ರಾಷ್ಟ್ರೀಯ ವಿಜ್ಞಾನ ಹಬ್ಬ
1 min readಅರ್ಜಿ ಸಲ್ಲಿಸುವಿಕೆ ಆರಂಭ : ಪ್ರತಿ ವರ್ಷ ಸೆಪ್ಟೆಂಬರ್ ಅಥವಾ ಅಕ್ಟೋಬರ್
ಐ. ಆರ್. ಐ. ಎಸ್. ಪ್ರತಿ ವರ್ಷ ರಾಷ್ಟ್ರೀಯ ವಿಜ್ಞಾನ ಹಬ್ಬವನ್ನು ಇಂಟೆಲ್ ಟೆಕ್ನಾಲಜಿ ಇಂಡಿಯಾ ಪ್ರೈ.ಲಿ., ಮತ್ತು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಇಂಡೋ-ಅಮೇರಿಕಾ ವಿಜ್ಞಾನ ಮತ್ತು ತಂತ್ರಜ್ಞಾನ ವೇದಿಕೆ ಇವರ ಸಹಯೋಗದಲ್ಲಿ ನಡೆಸುತ್ತಿದೆ. ಈ ಕಾರ್ಯಕ್ರಮವು ಭಾರತದ ಯುವ ಸಂಶೋಧಕರಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕ ಸಂಶೋಧನೆಗೆ ಪ್ರೋತ್ಸಾಹ ಮತ್ತು ಪೋಷಣೆಯನ್ನು ನೀಡುತ್ತಿದೆ. ಈ ಕಾರ್ಯಕ್ರಮದಡಿಯಲ್ಲಿ ಉತ್ಕøಷ್ಟ ಪರಿಯೋಜನೆಯನ್ನು ಗುರುತಿಸಿ ಬಹುಮಾನ ನೀಡಲಾಗುತ್ತದೆ. ಅಲ್ಲದೆ, ವಿಜೇತರಿಗೆ ಅಮೇರಿಕಾದಲ್ಲಿ ಪ್ರತಿವರ್ಷ ನಡೆಯುವ ಜಗತ್ತಿನಲ್ಲೇ ಅತಿ ದೊಡ್ಡ ಕಾಲೇಜು ಪೂರ್ವ ಮಟ್ಟದ ವಿಜ್ಞಾನ ಮತ್ತು ಇಂಜಿನಿಯರಿಂಗ್ ಹಬ್ಬದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಕಲ್ಪಿಸಲಾಗುತ್ತದೆ.
ಈ ಅಂತಾರಾಷ್ಟ್ರೀಯ ಹಬ್ಬದಲ್ಲಿ 8 ರಿಂದ 12 ವರ್ಷ ವಯೋಮಿತಿಯ ವಿದ್ಯಾರ್ಥಿಗಳು ವೈಯಕ್ತಿಕವಾಗಿ ಅಥವಾ ಗರಿಷ್ಠ ಇಬ್ಬರನ್ನು ಹೊಂದಿರುವ ಗುಂಪುಗಳ ಮೂಲಕ ಭಾಗವಹಿಸಬಹುದಾಗಿದೆ. ಈ ಕಾರ್ಯಕ್ರಮದಲ್ಲಿ ಈ ಕೆಳಕಂಡ ಯಾವುದಾದರೊಂದು ಅಥವಾ ಹೆಚ್ಚಿನ ವಿಷಯ ವರ್ಗಗಳಲ್ಲಿ ಎಷ್ಟದರೂ ಪರಿಯೋಜನೆಗಳನ್ನು ಸಲ್ಲಿಸಬಹಾದಾಗಿದೆ:
- ಪ್ರಾಣಿ ವಿಜ್ಞಾನ
- ಸ್ವಭಾವ ಮತ್ತು ಸಮಾಜ ವಿಜ್ಞಾನ
- ಜೀವರಸಾಯನ ಶಾಸ್ತ್ರ
- ಜೀವಕೋಶ ಮತ್ತು ಅಣು ಜೀವಶಾಸ್ತ್ರ
- ರಸಾಯನ ಶಾಸ್ತ್ರ
- ಗಣಕ ವಿಜ್ಞಾನ
- ಭೂಮಿ ಮತ್ತು ಗ್ರಹ ವಿಜ್ಞಾನ
- ಇಂಜಿನಿಯರಿಂಗ್ : ಎಲೆಕ್ಟ್ರಿಕಲ್ ಮತ್ತು ಮ್ಯಾಕಾನಿಕಲ್
- ಇಂಜಿನಿಯರಿಂಗ್ : ಮೆಟೀರಿಯಲ್ಸ್ ಮತ್ತು ಜೈವಿಕ ಇಂಜಿನಿಯರಿಂಗ್
- ಶಕ್ತಿ ಮತ್ತು ಸಾರಿಗೆ
- ಪರಿಸರ ನಿರ್ವಹಣೆ
- ಪರಿಸರ ವಿಜ್ಞಾನ
- ಗಣಿತ ವಿಜ್ಞಾನ
- ಔಷಧಿ ಮತ್ತು ಆರೋಗ್ಯ ವಿಜ್ಞಾನಗಳು
- ಸೂಕ್ಷ್ಮಜೀವಶಾಸ್ತ್ರ
- ಭೌತಶಾಸ್ತ್ರ ಮತ್ತು ಖಗೋಳ ಶಾಸ್ತ್ರ
- ಸಸ್ಯ ವಿಜ್ಞಾನ
ಅರ್ಜಿ : ಅರ್ಜಿಯನ್ನು ಆನ್‍ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