ಭೌತಶಾಸ್ತ್ರ ನೋಬೆಲ್ ಪ್ರಶಸ್ತಿ 2023
ಪ್ರೊ. ಪಿಯೆರೆ ಅಗಸ್ಟಿನಿ,
ಪ್ರೊ. ಫೆರೆನ್ಚ್ ಕ್ರೌಸ್ಜ್ ಮತ್ತು
ಪ್ರೊ. ಅನ್ನಿ ಲ್’ಹುಲ್ಲಿರ್
2023 ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ದ್ರವ್ಯದಲ್ಲಿ ಎಲೆಕ್ಟ್ರಾನ್ ಚಟುಚಟಿಕೆಯ ಅಧ್ಯಯನಕ್ಕಾಗಿ ಬೆಳಕಿನ ಅಟ್ಟೊಸೆಕೆಂಡ್ ಸ್ಪಂದನಗಳನ್ನು ಉತ್ಪಾದಿಸುವ ಪ್ರಾಯೋಗಿಕ ವಿಧಾನಗಳಿಗಾಗಿ ಪಿಯೆರೆ ಅಗಸ್ಟಿನಿ, ಫೆರೆನ್ಚ್ ಕ್ರೌಸ್ಜ್ ಮತ್ತು ಅನ್ನಿ ಲ್’ಹುಲ್ಲಿರ್ ರವರಿಗೆ ನೀಡಲಾಗಿದೆ.
ಇದು ಮಾನವಕುಲಕ್ಕೆ ಪರಮಾಣುಗಳು ಮತ್ತು ಅಣುಗಳೊಳಗಿನ ಎಲೆಕ್ಟ್ರಾನ್ ಜಗತ್ತನ್ನು ಅನ್ವೇಷಿಸಲು ಹೊಸ ಸಾಧನಗಳನ್ನು ನೀಡಿದೆ. ಇವರು ತ್ವರಿತ ಪ್ರಕ್ರಿಯೆಗಳಾದ ಎಲೆಕ್ಟ್ರಾನ್ ಗಳ ಚಲನೆ ಅಥವಾ ಶಕ್ತಿಯ ಬದಲಾವಣೆಗಳನ್ನು ಅಳೆಯಲು ಬಳಸಬಹುದಾದ ಬೆಳಕಿನ ಅತ್ಯಂತ ಸಣ್ಣ ಸ್ಪಂದನ/ಮಿಡಿತಗಳನ್ನು ರಚಿಸುವ ಮಾರ್ಗವನ್ನು ಪ್ರದರ್ಶಿಸಿದ್ದಾರೆ.