ಹ್ಯಾಲೋವಿನ್ ನೀಲ ಚಂದ್ರ – 2020

ನಮಗೆಲ್ಲ ತಿಳಿದಿರುವಂತೆ, ಒಂದು ವರ್ಷದಲ್ಲಿ 12 ಹುಣ್ಣಿಮೆಗಳು, ಅಂದರೆ ತಿಂಗಳಿಗೊಮ್ಮೆ, ಪ್ರತಿ ಋತುವಿನಲ್ಲಿ ಮೂರು. ಪ್ರತಿ ಹುಣ್ಣಿಮೆಯು 29.5 ದಿನಗಳಿಂದ ಕೂಡಿದ್ದು, ಚಂದ್ರನು 12 ಪೂರ್ಣ ಹುಣ್ಣಿಮೆಗಳನ್ನು ಪೂರ್ಣಗೊಳಿಸಲು 354 ದಿನಗಳು ಬೇಕಾಗುತ್ತದೆ. ವರ್ಷದ ಉಳಿಕೆ ದಿನಗಳು ಸೇರುತ್ತಾ ಬಂದು ಎರಡು ವರೆ ವರ್ಷಗಳಿಗೊಮ್ಮೆ ಒಂದೇ ಕ್ಯಾಲೆಂಡರ್ ವರ್ಷದಲ್ಲಿ 13 ಹುಣ್ಣಿಮೆಗಳು ಕಾಣಿಸಿಕೊಳ್ಳುತ್ತವೆ, ಈ ಹೆಚ್ಚುವರಿ ಹುಣ್ಣಿಮೆ ಒಂದು ಅಪರೂಪದ ಘಟನೆಯಾಗಿದ್ದು, ಇದನ್ನು ನೀಲ ಚಂದ್ರ ಅಥವಾ ಬ್ಲೂ ಮೂನ್ ಎಂದು ಕರೆಯಲಾಗುತ್ತದೆ.

 • ಬ್ಲೂ ಮೂನ್ ಪ್ರತಿ 19 ವರ್ಷಗಳಿಗೊಮ್ಮೆ ಏಳು ಬಾರಿ ಸಂಭವಿಸುತ್ತದೆ.
 • ಹ್ಯಾಲೋವೀನ್ ನ ನೀಲಿ ಚಂದ್ರ ಅಕ್ಟೋಬರ್ 1ರ ನಂತರದ ಎರಡನೇ ಹುಣ್ಣಿಮೆ.
 • ಅಮೇರಿಕಾದ ನ್ಯಾಷನಲ್ ಎರೋನಾಟಿಕ್ಸ್ ಅಂಡ್ ಸ್ಪೇಸ್ ಅಡಮಿನಿಸ್ಟ್ರೇಷನ್ (ನ್ಯಾಸ)ದ ಉಲ್ಲೇಖದಂತೆ 1883ರಲ್ಲಿ ಕ್ರಾಕಟೋವಾ ಎಂಬ ಇಂಡೋನೇಷ್ಯಾದ ಜ್ವಾಲಾಮುಖಿ ಸ್ಫೋಟಗೊಂಡು ಬೂದಿ ಆಕಾಶಕ್ಕೆ ಚದುರಿದ್ದರಿಂದ ಹಾಗೂ  ಈ ಬೂದಿ ಮೋಡಗಳಲ್ಲಿ ಕೆಂಪು ಕಿರಣಗಳನ್ನು ಚದುರಿಸಲು ಸರಿಯಾದ ಗಾತ್ರದ ಕಣಗಳನ್ನು ಹೊಂದಿದ್ದರಿಂದ ಚಂದ್ರ ನೀಲಿಯಾಗಿ ಕಾಣಲು ಕಾರಣವಾಯಿತು. ಇದೊಂದು ಅಪರೂಪದ ಘಟನೆ .
 • ಅಕ್ಟೋಬರ್ 31ರ ರಾತ್ರಿ ಹ್ಯಾಲೋವೀನ್ ನೀಲಿ ಚಂದ್ರ ಕಾಣಲಿದೆ.
 • ನಾಸಾ ದ ಪ್ರಕಾರ, ಮುಂದಿನ ಹ್ಯಾಲೋವೀನ್ ಬ್ಲೂ ಮೂನ್ 2039ರಲ್ಲಿ ಕಾಣಲಿದೆ. ಕಳೆದ ಬಾರಿ ಇಂತಹ ವಿದ್ಯಮಾನವನ್ನು 1944ರಲ್ಲಿ ಕಾಣಲಾಗಿತ್ತು.
 • 2020 ನಿಜಕ್ಕೂ ಆಕಾಶ ನೋಡುವವರಿಗೆ ಬಹಳ ವಿಶೇಷ ವರ್ಷ. ಈ ವರ್ಷ ಮೂರು ಸೂಪರ್ ಮೂನ್ ಗಳು, ನಾಲ್ಕು ಚಂದ್ರಗ್ರಹಣಗಳು ಮತ್ತು ಒಂದು ನೀಲ ಚಂದ್ರ ಸೇರಿದಂತೆ ಒಟ್ಟು 13 ಹುಣ್ಣಿಮೆಗಳು ನಾವು ವೀಕ್ಷಿಸಿದ್ದೇವೆ. ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮೂರು ಸೂಪರ್ ಮೂನ್ ಗಳನ್ನು ನೋಡಲಾಗಿತ್ತು.

