ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಕನ್ನಡದಲ್ಲಿ ವಿಜ್ಞಾನ ಸಂವಹನಕ್ಕೆ ಕೆಎಸ್‌ಟಿಎ ಜೀವಮಾನ ಸಾಧನೆ ಪ್ರಶಸ್ತಿ

  • ಕನ್ನಡದಲ್ಲಿ ಸ್ಟೀಮ್ ಅನ್ನು ಜನಪ್ರಿಯಗೊಳಿಸುವ ಅವರ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಿ ಕನ್ನಡದಲ್ಲಿ ಸಾಧನೆ ಮಾಡಿರುವ ಒಬ್ಬ ಹಿರಿಯ ವಿಜ್ಞಾನ ಸಂವಹನಕಾರರನ್ನು ಕೆಎಸ್‌ಟಿಎ ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನದಲ್ಲಿ ಕನ್ನಡದಲ್ಲಿ ಸ್ಟೀಮ್ ಸಂವಹನಕ್ಕಾಗಿ ಜೀವಮಾನ ಸಾಧನೆ ಪ್ರಶಸ್ತಿಯೊಂದಿಗೆ ಗೌರವಿಸಲಾಗುವುದು. ಆಯ್ಕೆಯಾದ ಪುರಸ್ಕೃತರನ್ನು ಕೆಎಸ್‌ಟಿಎ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅಥವಾ ಇನ್ನಿತರ ಪ್ರಮುಖ ಕಾರ್ಯಕ್ರಮದಲ್ಲಿ ಚಿನ್ನದ ಪದಕ, ರೂ. 1.00 ಲಕ್ಷ ನಗದು ಮತ್ತು ಪ್ರಶಸ್ತಿ ಪತ್ರ ಹಾಗೂ ಸನ್ಮಾನದೊಂದಿಗೆ ಗೌರವಿಸಲಾಗುವುದು.
  • ಪ್ರಶಸ್ತಿ ಪುರಸ್ಕೃತರನ್ನು ಕೆಎಸ್‌ಟಿಎ ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನಕ್ಕೆ ಆಹ್ವಾನಿಸಲಾಗುತ್ತದೆ ಮತ್ತು ಅಗತ್ಯವಿರುವಂತೆ ಇಕಾನಮಿ ವರ್ಗದ ದೇಶೀಯ ವಿಮಾನ ಪ್ರಯಾಣ ದರ ಅಥವಾ ಪ್ರಥಮ ದರ್ಜೆ ರೈಲು ಪ್ರಯಾಣ ದರವನ್ನು ಮತ್ತು ಸಮ್ಮೇಳನದ ಸಂದರ್ಭದಲ್ಲಿ ವಸತಿ ಸೌಲಭ್ಯವನ್ನು ಒದಗಿಸಲಾಗುತ್ತದೆ. ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರ ಭಾಷಣವನ್ನೂ ಆಯೋಜಿಸಲಾಗುತ್ತದೆ.

ಅರ್ಹತೆ

  • ನಮನಿರ್ದೇಶಿತರು ಹಿರಿಯ ಸಂವಹನಕಾರ / ಪತ್ರಕರ್ತ / ಸಂಪಾದಕ / ವಿಜ್ಞಾನಿ / ತಂತ್ರಜ್ಞರಾಗಿರಬೇಕು, ಅವರು 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು ಮತ್ತು ಕನ್ನಡದಲ್ಲಿ ಸ್ಟೀಮ್ ಸಂವಹನ ಕ್ಷೇತ್ರದಲ್ಲಿ ಅವರ ವೃತ್ತಿ/ಅಥವಾ ಸೇವೆ/ಜೀವಮಾನದಾದ್ಯಂತ ಕನಿಷ್ಠ 20 ವರ್ಷಗಳ ಅವಧಿಯವರೆಗೆ ಗಮನಾರ್ಹವಾದ ಮೂಲ ಕೊಡುಗೆಗಳನ್ನು ನೀಡಿರಬೇಕು.
  • ನಾಮನಿರ್ದೇಶಿತರು ಜನ್ಮ ಅಥವಾ ನಿವಾಸ ಅಥವಾ ಸೇವೆಯಿಂದಾಗಿ ಕರ್ನಾಟಕ ಮೂಲದವರಾಗಿರಬೇಕು. ಈ ಪ್ರಶಸ್ತಿಗೆ ನಾಮನಿರ್ದೇಶನಗೊಳ್ಳುವ ಸಮಯದಲ್ಲಿ ಅವರು ಭಾರತ ಅಥವಾ ವಿದೇಶದಲ್ಲಿ ಬೇರೆಲ್ಲಿಯಾದರೂ ವಾಸಿಸುತ್ತಿರಬಹುದು.

