ಲೇಖಕರು ಪುಸ್ತಕ ಸಲ್ಲಿಸಬಹುದು
- ಅಪರಾಧ ಹಿನ್ನೆಲೆಯಲ್ಲಿ ಆರೋಪಕ್ಕೊಳಪಟ್ಟಿರುವ/ವಿಚಾರಣೆಗೊಳಪಟ್ಟಿರುವ/ಕಾನೂನು ಕ್ರಮ ಎದುರಿಸುತ್ತಿರುವ/ಶಿಕ್ಷೆಗೊಳಪಟ್ಟಿರುವ ಅಥವಾ ಇನ್ನಿತರ ಸಮಾಜ ಬಾಹಿರ ಕ್ರಿಯೆಯಲ್ಲಿ ಪಾಲ್ಗೊಂಡಿರುವ ಲೇಖಕರು ಶ್ರೇಷ್ಠ ಲೇಖಕ ಪ್ರಶಸ್ತಿಗೆ ಅನರ್ಹರಾಗಿರುತ್ತಾರೆ. ಒಂದು ವೇಳೆ ಲೇಖಕರು ಪ್ರಶಸ್ತಿಗೆ ಆಯ್ಕೆಯಾಗಿ ಅಕಾಡೆಮಿಯು ಪ್ರಕಟಿಸಿದ ನಂತರ ಲೇಖಕರು ಮೇಲ್ಕಂಡ ಅನರ್ಹತೆ ಹೊಂದಿರುವ ಬಗ್ಗೆ ತಿಳಿದುಬಂದರೆ ಅಂತವರಿಗೆ ಪ್ರಶಸ್ತಿಯನ್ನು ನೀಡಲಾಗುವುದಿಲ್ಲ.
- ಈ ಪ್ರಶಸ್ತಿಯ ಪಾವಿತ್ರ್ಯತೆಯನ್ನು ಕಾಪಾಡುವಲ್ಲಿ ಲೇಖಕರು ಸಹಕರಿಸುವುದು. ಯಾವುದೇ ರೀತಿಯಾದ ಪ್ರಭಾವ/ಮಧ್ಯಸ್ತಿಕೆ ವಹಿಸುವ ಲೇಖಕರನ್ನು ಯಾವುದೇ ಮುನ್ಸೂಚನೆ ಇಲ್ಲದೆ ಅನರ್ಹಗೊಳಿಸಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ
ಲೇಖಕರು ನಿಗದಿತ ನಮೂನೆಯ ಅರ್ಜಿಯೊಂದಿಗೆ ಪುಸ್ತಕದ ನಾಲ್ಕು ಪ್ರತಿಗಳನ್ನು ಅಕಾಡೆಮಿಯ ವಿಳಾಸಕ್ಕೆ ಕಳುಹಿಸುವುದು.
ಈ ಲಿಂಕ್ ಮೂಲಕ ಅರ್ಜಿ ನಮೂನೆ ಪಡೆಯಬಹುದಾಗಿದೆ
ಮಾರ್ಗಸೂಚಿ
ಈ ಲಿಂಕ್ ಮೂಲಕ ಮಾರ್ಗಸೂಚಿಯನ್ನು ಪಡೆಯಬಹುದಾಗಿದೆ