ವರ್ಷದ ಉಳಿದ ಆಕಾಶ ಚಟುವಟಿಕೆಗಳು ನವೆಂಬರ್ 30 ಮತ್ತು ಡಿಸೆಂಬರ್ 29 ರಂದು ನಡೆಯಲಿದೆ. ನವೆಂಬರ್ ನಲ್ಲಿ ಬೀವರ್ ಅಥವಾ ಫ್ರೋಸ್ಟಿ ಮೂನ್ ಮತ್ತು ಒಂದು ಪೆಂಬ್ರೋಲ್ ಚಂದ್ರ ಗ್ರಹಣವನ್ನು ನಾವು ನೋಡಲಿದ್ದೇವೆ ಮತ್ತು 2021ಕ್ಕೆ ಎರಡು ದಿನಗಳ ಮುಂಚೆ ನಾವು ಶೀತಲ ಚಂದ್ರನನ್ನು ನೋಡಲಿದ್ದೇವೆ. ಡಿಸೆಂಬರ್ ನಲ್ಲಿ ಹುಣ್ಣಿಮೆಯನ್ನು ಶೀತಚಂದ್ರ ಎಂದು ಕರೆಯಲಾಗುತ್ತದೆ, ಏಕೆಂದರೆ ತಾಪಮಾನವು ತೀವ್ರವಾಗಿ ಇಳಿಮುಖವಾಗುತ್ತದೆ ಮತ್ತು ಬೀವರ್ ಚಂದ್ರ ನವೆಂಬರ್ ಮೊದಲ ಹುಣ್ಣಿಮೆಯಾಗಿದೆ.

ಡಾ. ಆನಂದ್ ಆರ್, ಹಿರಿಯ ವೈಜ್ಞಾನಿಕ ಅಧಿಕಾರಿ

ವಿಶ್ವ ಆಹಾರ ದಿನ 2020

ಅಕ್ಟೋಬರ್ 16, 2020: ಧ್ಯೇಯ ವಾಕ್ಯ- ಒಟ್ಟಾಗಿ., ಬೆಳೆಯಿರಿ, ಪೋಷಿಸಿ, ಉಳಿಸಿ. ನಮ್ಮ ಕ್ರಿಯೆಗಳೇ ನಮ್ಮ ಭವಿಷ್ಯ

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಪ್ರತಿ ವರ್ಷ ಅಕ್ಟೋಬರ್ 16ನ್ನು ವಿಶ್ವ ಆಹಾರ ದಿನವನ್ನಾಗಿ ಮೀಸಲಿಟ್ಟಿದೆ. ವಿಶ್ವ ಆಹಾರ ದಿನ 2020 ಕೂಡ FAOನ 75ನೇ ವಾರ್ಷಿಕೋತ್ಸವವೂ ಆಗಿದೆ. ಆರಂಭದಲ್ಲಿ FAO ಸ್ಥಾಪನೆಯ ನೆನಪಿಗಾಗಿ ವಿಶ್ವ ಆಹಾರ ದಿನವನ್ನು ಆರಂಭಿಸಲಾಯಿತು. ಕ್ರಮೇಣ, ಜಗತ್ತಿನಾದ್ಯಂತ ಆಹಾರ ಕೊರತೆ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆಹಾರ ವ್ಯವಸ್ಥೆಗಳನ್ನು ಪುನಶ್ಚೇತನಗೊಳಿಸುವ ಉದ್ದೇಶಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ಎಫ್. ಎ. ಓ. ಗೆ 75 ವರ್ಷಗಳು

