ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಅಧ್ಯಕ್ಷರ ಲೇಖನಿಯಿಂದ: ಮಾರ್ಚ್ 31, 2021

1 min read

ಹೊಸ ವರ್ಷವು ಉದಯಿಸುತ್ತಿದ್ದಂತೆ, ಕಳೆದ ವರ್ಷದ ಕನಸುಗಳನ್ನು ಪೂರೈಸಿಕೊಳ್ಳುವ ಮತ್ತು ನಮ್ಮ ಚಟುವಟಿಕೆಗಳಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವ ಆಕಾಂಕ್ಷೆಗಳು ಸಹ ಹೆಚ್ಚುತ್ತಿವೆ. ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುವಲ್ಲಿ ಅಥವಾ ವೃತ್ತಿಪರ ಕ್ಷೇತ್ರಗಳಲ್ಲಿ ಹೊಸ ದಿಗಂತಗಳನ್ನು ಮುಟ್ಟುವಲ್ಲಿ ನಾವಿನ್ಯತೆಗಳು ಜಗತ್ತಿನಾದ್ಯಂತ ಯಶಸ್ವಿ ಸಮಾಜಗಳ ಹೆಗ್ಗುರುತುಗಳಾಗಿವೆ. ಹೊಸ ಪ್ರಯತ್ನಗಳಿಗೆ ಕಳೆದಲವು ವರ್ಷಗಳಿಂದ ಹಲವಾರು ವೇದಿಕೆಗಳು ಲಭ್ಯವಿದ್ದು, ಅರ್ಥವ್ಯವಸ್ಥೆ, ಮೂಲಸೌಕರ್ಯ, ವ್ಯವಸ್ಥೆ, ಸ್ಪಂದನ ಶೀಲ ಮಾನವಸಂಪನ್ಮೂಲ ಮತ್ತು ಬೇಡಿಕೆಯಂತಹ ಐದು ಆಧಾರ ಸ್ತಂಭಗಳನ್ನು ಒಳಗೊಂಡ ಆತ್ಮನಿರ್ಭರ್ ಭಾರತ್,  2020, ಒಂದು ಹೊಸ ದೃಷ್ಟಿಕೋನವನ್ನು ತಂದಿದೆ. ಇದು ಅರ್ಥವ್ಯವಸ್ಥೆಯ ವಿವಿಧ ಆಯಾಮಗಳನ್ನು ಒಳಗೊಂಡಂತೆ ಪರಿಕಲ್ಪನೆಗಳು, ಉನ್ನತೀಕರಣ ಮತ್ತು ಮಾರುಕಟ್ಟೆಗೆ ಬೆಂಬಲವನ್ನು ನೀಡುತ್ತದೆ. 

ಈ ಹಿನ್ನೆಲೆಯಲ್ಲಿ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಎಂಬ ಮಾನದಂಡವು ಸ್ಥಳೀಯ ಸಂಪನ್ಮೂಲಗಳ ಜತೆಗೆ ಉದ್ಯಮಶೀಲತೆಗೂ ಒತ್ತು ನೀಡುತ್ತದೆ. ಸಾಮರ್ಥ್ಯಗಳು ಮತ್ತು ಯಶಸ್ಸನ್ನು ಉಪಯೋಗಿಸಿಕೊಳ್ಳಲು ದೂರದೃಷ್ಟಿ ಮತ್ತು ಕೌಶಲ್ಯಗಳೆರಡರಲ್ಲೂ ಸಿದ್ಧತೆನಡೆಸಬೇಕಾಗಿರುವ ಅಗತ್ಯತೆ ಇದೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಲಕರಣೆಗಳು ಬೆಳವಣಿಗೆಯ ಒಂದು ಪ್ರಮುಖ ಅಂಶವಾಗಿಗಳಾಗಿದ್ದು, ಇಂಟರ್ನೆಟ್ ಆಫ್ ಥಿಂಗ್ಸ್, ಕೃತಕ ಬುದ್ಧಿಮತೆ, ಬ್ಲಾಕ್ ಚೈನ್, ಸೆನ್ಸಾರ್‌ಗಳು ಮತ್ತು ರೋಬೋಟಿಕ್ಸ್ ನಂತಹ ಹೊಸ ಪೀಳಿಗೆಯ ತಂತ್ರಜ್ಞಾನಗಳು ಅಭೂತಪೂರ್ವ ಅವಕಾಶಗಳನ್ನು ಒದಗಿಸುತ್ತವೆ. ಯುವ ಜನಾಂಗವು ವಿಜ್ಞಾನ ಆಧಾರಿತ ಮತ್ತು ತಂತ್ರಜ್ಞಾನ ಆಧಾರಿತ ಹೊಸ ಸಾಹಸಗಳಿಗೆ ಕೈಹಾಕಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಸಾಮರ್ಥ್ಯವೃದ್ಧಿ ಮತ್ತು ಮಾರ್ಗದರ್ಶನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಬಹು-ಪಾಲುದಾರರ ಸಹಭಾಗಿತ್ವಗಳೊಂದಗೆ ಅಕಾಡೆಮಿಯು ಸುಗಮಗೊಳಿಸುವ ಮತ್ತು ಸಂಘಟಿಸುವ ಪಾತ್ರ ನಿರ್ವಹಿಸುತ್ತದೆ. ಹೊಸ ಸೌಲಭ್ಯಗಳಾದ ತರಬೇತುದಾರರ ತರಬೇತಿ ಕೇಂದ್ರ ಮತ್ತು ಸಂಪನ್ಮೂಲ ಸೃಜನಾ ಕೇಂದ್ರಗಳ ಮೂಲಕ ನಮ್ಮ ಪ್ರಯತ್ನಗಳು ಹೆಚ್ಚಿನ ಪ್ರಮಾಣದ ಅನುಷ್ಠಾಗೊಳ್ಳಲಿವೆ. ಈ ನಿಟ್ಟಿನಲ್ಲಿ ಕೈ ಜೋಡಿಸೋಣ.

2021ರ ವರ್ಷದ ಶುಭಾಶಯಗಳು.

– ಎಸ್. ಅಯ್ಯಪ್ಪನ್

ಮಾರ್ಚ್ 31, 2021

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content