ಅಂತರರಾಷ್ಟ್ರೀಯ ವೆಬಿನಾರ್: “ಮಣ್ಣಿನ ಸಂರಕ್ಷಣೆ ಮತ್ತು ಭೂ ಬಳಕೆ ಯೋಜನೆ”

ಬೆಂಗಳೂರು ವಿಶ್ವವಿದ್ಯಾನಿಲಯದ ಭೌಗೊಳಿಕ ವಿಭಾಗ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಜಂಟಿಯಾಗಿ ಭೌಗೋಳಿಕ ಮಾಹಿತಿ ತಂತ್ರಜ್ಞರ ಒಕ್ಕೂಟ  (ಯುಜಿಐಟಿ)ದ ಅಂತರರಾಷ್ಟ್ರೀಯ ವೆಬಿನಾರ್ ಕಾರ್ಯಕ್ರಮವನ್ನು ಡಿಸೆಂಬರ್ 23 – 24 ರಂದು ಆಯೋಜಿಸಲಾಗುತ್ತಿದೆ.

program logo
 • ನೋಂದಣಿ ಉಚಿತ
 • ಲಿಂಕ್ ಮೂಲಕ ನೋಂದಯಿಸಿಕೊಳ್ಳಿ
 • ಸಂಶೋಧನಾ ಸಾರಾಂಶ ಮತ್ತು ಪೂರ್ಣ ಸಂಶೋಧನಾ ಪ್ರಬಂಧ ಕಳುಹಿಸಲು ಕೊನೆಯ ದಿನಾಂಕ: ಡಿಸೆಂಬರ್ 18, 2020.
 • ವೆಬ್‌ನಾರ್ ಫ್ಲಾಟ್ ಫಾರಂ: Zoom
 • ನೋಂದಾವಣೆ ನಂತರ ವೆಬ್‌ನಾರ್‌ನಲ್ಲಿ ಭಾಗವಹಿಸಲು ಲಿಂಕ್ ಕಳುಹಿಸಲಾಗುವುದು
 • ಪ್ರಮಾಣ ಪತ್ರ ನೀಡಲಾಗುವುದು
 • ಅರ್ಹ ಮೂಲ ಸಂಶೋಧನಾ ಪ್ರಬಂಧಗಳನ್ನು “ಜಿಯೋಗ್ರಾಫಿಕ್ ಅನಾಲಿಸಿಸ್” ಮತ್ತು ಜಿಯೋ-ಐ”ಅಂತರರಾಷ್ಟ್ರೀಯ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗುವುದು
reg-img

ಈ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಿ

brochure-img

ಈ ಲಿಂಕ್ ಮೂಲಕ ಕಾರ್ಯಕ್ರಮ ಕೈಪಿಡಿ/ಮೊದಲನೇ ಪರಿಪತ್ರ ಪಡೆಯಿರಿ

ಸಂಶೋಧನಾ ಸಾರಾಂಶ ಮತ್ತು ಪೂರ್ಣ ಸಂಶೋಧನಾ ಪ್ರಬಂಧಗಳನ್ನು ksta.gok@gmail.com ಅಥವಾ geography@bub.ernet.in ಗೆ ಕಳುಹಿಸಿ

ಬೌದ್ಧಿಕ ಆಸ್ತಿ ಹಕ್ಕುಗಳು ರಾಷ್ಟ್ರೀಯ ವೆಬಿನಾರ್

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ ಮತ್ತು ಆದರ್ಶ ಸಮೂಹ ಸಂಸ್ಥೆ ಜಂಟಿಯಾಗಿ 2020ರ ಡಿಸೆಂಬರ್ 8 ರಿಂದ 11 ರವರೆಗೆ ‘ಬೌದ್ಧಿಕ ಆಸ್ತಿ ಹಕ್ಕುಗಳು ರಾಷ್ಟ್ರೀಯ ವೆಬಿನಾರ್’ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

Bank QR Code

2020ರ ಡಿಸೆಂಬರ್ 08 ರಿಂದ 11

ಈ ಲಿಂಕ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿ

ಸೂಚನೆ:

