ಇಂಡಿಯನ್ ಸೈನ್ಸ್ ಕಾಂಗ್ರೇಸ್
108ನೇ ಇಂಡಿಯನ್ ಸೈನ್ಸ್ ಕಾಂಗ್ರೇಸ್
ಜನವರಿ 3 ರಿಂದ 7, 2023
ಧ್ಯೇಯ ವಾಕ್ಯ: ಮಹಿಳಾ ಸಬಲೀಕರಣದೊಂದಿಗೆ ಸುಸ್ಥಿರ ಅಭಿವೃದ್ಧಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ
ಇಂಡಿಯನ್ ಸೈನ್ಸ್ ಕಾಂಗ್ರೇಸ್ ಅಸೋಸಿಯೇಷನ್‍ರ ವತಿಯಿಂದ 108ನೇ ಇಂಡಿಯನ್ ಸೈನ್ಸ್ ಕಾಂಗ್ರೇಸ್‍ನ್ನು 2023ರ ಜನವರಿ 3 ರಿಂದ 7ರವರೆಗೆ ನಾಗಪುರ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ನಡೆಸಲಾಗುತ್ತಿದೆ. ಈ ಸೈನ್ಸ್ ಕಾಂಗ್ರೇಸ್ ಒಂದು ಬೃಹತ್ ಪ್ರಮಾಣದ ಕಾರ್ಯಕ್ರಮವಾಗಿದ್ದು, ದೇಶ ವಿದೇಶಗಳಿಂದ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು, ನೋಬೆಲ್ ಪಾರಿತೋಷಕ ವಿಜೇತರು, ವಿಜ್ಞಾನಿಗಳು, ಭೋದನಾ ಸಿಬ್ಬಂದಿ, ಸಂಶೋಧಕರು ಮತ್ತು ಇತರೆ ಆಸಕ್ತರು ಭಾಗವಹಿಸುತ್ತಾರೆ. ಆಹ್ವಾನಿತ ಉಪನ್ಯಾಸಗಳು ಮತ್ತು ಆಯ್ದ ಸಂಶೋಧನಾ ಲೇಖನಗಳನ್ನು ವಿವಿಧ ತಾಂತ್ರಿಕ ಗೋಷ್ಠಿಗಳಾದ ಕೃಷಿ ಮತ್ತು ಅರಣ್ಯ, ಪ್ರಾಣಿ, ಪಶುವೈದ್ಯ ಮತ್ತು ಮೀನುಗಾರಿಕೆ ವಿಜ್ಞಾನ, ರಸಾಯನಿಕ ವಿಜ್ಞಾನ, ಭೂ ವಿಜ್ಞಾನ ವ್ಯವಸ್ಥೆ, ಇಂಜಿನಿಯರಿಂಗ್ ವಿಜ್ಞಾನ, ಪರಿಸರ ವಿಜ್ಞಾನ, ಪಿ.ಸಿ.ಬಿ. ವಸ್ತು ವಿಜ್ಞಾನ, ಗಣಿತ ವಿಜ್ಞಾನ, ವೈದ್ಯಕೀಯ ವಿಜ್ಞಾನ, ಜೀವ ತಂತ್ರಜ್ಞಾನ ಮತ್ತು ಸಸ್ಯ ವಿಜ್ಞಾನಗಳಲ್ಲಿ ಮಂಡಿಸಲಾಗುವುದು.
