ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ 2023
ಪ್ರೊ. ಮೌಂಜಿ ಜಿ. ಬಾವೆಂಡಿ
ಪ್ರೊ. ಲೂಯಿಸ್ ಇ. ಬ್ರೂಸ್ &
ಪ್ರೊ. ಎಲಿಕ್ಸಿ ಐ. ಅಕಿಮೊವ್
ಕ್ವಾಂಟಮ್ ಬಿಂದುಗಳ ಆವಿಷ್ಕಾರ ಮತ್ತು ಸಂಶ್ಲೇಷಣೆಗಾಗಿ ಮೌಂಜಿ ಜಿ. ಬಾವೆಂಡಿ, ಲೂಯಿಸ್ ಇ. ಬ್ರೂಸ್ ಮತ್ತು ಎಲಿಕ್ಸಿ ಐ. ಅಕಿಮೊವ್ ರವರಿಗೆ 2023 ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.
ನ್ಯಾನೊಕಣಗಳು ತುಂಬಾ ಚಿಕ್ಕದಾಗಿದ್ದು, ಅವುಗಳ ಗಾತ್ರವು ಅವುಗಳ ಗುಣಲಕ್ಷಣಗಳನ್ನು ನಿರ್ಧರಿಸುತ್ತದೆ. ನ್ಯಾನೊ ತಂತ್ರಜ್ಞಾನದ ಈ ಸಣ್ಣ ಘಟಕಗಳು ದೂರದರ್ಶನ, ಎಲ್ಇಡಿ ದೀಪಗಳು, ಇತ್ಯಾದಿ ಉಪಯೋಗಗಳಲ್ಲದೆ ಶಸ್ತ್ರಚಿಕಿತ್ಸಕರಿಗೆ ಗೆಡ್ಡೆಯನ್ನು ತೆಗೆಯುವಲ್ಲಿ ಸಹಕಾರಿಯಾಗಲಿದೆ