ನಾಮನಿರ್ದೇಶನ / ಪ್ರಶಸ್ತಿಗೆ ಮಾನದಂಡ

  • ವೈಜ್ಞಾನಿಕ ಮನೋಧರ್ಮ / ತಿಳಿವಳಿಕೆ / ತರಬೇತಿ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಅನ್ವಯಗಳನ್ನು ಉತ್ತೇಜಿಸಲು, ಇತರ ಭಾಷೆಗಳಿಂದ ಕನ್ನಡಕ್ಕೆ ಸ್ಟೀಮ್‌ನ ಯಾವುದೇ ಶಾಖೆಗೆ ಸಂಬಂಧಿಸಿದ ಪ್ರಕಟಿತ ಕೃತಿಗಳು ಮತ್ತು / ಅಥವಾ ಅನುವಾದಿತ ಪ್ರಕಟಣೆಗಳಿಂದ ಪ್ರಮಾಣೀಕೃತವಾದಂತೆ, ನಾಮನಿರ್ದೇಶಿತರು ಕನ್ನಡದಲ್ಲಿ ಸ್ಟೀಮ್ ಕ್ಷೇತ್ರಕ್ಕೆ ಸಂಬಂಧಪಟ್ಟ ವಿಜ್ಞಾನ / ತಂತ್ರಜ್ಞಾನ ಸಂವಹನದಲ್ಲಿ ಗಮನಾರ್ಹ ಮತ್ತು ಸ್ವಂತಿಕೆಯುಳ್ಳ ಸ್ಥಿರ ದಾಖಲೆಯನ್ನು ಪ್ರದರ್ಶಿಸಿರಬೇಕು
  • ಡಿಜಿಟಲ್ / ಆಡಿಯೊ-ವಿಷುಯಲ್ ಮತ್ತು ಅನೌಪಚಾರಿಕ ಮಾಧ್ಯಮಗಳ ಮೂಲಕ ಕನ್ನಡದಲ್ಲಿ ಮಾಡಲಾದ ಅರ್ಹವಾದ ಸಂವಹನಗಳನ್ನು ಕೂಡ ಗುರುತಿಸಲಾಗುವುದು ಮತ್ತು ಪ್ರಶಸ್ತಿಗಾಗಿ ಪ್ರೋತ್ಸಾಹಿಸಲಾಗುವುದು
  • ಪ್ರಶಸ್ತಿಯನ್ನು ಒಬ್ಬ ವ್ಯಕ್ತಿಗೆ ಒಮ್ಮೆ ಮಾತ್ರ ನೀಡಲಾಗುತ್ತದೆ ಮತ್ತು ಮರಣೋತ್ತರ ಪ್ರಶಸ್ತಿಗಳನ್ನು ಪರಿಗಣಿಸಲಾಗುವುದಿಲ್ಲ
  • ಕರ್ನಾಟಕ ಸರ್ಕಾರ ಅಥವಾ ಕೆಎಸ್‌ಟಿಎಯಂತಹುದೇ ಉದ್ದೇಶಗಳನ್ನು ಹೊಂದಿರುವ ಮತ್ತೊಂದು ಸಂಸ್ಥೆ ಈಗಾಗಲೇ ಸ್ಥಾಪಿಸಿರುವ ಮತ್ತು ಕರ್ನಾಟಕ ಸರ್ಕಾರದಿಂದ ಧನಸಹಾಯ ಪಡೆದಿರುವ ಇಂತಹುದೇ ಜೀವಮಾನದ ಪ್ರಶಸ್ತಿಯನ್ನು ಈಗಾಗಲೇ ಪಡೆದವರಿಗೆ ಈ ಪ್ರಶಸ್ತಿಯನ್ನು ಸಾಮಾನ್ಯವಾಗಿ ನೀಡಲಾಗುವುದಿಲ್ಲ.
  • ನಾಮನಿರ್ದೇಶನಗಳ ಅರ್ಜಿಯನ್ನು ನಿಗಧಿತ ನಮೂನೆಯಲ್ಲಿ ಪ್ರಕಟಣೆಯ ದಿನಾಂಕದಿಂದ ಒಂದು ತಿಂಗಳ ಅವಧಿಯೊಳಗೆ ಸಲ್ಲಿಸಬೇಕು

ನಾಮನಿರ್ದೇಶನ ಅರ್ಜಿ ನಮೂನೆ

ನಾಮನಿರ್ದೇಶನದ ಅವಕಾಶ ಮುಗಿದಿದೆ

ಮುಂದಿನ ನಾಮನಿರ್ದೇಶನದ ಆಹ್ವಾನ 2024ರ ಏಪ್ರಿಲ್ ಮಾಹೆಯಲ್ಲಿ ನೀಡಲಾಗುವುದು

ಕನ್ನಡದಲ್ಲಿ ವಿಜ್ಞಾನ ಸಂವಹನ ಕೆಎಸ್‌ಟಿಎ ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತರು

ಪ್ರೊ.ಜೆ.ಆರ್.ಲಕ್ಷ್ಮಣ ರಾವ್

2017

ಡಾ.ಎಚ್. ಆರ್. ಕೃಷ್ಣಮೂರ್ತಿ

2018

ಶ್ರೀ ನಾಗೇಶ್ ಹೆಗಡೆ

2019

ಡಾ. ಸಿ. ಆರ್. ಚಂದ್ರಶೇಖರ್

2020

ಡಾ. ಬಿ. ಎಂ. ಹೆಗಡೆ

2021

ಡಾ. ಟಿ. ಆರ್. ಅನಂತರಾಮು

2021

ಡಾ. ಕೆ. ವಿ. ರಾವ್

2022

ಡಾ. ನ. ಸೋಮೇಶ್ವರ

2022

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content