ವಿಜ್ಞಾನ ಲೋಕ ನೋಂದಣಿ ಅರ್ಜಿಯನ್ನು ಈ ಲಿಂಕ್ ಮೂಲಕ ಪಡೆಯಿರಿ
ವಿಜ್ಞಾನ ಲೋಕ ದ್ವೈಮಾಸಿಕ ಸಂಚಿಕೆಯನ್ನು 2007ರಿಂದ ಹೊರತರಲಾಗುತ್ತಿದೆ. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಕೃಷಿ, ಜೀವವೈವಿದ್ಯತೆ, ಬಾಹ್ಯಾಕಾಶ ಕ್ಷೇತ್ರಗಳಲ್ಲಾಗುತ್ತಿರುವ ಬೆಳವಣಿಗೆಗಳ ಬಗ್ಗೆ ಪರಿಣಿತರಿಂದ ಲೇಖನಗಳನ್ನು ಪ್ರಕಟಿಸಲಾಗುತ್ತಿದೆ. ಈ ಸಂಚಿಕೆಯನ್ನು ಪ್ರತಿ ವರ್ಷ ಜನವರಿ, ಮಾರ್ಚ್, ಮೇ, ಜುಲೈ, ಸೆಪ್ಟೆಂಬರ್ ಮತ್ತು ನವೆಂಬರ್ ಮಾಹೆಗಳಲ್ಲಿ ಹೊರತರಲಾಗುತ್ತಿದೆ. ಸಂಚಿಕೆಯನ್ನು ಸಾರ್ವಜನಿಕ ಗ್ರಂಥಾಲಯಗಳು, ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳು ಹಾಗೂ ವಿಶ್ವವಿದ್ಯಾನಿಲಯದ ಗ್ರಂಥಾಲಯಗಳಿಗೆ ಕಳುಹಿಸಿಕೊಡಲಾಗುತ್ತಿದೆ.
ವಿಜ್ಞಾನ ಕಿರು ಹೊತ್ತಿಗೆಗಳು
ಕನ್ನಡದಲ್ಲಿ ಆಕರ್ಷಕ ಕಿರು ಹೊತ್ತ್ತಿಗೆಗಳ ಮೂಲಕ ಶಾಲಾ ಮಕ್ಕಳಲ್ಲಿ ವಿಜ್ಞಾನದ ಕಲಿಕೆಯನ್ನು ವೃದ್ಧಿಗೊಳಿಸಲು ಮತ್ತು ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಲು ಹಾಗೂ ವಿಜ್ಞಾನ ಜ್ಞಾನಪ್ರಪಂಚವನ್ನು ವಿಸ್ತಾರಗೊಳಿಸಲು ಅನುವು ಮಾಡಿಕೊಡಲು 2017-18ನೇ ಸಾಲಿನಲ್ಲಿ 4 ಪುಸ್ತಕಗಳನ್ನು ಹೊರತರಲಾಗಿದೆ. ಪ್ರತಿ ಪುಸ್ತಕವು 40 ಪುಟಗಳನ್ನು ಹೊಂದಿದ್ದು, ಪ್ರೌಢಶಾಲಾ ಪಠ್ಯಕ್ಕೆ ಪೂರಕವಾಗಿ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಹಕಾರಿಯಾಗಲಿದೆ.