 • ಜೀವನವನ್ನು ಸುಧಾರಿಸುವ ಬದ್ಧತೆಯೊಂದಿಗೆ 1945ರಲ್ಲಿ ಎಫ್. ಎ. ಓ. ಸ್ಥಾಪನೆಯಾಯಿತು.
 • 194 ಸದಸ್ಯ ರಾಷ್ಟ್ರಗಳು ಮತ್ತು ವಿಶ್ವದಾದ್ಯಂತ 130 ಕ್ಕೂ ಹೆಚ್ಚು ದೇಶಗಳಲ್ಲಿ ಎಫ್. ಎ. ಓ ಕಾರ್ಯನಿರ್ವಹಿಸುತ್ತದೆ.
 • ಹಸಿವಿನ ಕೊನೆ ಮತ್ತು ನಮ್ಮ ಆಹಾರ ವ್ಯವಸ್ಥೆಯಲ್ಲಿ ಪರಿವರ್ತನೆ ತರಲು ಪ್ರತಿಯೊಬ್ಬರೂ ತಮ್ಮ ಕೊಡುಗೆಯನ್ನು ನೀಡಬಹುದು.

ಚಟುವಟಿಕೆ ಪುಸ್ತಕ – ಆಹಾರ ವೀರರು

 1. ಪ್ರಕಟಣೆಗಳ ವರ್ಷ: 2020
 2. ಪ್ರಕಾಶನ ಸ್ಥಳ: ರೋಮ್, ಇಟಲಿ
 3. ಪುಟಗಳು: #24 ಪು.
 4. ISBN: 978-92-5-132979-5
 5. ಲೇಖಕರು: ಎಫ್. ಎ. ಓ
 6. ಪ್ರಕಾಶಕ: ಎಫ್. ಎ. ಓ

ಹೆಚ್ಚಿನ ವಿವರಗಳನ್ನು ಈ ಲಿಂಕ್ ಮೂಲಕ ಪಡೆಯಿರಿ

ರಸಾಯನಶಾಸ್ತ್ರದಲ್ಲಿ ನೋಬೆಲ್ 2020

ರಸಾಯನಶಾಸ್ತ್ರದಲ್ಲಿ 2020ರ ನೊಬೆಲ್ ಪ್ರಶಸ್ತಿಯನ್ನು ಪ್ರೊ. ಇಮ್ಯಾನುಯೆಲ್ಲೆ ಚಾರ್ಪೆಂಟಿಯರ್ ಮತ್ತು ಪ್ರೊ. ಜೆನ್ನಿಫರ್ ಎ. ಡೌಡ್ನಾ ರವರುಗಳಿಗೆ “ಜಿನೋಮ್ ಎಡಿಟಿಂಗ್ ವಿಧಾನದ ಅಭಿವೃದ್ಧಿಗಾಗಿ” ಜಂಟಿಯಾಗಿ ನೀಡಲಾಯಿತು.

ಈ ಲಿಂಕ್ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ

ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ 2020

ಬ್ರಹ್ಮಾಂಡದ ಅತ್ಯಂತ ಕುತೂಹಲಕಾರಿ ವಿದ್ಯಮಾನವಾದ ಬ್ಲಾಕ್ ಹೋಲ್ ಬಗ್ಗೆ ಮಾಡಿದ ಸಂಶೋಧನೆಗಳಿಗಾಗಿ ಭೌತಶಾಸ್ತ್ರದ ಈ ವರ್ಷದ ನೊಬೆಲ್ ಪ್ರಶಸ್ತಿಯನ್ನು ಮೂವರು ವಿಜ್ಞಾನಿಗಳು ಹಂಚಿಕೊಂಡಿದ್ದಾರೆ.

