ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ

logo
ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ ಲೋಗೋ

ಜನಸಾಮನ್ಯರಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರ/ನಾವೀನ್ಯತೆಗಳನ್ನು ಪ್ರಸರಿಸುವ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಅಕಾಡೆಮಿಯು ವಾರ್ಷಿಕ ವಿಜ್ಞಾನ ಸಮ್ಮೇಳನವನ್ನು (ವಿಜ್ಞಾನ ಸಮಾವೇಶ) ಕನ್ನಡದಲ್ಲಿ ಆಯೋಜಿಸಲಾಗುತ್ತಿದೆ. ಕೇಂದ್ರ ವಿಷಯ, ಉಪ ವಿಷಯಗಳು, ಸ್ಥಳ ಮತ್ತು ಸಂಪನ್ಮೂಲ ತಜ್ಞರನ್ನು ಕಾರ್ಯಕಾರಿ ಸಮಿತಿಯು ನಿರ್ಧರಿಸುತ್ತದೆ.

ಉದ್ದೇಶಗಳು

  • ಮಾನವ ಕಲ್ಯಾಣಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನಗಳ ಕೊಡುಗೆಗಳ ಬಗ್ಗೆ ಸಮಾಜದ ವಿವಿಧ ಸ್ತರಗಳಲ್ಲಿ ಜಾಗೃತಿ ಮೂಡಿಸುವುದು
  • ಸರ್ಕಾರದ ವಿವಿಧ ವಿಭಾಗಗಳ ಅಧಿಕಾರಿಗಳು, ಬೋಧಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಗಳಲ್ಲಿ ಆಸಕ್ತಿ ಮೂಡಿಸುವುದು
  • ಆವಿಷ್ಕಾರ/ನಾವಿನ್ಯತೆಗಳು ಮತ್ತು ವೈಜ್ಞಾನಿಕ ಪ್ರಗತಿಯ ತಿಳುವಳಿಕೆಯನ್ನು ಬೆಳೆಸುವುದು
  • ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಆರ್ಥಿಕತೆಯ ವಿವಿಧ ಕ್ಷೇತ್ರಗಳಲ್ಲಿ ಸುಧಾರಿತ ತಾಂತ್ರಿಕ ಸಾಧನಗಳ ಬಳಕೆಯನ್ನು ಜನಪ್ರಿಯಗೊಳಿಸುವುದು
  • ರಾಜ್ಯದ ಮತ್ತು ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಗಳಿಗೆ ಖ್ಯಾತ ವಿಜ್ಞಾನಿಗಳು ನೀಡಿರುವ ಕೊಡುಗೆಯನ್ನು ಗುರುತಿಸುವುದು ಮತ್ತು ಸನ್ಮಾನಿಸುವುದು

ಕಾರ್ಯಕ್ರಮ

  • ಎರಡು ದಿನಗಳ ಸಮ್ಮೇಳನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಮುಂಚುಣಿ ವಿಷಯಗಳಲ್ಲಿ ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳಿಂದ ಕನ್ನಡದಲ್ಲಿ ಪಾಂಡಿತ್ಯಪೂರ್ಣ ಉಪನ್ಯಾಸಗಳನ್ನು ಏರ್ಪಡಿಸುವುದರ ಮೂಲಕ ಸಮ್ಮೇಳನದ ಪ್ರತಿನಿಧಿಗಳ ಜ್ಞಾನ ಪರದಿಯನ್ನು ವಿಸ್ತರಿಸುವುದು.
  • ರಾಜ್ಯದ ವಿಜ್ಞಾನಿಗಳು ಮತ್ತು ವಿಜ್ಞಾನ ಸಂವಹನಕಾರ ಒಳಗೊಂಡು ಕನ್ನಡದಲ್ಲಿ ಸಂವಹನಕ್ಕೆ ಒತ್ತು. ವಿವಿಧ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ವಿದ್ಯಾರ್ಥಿಗಳು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳು ಮತ್ತು ವಿಜ್ಞಾನ ಬರಹಗಾರರು ಮತ್ತು ರಾಜ್ಯದ ಆಸಕ್ತ ಸಾರ್ವಜನಿಕರು ಸಮ್ಮೇಳನದ ಪ್ರತಿನಿಧಿಗಳಾಗಿ ಭಾಗವಹಿಸುತ್ತಾರೆ.
  • ಗ್ರಾಮೀಣ ಪ್ರದೇಶಗಳ ಆವಿಷ್ಕಾರಕರ ವಿಶೇಷ ಕೂಟವಾಗಿರುವುದಲ್ಲದೆ ಸಾಂಪ್ರದಾಯಿಕ ಜ್ಞಾನವನ್ನು ಪ್ರದರ್ಶಿಸುವ ವೇದಿಕೆಯಾಗಿರುವುದು ಈ ಸಮ್ಮೇಳನದ ಪ್ರಮುಖ ಆಂಶವಾಗಿದೆ. ಅಲ್ಲದೆ, ಸಮ್ಮೇಳನದಲ್ಲಿ ವಿಜ್ಞಾನ ಬರಹಗಾರರು ಮತ್ತು ವರದಿಗಾರರು ಸೇರಿದಂತೆ ಅಸಂಪ್ರದಾಯಿಕ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಗುವುದು
  • ವಿಜ್ಞಾನ ಸಂವನದಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಈ ಸಮ್ಮೇಳನದಲ್ಲಿ ನೀಡಲಾಗುವುದು

2022ನೇ ಸಾಲಿನಲ್ಲಿ ಸಮ್ಮೇಳನವನ್ನು ಬೀದರ್ ನಲ್ಲಿ ಕರ್ನಾಟಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ 2022ರ ಸೆಪ್ಟೆಂಬರ್ 14 ರಿಂದ 16 ರವರೆಗೆ ನಡೆಸಲಾಗುತ್ತಿದೆ.

Kannada-Conference-Invitation

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.
Skip to content