ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ನವೆಂಬರ್ 23: ಈ ದಿನ, ಅಂದು

1 min read

ನವೆಂಬರ್ 23: ಈ ದಿನ, ಅಂದು –  ಸರ್ ಜಗದೀಶ್ ಚಂದ್ರ ಬೋಸ್ ಸ್ಮರಣೆ

  • ನಿಧನ 23 ನವೆಂಬರ್ 1937; 78ನೇ ವಯಸ್ಸು (ಜನನ 30 ನವೆಂಬರ್ 1858)
  • ಜಗದೀಶ್ ಚಂದ್ರಬೋಸ್  ಒಬ್ಬ ಅಸಾಧಾರಣ ವ್ಯಕ್ತಿ- ಭೌತವಿಜ್ಞಾನಿ, ಸಸ್ಯಶಾಸ್ತ್ರಜ್ಞ ಮತ್ತು ಉತ್ಕೃಷ್ಟ ರೇಡಿಯೋ ವಿಜ್ಞಾನಿ
  • 1917ರಲ್ಲಿ ಬೋಸ್ ಇನ್ ಸ್ಟಿಟ್ಯೂಟ್ ಅನ್ನು ಪ್ರಾರಂಭಿಸಿದರು.
  • ವೈರ್ ಲೆಸ್ ಟೆಲಿಗ್ರಾಫಿ ಯನ್ನು ಕಂಡುಹಿಡಿದು 1895ರಲ್ಲಿ ಮೊಟ್ಟಮೊದಲ ಬಾರಿಗೆ ಅದರ ಪ್ರತ್ಯಕ್ಷಿಕೆಯನ್ನು ಪ್ರದರ್ಶಿಸಿದರು. ಆದರೆ ಅವರು ಪೇಟೆಂಟ್ ಗಾಗಿ ಅರ್ಜಿ ಸಲ್ಲಿಸಲಿಲ್ಲ.
  • ಜೀವಿಗಳಿಂದ ಸೂಕ್ಷ್ಮ ಪ್ರತಿಕ್ರಿಯೆಗಳನ್ನು ಪತ್ತೆ ಹಚ್ಚುವುದಕ್ಕಾಗಿ ಅವರು ಅತ್ಯಂತ ಸೂಕ್ಷ್ಮ ವಾದ ಉಪಕರಣಗಳನ್ನು ಕಂಡುಹಿಡಿದರು.
  • ಅವರ ಗೆಲೆನಾ ಡಿಟೆಕ್ಟರ್ ಮೊದಲ ಸೆಮಿಕಂಡಕ್ಟರ್ ಸಾಧನ ಮತ್ತು ಫೋಟೋವೋಲ್ಟಾಯಿಕ್ ಸೆಲ್ ಆಗಿತ್ತು.
  • ನೊಬೆಲ್ ಪ್ರಶಸ್ತಿ ಪುರಸ್ಕೃತ ಸರ್ ನೆವಿಲ್ ಮೊಟ್ ಅವರು “ಜೆ.ಸಿ. ಬೋಸ್ ರವರು ಅವರ ಕಾಲಕ್ಕಿಂತ ಕನಿಷ್ಠ 60 ವರ್ಷ ಮುಂದಿದ್ದಾರೆ” ಎಂದು ಅಭಿಪ್ರಾಯ ಪಟ್ಟಿದ್ದರು
  • ಆ ದಿನಗಳಲ್ಲಿಯೇ P-ಟೈಪ್ ಮತ್ತು N-ಟೈಪ್ ಸೆಮಿಕಂಡಕ್ಟರ್ ಗಳ ಅಸ್ತಿತ್ವವನ್ನು ನಿರೀಕ್ಷಿಸಿದ್ದರು
  • ಇಂದಿನ ಮೈಕ್ರೋವೇವ್ ಎಂಜಿನಿಯರಿಂಗ್ ಮತ್ತು ಖಗೋಳಶಾಸ್ತ್ರದ ಅವಿಭಾಜ್ಯ ಅಂಗವಾಗಿರುವ ಅತ್ಯಂತ ಪ್ರಾಚೀನ ವೇವ್ ಗೈಡ್ ಮತ್ತು ಹಾರ್ನ್ ಆಂಟೆನಾವನ್ನು ಸಹ ವಿನ್ಯಾಸಗೊಳಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content