ಪ್ರೊ. ರೋಜರ್ ಪೆನ್ರೋಸ್ ಸಾಪೇಕ್ಷತೆಯ ಸಾಮಾನ್ಯ ಸಿದ್ಧಾಂತವು ಕಪ್ಪು ರಂಧ್ರಗಳ ರಚನೆಗೆ ಕಾರಣವಾಗುತ್ತದೆ ಎಂದು ತೋರಿಸಿದನು. ನಮ್ಮ ಗ್ಯಾಲಕ್ಸಿಯ ಕೇಂದ್ರ ದಲ್ಲಿರುವ ನಕ್ಷತ್ರಗಳ ಕಕ್ಷೆಗಳನ್ನು ಅಗೋಚರ ಮತ್ತು ಅತ್ಯಂತ ಭಾರವಾದ ವಸ್ತುವು ನಿಯಂತ್ರಿಸುತ್ತದೆ ಎಂದು ಪ್ರೊ. ರಿನ್ ಹಾರ್ಡ್ ಗೆನ್ಸೆಲ್ ಮತ್ತು ಪ್ರೊ. ಆಂಡ್ರಿಯಾ ಘೇಜ್ ಕಂಡುಹಿಡಿದರು. ಪ್ರಶಸ್ತಿಯ ಅರ್ಧ ಭಾಗವನ್ನು ಪ್ರೊ. ರೋಜರ್ ಪೆನ್ರೋಸ್ ಪಡೆದರೆ. ಇನ್ನುಳಿದ ಭಾಗವನ್ನು ಪ್ರೊ. ರಿನ್ ಹಾರ್ಡ್ ಗೆನ್ಸೆಲ್ ಮತ್ತು ಪ್ರೊ. ಆಂಡ್ರಿಯಾ ಘೇಜ್ ಹಂಚಿಕೊಂಡಿದ್ದಾರೆ,

ಈ ಲಿಂಕ್ ಮೂಲಕ ಹೆಚ್ಚಿನ ವಿವರವನ್ನು ಪಡೆಯಬಹುದಾಗಿದೆ

ವೈದ್ಯಕೀಯ ನೊಬೆಲ್ ಪ್ರಶಸ್ತಿ 2020

ಯಕೃತ್ ಸಿರೋಸಿಸ್ ಮತ್ತು ಕ್ಯಾನ್ಸರ್ ಗೆ ಕಾರಣವಾಗಿ ಪ್ರಮುಖ ಜಾಗತಿಕ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದ, ರಕ್ತದಿಂದ ಹರಡುವ, ಹೆಪಟೈಟಿಸ್ ಕಾಯಿಲೆ ವಿರುದ್ಧ ಹೋರಾಡಲು ನಿರ್ಣಾಯಕ ಕೊಡುಗೆಯನ್ನು ನೀಡಿದ ಮೂವರು ವಿಜ್ಞಾನಿಗಳಿಗೆ ಈ ವರ್ಷದ ಮೆಡಿಸಿನ್ ನೊಬೆಲ್ ಪ್ರಶಸ್ತಿ ಯನ್ನು ನೀಡಲಾಯಿತು. ಅಮೆರಿಕದ ವಿಜ್ಞಾನಿಗಳಾದ ಹಾರ್ವೆ ಜೆ ಆಲ್ಟರ್ ಮತ್ತು ಚಾರ್ಲ್ಸ್ ಎಂ ರೈಸ್ ಹಾಗೂ ಬ್ರಿಟಿಷ್ ವಿಜ್ಞಾನಿ ಮೈಕೆಲ್ ಹೌಟನ್ ರವರುಗಳಿಗೆ ಸೋಮವಾರ (05.10.2020) ವೈದ್ಯಕೀಯ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು

ಈ ಲಿಂಕ್ ಮೂಲಕ ಹೆಚ್ಚಿನ ವಿವರವನ್ನು ಪಡೆಯಬಹುದಾಗಿದೆ

ಹಕ್ಕುಗಳು 2019- ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ. Copyright (c) 2019. Karnataka Science & Technology Academy
ಈ ವೆಬ್‌ಸೈಟ್ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಗೆ ಸೇರಿದೆ. This is the official website of Karnataka Science and Technology Academy
Skip to content