ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ನವೆಂಬರ್ 12: ಈ ದಿನ, ಅಂದು

ನವೆಂಬರ್ 12: ಡಾ. ಸಲೀಂ ಅಲಿ ರವರ ಜನ್ಮದಿನ

  • ಸರ್ವಕಾಲಿಕ ಶ್ರೇಷ್ಠ ಪಕ್ಷಿ ವಿಜ್ಞಾನಿ ಮತ್ತು ಪ್ರಕೃತಿ ಶಾಸ್ತ್ರಜ್ಞ ಸಲೀಮ್ ಮೊಯಿಸುದ್ದೀನ್ ಅಬ್ದುಲ್ ಅಲಿ ರವರು 1896 ರ ನವೆಂಬರ್ 12 ರಂದು ಮುಂಬೈನಲ್ಲಿ ಜನಿಸಿದರು.
  • ಭಾರತದಲ್ಲಿ ವ್ಯವಸ್ಥಿತ ಪಕ್ಷಿ ಸಮೀಕ್ಷೆ ನಡೆಸಿದ ಮೊದಲ ಭಾರತೀಯ ಮತ್ತು “ಭಾರತದ ಪಕ್ಷಿ ಮನುಷ್ಯ” ಎಂದು ಇವರು ಪ್ರಸಿದ್ಧಿ
  • 1947ರ ನಂತರ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಪುನರುಜ್ಜೀವನಕ್ಕೆ ಪ್ರಮುಖ ಕಾರಣಕರ್ತರು
  • ಗೀಜಗ ಹಕ್ಕಿಯ ಸ್ವಭಾವ ಮತ್ತು ಚಟುವಟಿಕೆಗಳ ಬಗ್ಗೆ 1930ರಲ್ಲಿ ಅವರು ಒಂದು ಸಂಶೋಧನಾ ಪ್ರಬಂಧವನ್ನು ಪ್ರಕಟಿಸಿದರು. ಈ ಲೇಖನವು ಅವರಿಗೆ ಬಹಳ ಪ್ರಸಿದ್ಧಿಯನ್ನು ತಂದುಕೊಟ್ಟಿತು ಮತ್ತು ಪಕ್ಷಿಶಾಸ್ತ್ರ ಕ್ಷೇತ್ರದಲ್ಲಿ ಇವರ ಹೆಸರು ನೆಲಸುವಂತೆ ಮಾಡಿತು.
  • ಇವರು 1941ರಲ್ಲಿ ಪ್ರಕಟಿಸಿದ “ದಿ ಬುಕ್ ಆಫ್ ಇಂಡಿಯನ್ ಬರ್ಡ್ಸ್” ಈಗಲೂ ಯುವ ಪಕ್ಷಿ ವಿಜ್ಞಾನಿಗಳಿಗೆ ಬೈಬಲ್ ನಂತಿದೆ.
  • ಇವರು ವಿಶ್ವಪ್ರಸಿದ್ಧ ಪಕ್ಷಿ ವಿಜ್ಞಾನಿ ಎಸ್. ದಿಲ್ಲೋನ್ ರಿಪ್ಲೆ ರವರೊಡನೆ ‘ಹ್ಯಾಂಡ್ ಬುಕ್ ಆಫ್ ದಿ ಬರ್ಡ್ಸ್ ಆಫ್ ಇಂಡಿಯಾ ಅಂಡ್ ಪಾಕಿಸ್ತಾನ್’ ಎಂಬ ಪುಸ್ತಕವನ್ನು ಪ್ರಕಟಿಸಿದರು. ಅಲ್ಲದೆ, 1967ರಲ್ಲಿ “ಕಾಮನ್ ಬರ್ಡ್ಸ್ ” ಮತ್ತು 1985ರಲ್ಲಿ “ದಿ ಫಾಲ್ ಆಫ್ ಸ್ಪ್ಯಾರೋ” ಆತ್ಮಚರಿತ್ರೆ ಪುಸ್ತಕಗಳನ್ನು ಸಹ ಪ್ರಕಟಿಸಿದ್ದಾರೆ.   
  • ಭಾರತ ಸರ್ಕಾರವು ಇವರಿಗೆ 1958ರಲ್ಲಿ ಪದ್ಮಭೂಷಣ ಮತ್ತು 1976ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ
  • ಸ್ವೀಡನ್, ಭಾರತ, ಚೀನಾ, ಅಮೆರಿಕ ಮತ್ತು ರಷ್ಯಾ ದೇಶಗಳ ಪಕ್ಷಿ ವಿಜ್ಞಾನಿಗಳ ಒಂದು ಅಂತಾರಾಷ್ಟ್ರೀಯ ತಂಡ ಹೊಸದಾಗಿ ಪತ್ತೆಯಾದ ಪಕ್ಷಿ ಪ್ರಭೇದವನ್ನು ಇವರ ಹೆಸರಿನಲ್ಲಿ ಝೂಥ್ರಿಯಾ ಸಲಿಮಾಲಿ ಎಂದು ನಾಮಕರಣ ಮಾಡಿದೆ

ಝೂಥ್ರಿಯಾ ಸಲಿಮಾಲಿ (ಹಿಮಾಲಯನ್ ಥ್ರಷ್)

  • ಈಶಾನ್ಯ ಭಾರತ ಮತ್ತು ಅಕ್ಕಪಕ್ಕದ ಚೀನಾ ಪ್ರದೇಶಗಳಲ್ಲಿ ಕಂಡುಬರುತ್ತದೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content