ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

‘ ಡ್ರೋನ್’- ಈಗ ಪರಮಾಣು ನಿಯಂತ್ರಣಕ್ಕೂ ಸೈ!

1 min read

ಈಗ ಎಲ್ಲೆಲ್ಲಿಯೂ ಡ್ರೋನ್.ದೇ ಕರಾಮತ್ತು. ಮೂಲತಃ ಮಿಲಿಟರಿ ಉಪಯೋಗಕ್ಕೆಂದು ಅಭಿವೃದ್ಧಿಗೊಂಡ ಈ ಮಾನವರಹಿತ ವೈಮಾನಿಕ ವಾಹನಗಳು ವಿವಿಧ ಗಾತ್ರ ಮತ್ತು ವಿಧಗಳಲ್ಲಿ ಲಭ್ಯವಿದ್ದು, ವಿತರಣೆ, ರಕ್ಷಣಾ ಕಾರ್ಯ, ಬಾಹ್ಯಾಕಾಶ, ಆರೋಗ್ಯ ಕ್ಷೇತ್ರ, ಛಾಯಾಗ್ರಹಣ, ಕೃಷಿ, ಇನ್ನೂ ಮುಂತಾದ ಅನೇಕ ನಾಗರೀಕ ಬಳಕೆಗಳಲ್ಲಿ ತಮ್ಮ ಸಮರ್ಥ್ಯತೆಯನ್ನು ಪ್ರದರ್ಶಿಸುತ್ತಿವೆ. ತಮ್ಮಗೆ ಸೂಚಿಸಿದ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಈ ಢ್ರೋನ್ ಗಳು ಪರಮಾಣು ನಿಯಂತ್ರಣಕ್ಕೂ ಸೈ ಎನಿಸಿಕೊಂಡಿವೆ. ಆಶ್ಚರ್ಯವೇ?. ಹೌದು ಇಟಾಲಿಯ ನ್ಯಾಷನಲ್ ರೀಸರ್ಚ್ ಕೌನ್ಸಿಲ್ ನ ಪ್ರೊ. ಮಾಸ್ಸಿಮಿಲಿಯಾನೊ ಕಾವಲ್ಲಿನಿ ಮತ್ತು ಅವರ ತಂಡ ಸರಳ ವಿದ್ಯುದ್ರಾಸಾಯನಿಕ ವಿದ್ಯುತ್ಕೋಶದ ಮೂಲಕ ಪರಿವೇಷ್ಟಕ ವಾತಾವರಣದಲ್ಲಿ ವಿಭವ (ವಿದ್ಯುದಾವೇಶದ ಶಕ್ತಿಯ ಪ್ರಮಾಣ)ವನ್ನು ನಿರ್ವಾತದಲ್ಲಿ ಮತ್ತು ಕ್ರಯೋಜೆನಿಕ್ ಪರಿಸ್ಥಿತಿಗಳಲ್ಲಿ ನಿರ್ಮಿಸಲಾಗಿದೆ. ಅಂದರೆ, ಇದರಿಂದ ಉತ್ಪಾದಿಸಿದ ಮಾದರಿಗಳು ಪರಿವೇಷ್ಟಕ ವಾತಾವರಣದ ಪರಿಸ್ಥಿತಿಗಳಲ್ಲಿ ಅಸ್ಥಿರವಾಗಿರುತ್ತವೆ.

ಎಸ್.ಪಿ.ಎಂ ತಂತ್ರಜ್ಞಾನದ ಈ ಮಿತಿಗಳನ್ನು ನಿವಾರಿಸಲು ಹೊಸ ಮಾದರಿಯಲ್ಲಿ ಪರಮಾಣು ಮಟ್ಟದ ರಚನೆಯಲ್ಲಿ ಮೇಲ್ಮೈ ಪರಮಾಣು ಕ್ಲಿಷ್ಟತೆಯನ್ನು ಸಾಧನವಾಗಿ ಬಳಸಿಕೊಳ್ಳುವ ಒಂದು ಸಮನ್ವಯ ಸಂಯುಕ್ತದೊಂದಿಗೆ ಎಸ್.ಪಿ.ಎಂ ಶೋಧಕ ತುದಿಯನ್ನು ಬದಲಿಸಿ ಪರಮಾಣು ಮಟ್ಟದ ರಚನೆಯನ್ನು ಕೈಗೊಳ್ಳಲಾಗುತ್ತದೆ. ಈ ಸಮನ್ವಯ ಸಂಯುಕ್ತವೇ ‘ಮಾಲಿಕ್ಯುಲಾರ್ ಡ್ರೋನ್!’ ಇದು ಅಧಃಸ್ತರದ (ಸಬ್ ಸ್ಟ್ರೇಟ್) ಮೇಲೆ ಇಳಿದು ಮೇಲ್ಮೈಯಲ್ಲಿನ ನಿರ್ದಿಷ್ಟ ಪರಮಾಣುವಿನೊಂದಿಗೆ ಬೆಸೆದು ಅದನ್ನು ಹೆಕ್ಕಿಕೊಂಡು ಮೇಲ್ಮೈಯಿಂದ ನಿರ್ಗಮಿಸುತ್ತದೆ ಮತ್ತು ಆ ಮೂಲಕ ಖಾಲಿ ಸ್ಥಾನ ಸೃಷ್ಟಿಯಾಗುತ್ತದೆ. ಗಮನಾರ್ಹ ಅಂಶವೆಂದರೆ, ಈ ಪ್ರಕ್ರಿಯೆಯ ಶಕ್ಯತೆಯನ್ನು ವಿದ್ಯುದ್ರಾಸಾಯನಿಕ ನಿಯಂತ್ರಣದಲ್ಲಿ  ಪ್ರದರ್ಶಿಸಿರುವುದು ಹಾಗೂ ರಚನೆಯಾದ ಮಾದರಿಯು ಪರಿವೇಷ್ಟಕ ವಾತಾವರಣ ಮತ್ತು ಕೊಠಡಿ ತಾಪಮಾನದಲ್ಲಿ ಸ್ಥಿರತೆಯನ್ನು ಹೊಂದಿರುವುದು.

