ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಹವಾಮಾನ ಬದಲಾವಣೆ ಕಾರ್ಯಕ್ಷಮತೆ ಸೂಚ್ಯಂಕ (ಸಿಸಿಪಿಐ) 2021

1 min read

ಡಾ. ಆನಂದ್ ಆರ್,
ಹಿರಿಯ ವೈಜ್ಞಾನಿಕ ಅಧಿಕಾರಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ಸಿ.ಸಿ.ಪಿ.ಐ. ದೇಶಗಳ ಹವಾಮಾನ ಸಂರಕ್ಷಣಾ ಕಾರ್ಯಕ್ಷಮತೆಯನ್ನು ಪತ್ತೆ ಹಚ್ಚುವ ಸ್ವತಂತ್ರ ಮೇಲ್ವಿಚಾರಣಾ ಸಾಧನವಾಗಿದೆ. ಅಂತರರಾಷ್ಟ್ರೀಯ ಹವಾಮಾನ ಸಂರಕ್ಷಣಾ ಪ್ರಯತ್ನಗಳಲ್ಲಿ ಪಾರದರ್ಶಕತೆಯನ್ನು ತರುವ ಗುರಿಯನ್ನು ಹೊಂದಿರುವ ಈ ಸೂಚ್ಯಂಕವು ಹವಾಮಾನ ಸಂರಕ್ಷಣಾ ಪ್ರಯತ್ನಗಳು ಮತ್ತು ವೈಯಕ್ತಿಕ ದೇಶಗಳು ಮಾಡಿದ ಪ್ರಗತಿಯನ್ನು ಹೋಲಿಸಲು ಅನುವು ಮಾಡಿಕೊಡುತ್ತದೆ. ಒಟ್ಟಾಗೆಯಾಗಿ ಶೇಖಡ 90 ರಷ್ಟು ಜಾಗತಿಕ ಹಸಿರುಮನೆ ಅನಿಲದ ಹೊರಸೂಸುವಿಕೆಗೆ ಕಾರಣವಾಗುವ 58 ಆರ್ಥಿಕತೆಗಳನ್ನು (57 ದೇಶಗಳು + ಯುರೋಪಿಯನ್ ಯೂನಿಯನ್) ಇದಕ್ಕೆ ಒಳಪಡಿಸಲಾಗಿದೆ.

ಸಿ.ಸಿ.ಪಿ.ಐ. ನ ಹವಾಮಾನ ನೀತಿ ವಿಭಾಗವು ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ನೀತಿಗಳನ್ನು ಅನುಷ್ಠಾನಗೊಳಿಸುವಲ್ಲಿ ದೇಶಗಳ ಪ್ರಗತಿಯನ್ನು ಮೌಲ್ಯಮಾಪನ ಮಾಡುತ್ತದೆ. ಇದು ನಾಲ್ಕು ವಿಭಾಗಗಳಾದ “ಹಸಿರುಮನೆ ಅನಿಲ (ಜಿಎಚ್ ಜಿ) ಹೊರಸೂಸುವಿಕೆ” (ಒಟ್ಟಾರೆ ಅಂಕದಲ್ಲಿ ಶೇ.40), “ನವೀಕರಿಸಬಹುದಾದ ಇಂಧನ” (ಒಟ್ಟಾರೆ ಅಂಕದಲ್ಲಿ ಶೇ.20), “ಶಕ್ತಿಯ ಬಳಕೆ” (ಒಟ್ಟಾರೆ ಅಂಕದಲ್ಲಿ ಶೇ.20) ಮತ್ತು “ಹವಾಮಾನ ನೀತಿ” (ಒಟ್ಟಾರೆ ಅಂಕದಲ್ಲಿ ಶೇ.20) ಹಾಗೂ ಚಿತ್ರದಲ್ಲಿರುವಂತೆ ಅದರಡಿ ಬರುವ 14 ಸೂಚಕಗಳೊಂದಿಗೆ ದೇಶಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಿ ಪ್ರತಿ ವರ್ಷ ಬಿಡುಗಡೆ ಮಾಡುತ್ತಿದೆ.

ಭಾರತದ ಸಾಧನೆ

  • ಒಟ್ಟಾರೆ ಕಾರ್ಯಕ್ಷಮತೆ:  63.98  ಅಂಕಗಳೊಂದಿಗೆ ಭಾರತವು  58  ಆರ್ಥಿಕತೆಗಳಲ್ಲಿ 10ನೇ ಸ್ಥಾನ ಪಡೆದಿದೆ
  • ನವೀಕರಿಸಬಹುದಾದ ಇಂಧನ ವಿಭಾಗ: 27ನೇ  ಸ್ಥಾನ
  • ಜಿ.ಎಚ್. ಜಿ. ಹೊರಸೂಸುವಿಕೆ: 12ನೇ ಸ್ಥಾನ
  • ಶಕ್ತಿ ಬಳಕೆ: 10ನೇ ಸ್ಥಾನ
  • ಹವಾಮಾನ ನೀತಿ: 13ನೇ ಸ್ಥಾನ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.
Skip to content