ಮಕ್ಕಳ ವಿಜ್ಞಾನ ಕಾಂಗ್ರೇಸ್
ಈ ಬೃಹತ್ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಒಂದು ಅವಕಾಶ ಕಲ್ಪಿಸಲು ಇಂಡಿಯನ್ ಸೈನ್ಸ್ ಕಾಂಗ್ರೇಸ್‍ನ ಭಾಗವಾಗಿ ಮಕ್ಕಳ ವಿಜ್ಞಾನ ಕಾಂಗ್ರೇಸ್‍ನ್ನು 2020ರ ಜನವರಿ 4 ರಿಂದ 6 ರವರೆಗೆ ಮೂರು ದಿನಗಳ ಕಾಲ ಈ ಕಾರ್ಯಕ್ರಮವನ್ನು ನಡೆಸಲಾಯಿತು. ಇದರಲ್ಲಿ ಭಾಗವಹಿಸಲು ಯಾವುದೇ ನೊಂದಾವಣೆ ಶುಲ್ಕವಿರುವುದಿಲ್ಲ ಹಾಗೂ ವಸತಿ ಮತ್ತು ಆಹಾರ ಕೂಪನ್ನುಗಳನ್ನು ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ಖ್ಯಾತ ವಿಜ್ಞಾನಿಗಳಿಂದ ಆಹ್ವಾನಿತ ಉಪನ್ಯಾಸಗಳು, ವಿಜ್ಞಾನ ವಸ್ತು ಪ್ರದರ್ಶನ, ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ ಮತ್ತು ಇತರೆ ಸ್ಪರ್ಧೇಗಳನ್ನು ಏರ್ಪಡಿಸಲಾಗುವುದು.
ಮಹಿಳಾ ವಿಜ್ಞಾನ ಕಾಂಗ್ರೇಸ್
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆಯನ್ನು ಪ್ರತಿಬಿಂಬಿಸಲು ಇಂಡಿಯನ್ ಸೈನ್ಸ್ ಕಾಂಗ್ರೇಸ್ ಕಾರ್ಯಕ್ರಮದ ಭಾಗವಾಗಿ ಮಹಿಳಾ ವಿಜ್ಞಾನ ಕಾಂಗ್ರೇಸನ್ನು ನಡೆಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ನೊಂದಾವಣಿ ಮೂಲಕ ಭಾಗವಹಿಸಬಹುದಾಗಿದ್ದು, ಯಾವುದೇ ಪ್ರತ್ಯೇಕ ನೋಂದಾವಣಿ ಶುಲ್ಕವಿರುವುದಿಲ್ಲ.
ಪ್ರಶಸ್ತಿಗಳು
ಐ.ಎಸ್.ಸಿ.ಎ. ಪ್ರಶಸ್ತಿ : ಭಾರತೀಯ ವಿಜ್ಞಾನಿಗಳನ್ನು ಗೌರವಿಸಲು ಮತ್ತು ಪ್ರೋತ್ಸಾಹಿಸಲು 40 ಕ್ಕೂ ಹೆಚ್ಚು ಪ್ರಶಸ್ತಿ/ಉಪನ್ಯಾಸ/ಶಿಷ್ಯವೇತನಗಳನ್ನು ನೀಡುತ್ತಿದ್ದಾರೆ.
ಯುವ ವಿಜ್ಞಾನಿ ಪ್ರಶಸ್ತಿ : ಐ.ಎಸ್.ಸಿ.ಎ. ಭಾರತೀಯ ಯುವ ವಿಜ್ಞಾನಿಗಳನ್ನು ಪ್ರೋತ್ಸಾಹಿಸಲು ವಿವಿಧ ವಿಭಾಗಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ನೀಡುತ್ತಿದೆ. ಈ ಪ್ರಶಸ್ತಿಯು ರೂ. 25,000/ಗಳ ನಗದು ಬಹುಮಾನ ಮತ್ತು ಅರ್ಹತಾ ಪ್ರಮಾಣ ಪತ್ರವನ್ನು ಹೊಂದಿದೆ.
ಅತ್ಯುತ್ತಮ ಪೋಸ್ಟರ್ ಪ್ರಶಸ್ತಿ : ಐ.ಎಸ್.ಸಿ.ಎ. ಪ್ರತಿ ವಿಬಾಗದಲ್ಲಿ ಎರಡು ಅತ್ಯುತ್ತಮ ಪೋಸ್ಟರ್ ಪ್ರಶಸ್ತಿಯನ್ನು ನೀಡುತ್ತಿದ್ದು, ಈ ಪ್ರಶಸ್ತಿಯು ರೂ. 5,000/ಗಳ ನಗದು ಬಹುಮಾನ ಮತ್ತು ಅರ್ಹತಾ ಪ್ರಮಾಣ ಪತ್ರವನ್ನು ಹೊಂದಿದೆ.