ಮಾಲಿಕ್ಯುಲಾರ್ ಡ್ರೋನ್.ನ ಕಬ್ಬಿಣ (III) ಮತ್ತು ಮೇಲ್ಮೈ ನಡುವೆ ಸಮನ್ವಯದಿಂದ ಪರಮಾಣು ಬೇರ್ಪಡುತ್ತಿರುವುದು  
Source: © 2021 Wiley‐VCH GmbH

ಕಬ್ಬಿಣ (III) ಫ್ಥಾಲೋಸೈನೈನ್ ಕ್ಲೋರೈಡ್ ತನ್ನ ಲೋಹವನ್ನು ಬಳಸಿಕೊಂಡು ಸಮನ್ವಯ ಬಂಧಗಳನ್ನು ರೂಪಿಸಬಲ್ಲ ಸಂಯುಕ್ತವಾಗಿದ್ದು, ‘ಮಾಲಿಕ್ಯುಲಾರ್ ಡ್ರೋನ್’ ಆಗಿ ಬಳಸಬಹುದಾಗಿದೆ. ‘ಕಬ್ಬಿಣ (III) ಅಷ್ಟಮುಖೀಯ ಸಂಯುಕ್ತಗಳನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸಂಶೋಧನೆಯು ಬೃಹತ್ ಪ್ರಮಾಣದ ಪರಮಾಣು ಮರು ರಚನೆಗೆ ಒಂದು ಹೊಸ ಅಧ್ಯಾಯವನ್ನೇ ತರೆಯಲಿದೆ ಎಂಬುದು   ಸಂಶೋಧನಾ ತಂಡದ ಅಭಿಪ್ರಾಯವಾಗಿದೆ.

ಥಾಲೋಸಯನೈನ್ ಮಾಲಿಕ್ಯುಲಾರ್ ಡ್ರೋನ್ ಖಾಲಿ ಸ್ಥಾನವನ್ನು ಸೃಷ್ಟಿಸುತ್ತಿರುವುದನ್ನು ತೋರಿಸುತ್ತಿರುವ ಸ್ಕಾನಿಂಗ್ ಟನಲಿಂಗ್ ಮೈಕ್ರೊಸ್ಕೋಪ್ ಚಿತ್ರ Source: © 2021 Wiley‐VCH GmbH

ಮುಂದಿನ ಸಂಶೋಧನೆಗೆ ಅವಕಾಶಗಳು: ಇದೊಂದು ಬಹು ದೊಡ್ಡ ಸಾಧನೆಯಾಗಿದ್ದರೂ ಈ ಪದ್ದತಿಯಿಂದ ಸೃಷ್ಟಿಯಾದ ಖಾಲಿ ಜಾಗಗಳು ಯಾವುದೇ ನಿರ್ದಿಷ್ಟ ಮಾದರಿಯನ್ನು (ಪ್ಯಾಟ್ರನ್) ಅನುಸರಿಸದೆ ಗುಂಪಾಗಿ ಕಂಡು ಬಂದಿದ್ದು, ಪರಿಮಾಣಾತ್ಮಕ ಸ್ಥಾನೀಯ ವಿತರಣೆಯನ್ನು ಸಧ್ಯದ ಈ ಸಂಶೋಧನೆಯಲ್ಲಿ ಸಾಧಿಸಲಾಗಿಲ್ಲ. ಫ್ಥಾಲೋಸೈನೈನ್ ವ್ಯುತ್ಪನ್ನಗಳು ಮತ್ತು ಬೆಳವಣಿಗೆ ವಿಧಾನಗಳ ಅಗಾಧವಾದ ಸಂಗ್ರಹವೇ ಲಭ್ಯವಿದ್ದು, ಡ್ರೋನ್ ಗಳನ್ನು ನಿರ್ದೇಶಿಸಿ ಎಸ್.ಪಿ.ಎಂ. ನಂತೆ ಪರಮಾಣುಗಳ ಮಾದರಿಯನ್ನು ನಿಯಂತ್ರಿಸುವತ್ತ ಮುಂದಿನ ಸಂಶೋಧನೆಗೆ ಬಹಳಷ್ಟು ಅವಕಾಶವಿದೆ.

– ಡಾ. ಆನಂದ್ ಆರ್.
ಹಿರಿಯ ವೈಜ್ಞಾನಿಕ ಅಧಿಕಾರಿ,
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content