
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆದ ವಿವಿಧ ಘಟನೆಗಳನ್ನು ನೆನಪಿಸಿಕೊಳ್ಳಲು ಹಾಗೂ ಅದರ ಬಗ್ಗೆ ಜಾಗೃತಿ ಮೂಡಿಸಲು ಅಕಾಡೆಮಿಯು ‘ಈ ದಿನ, ಅಂದು’ ಎಂಬ ಸುದ್ದಿ ಸರಣಿಯನ್ನು ಆರಂಭಿಸುತ್ತಿದೆ. ವಿಜ್ಞಾನ ತಂತ್ರಜ್ಞಾನದ ಪ್ರಮುಖ ಘಟನೆಗಳ ಮಾಹಿತಿಯನ್ನು ಒದಗಿಸಲು ಇದು ಒಂದು ಪ್ರಯತ್ನವಾಗಿದ್ದು, ಓದುಗರು ತಮ್ಮ ಅನಿಸಿಕೆಗಳನ್ನು ಹಾಗೂ ಸರಣಿಯಲ್ಲಿ ಪರಿಗಣಿಸಬಹುದಾಗಿದ್ದ ಇತರೆ ಪ್ರಮುಖ ಘಟನೆಗಳ ಮಾಹಿತಿಯನ್ನು ತಿಳಿಸಬಹುದಾಗಿದೆ. ತಮ್ಮ ಅನಿಸಿಕೆ ಹಾಗೂ ಮಾಹಿತಿಯನ್ನು ನಮ್ಮ ಸರಣಿಯಲ್ಲಿ ಅಳವಡಿಸಿ ಯಾವುದೇ ಪ್ರಮುಖ ವಿಷಯಗಳು ಬಿಟ್ಟು ಹೋಗದಂತೆ ಮುತುವರ್ಜಿ ವಹಿಸಲಾಗುವುದು.
- ನವೆಂಬರ್ 27: ಈ ದಿನ, ಅಂದು
ಆಂಡರ್ಸ್ ಸೆಲ್ಸಿಯಸ್ ಜನನ
- ಸ್ವೀಡನ್ ನ ಉಪ್ಸಾಲದಲ್ಲಿ ನವೆಂಬರ್ 27, 1701 ರಂದು ಸೆಲ್ಸಿಯಸ್ ಜನಿಸಿದರು
- ಸ್ವೀಡಿಷ್ ಖಗೋಳಶಾಸ್ತ್ರಜ್ಞನಾಗಿದ್ದ ಸೆಲ್ಸಿಯಸ್, ಉಪ್ಸಾಲಾ ವೀಕ್ಷಣಾಲಯವನ್ನು ನಿರ್ಮಿಸಿದರು ಮತ್ತು ಸೆಲ್ಸಿಯಸ್ (ಅಥವಾ ಸೆಂಟಿಗ್ರೇಡ್) ಉಷ್ಣತಾಮಾಪಕವನ್ನು ಕಂಡುಹಿಡಿದರು.
- ಇವರು ವಿಕಿರಣಾತ್ಮಕ ವಾತಾವರಣದ ವಿದ್ಯಮಾನ ‘ಅರೋರಾ ಬೋರಿಯಾಲಿಸ್’ ಅಥವಾ ಉತ್ತರದ ಬೆಳಕು ಮತ್ತು ಭೂಮಿಯ ಕಾಂತೀಯ ಕ್ಷೇತ್ರ ನಡುವಿನ ಸಂಪರ್ಕವನ್ನು ಪ್ರತಿಪಾದನೆ ಮಾಡಿದ ಮೊದಲ ವ್ಯಕ್ತಿ.