 • ನೋಂದಾವಣೆ ಉಚಿತ
 • ಪ್ರಮಾಣ ಪತ್ರ ಪಡೆಯಲು ರೂ. 99/-
 • ಪ್ಲಾಟ್‌ಫಾರ್ಮ್: ಸಿಸ್ಕೊ ವೆಬ್ಎಕ್ಸ್

ಪ್ರಮಾಣ ಪತ್ರ ಶುಲ್ಕವನ್ನು ಪಕ್ಕದಲ್ಲಿರುವ QR Image ಬಳಸಿ ಅಥವಾ ಈ ಕೆಳಕಂಡ ಬ್ಯಾಂಕ್ ವಿವರಕ್ಕೆ ಪಾವತಿಸಿ, ವಿವರವನ್ನು ಕಳುಹಿಸಿ :

 • A/c Name: Karnataka Science and Technology Academy
 • Bank: State Bank of India
 • A/c No. 64001018807
 • IFSC: SBIN0009045
 • Branch: Vidyaranyapura

ಉತ್ತಮ ಸಂಪರ್ಕಕ್ಕೆ ಕೆಲವೊಂದು ಸೂಚನೆಗಳು ಈ ಲಿಂಕ್ ನಲ್ಲಿ ನೀಡಲಾಗಿದೆ ತಪ್ಪದೆ ವೀಕ್ಷಿಸಿ

ಕಾರ್ಯಕ್ರಮದ ವಿವರ

ದಿನ 1: ಡಿಸೆಂಬರ್ 8, 2020 (ಮಂಗಳವಾರ)
110:30  — 10:33ಸ್ವಾಗತಡಾ. ಎ. ಎಂ. ರಮೇಶ್
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಕೆ.ಎಸ್.ಟಿ.ಎ.
210:33  — 10:38ಪ್ರಾಸ್ತಾವಿಕ ನುಡಿಶ್ರೀ ಕೆ.ಕೆ. ಭನ್ಸಾಲಿ
ಅಧ್ಯಕ್ಷರು, ಆದರ್ಶ ಸಮೂಹ ಸಂಸ್ಥೆಗಳು
310:38  — 10:43ಮೂಖ್ಯ ಅತಿಥಿಗಳ ನುಡಿಡಾ.ಪ್ರಕಾಶ್ ಎಂ.ಸೊಬರದ ನಿರ್ದೇಶಕರು (ತಾಂತ್ರಿಕ) ಇ, ಐಟಿ ಬಿಟಿ & ಎಸ್ ಟಿ
ಎಂ.ಡಿ. ಕೆಸ್ಟೆಪ್ಸ್, ಸದಸ್ಯ ಕಾರ್ಯದರ್ಶಿಗಳು, ಕೆ.ಎಸ್.ಟಿ.ಎ.
410:43  — 10:48ಪ್ರಧಾನ ಭಾಷಣಪ್ರೊ. ಎಸ್. ಅಯ್ಯಪ್ಪನ್
ಅಧ್ಯಕ್ಷರು, ಕೆ.ಎಸ್.ಟಿ.ಎ.
510:48  -10:58ಕಾರ್ಯಕ್ರಮದ ಪರಿಚಯಶ್ರೀ ಹೆಚ್. ಹೇಮಂತ್ ಕುಮಾರ್
ಕಾರ್ಯನಿರ್ವಾಹಕ ಕಾರ್ಯದರ್ಶಿ, ಕೆಎಸ್ ಸಿಎಸ್ ಟಿ .
610:58  — 11:00ವಂದನಾರ್ಪಣೆಡಾ.ಶಕುಂತಲಾ ಸ್ಯಾಮ್ಯುಲ್ಸನ್
ಪ್ರಾಂಶುಪಾಲರು, ಆದರ್ಶ ಕಾಲೇಜು, ಬೆಂಗಳೂರು  
ತಾಂತ್ರಿಕ ಅಧಿವೇಶನ            
111:00  — 12:15ತಂತ್ರಜ್ಞಾನ ಮತ್ತು ನಾವಿನ್ಯತೆ – ಶೈಕ್ಷಣಿಕ ವರ್ಗ ಮತ್ತು ಯುವ ಉದ್ಯಮದಾರರಿಗೆ ಐಪಿಆರ್ ಅಂತರ ಸಂಪರ್ಕ

ಶ್ರೀ ವಿವೇಕಾನಂದ ಸಾಗರ
IP ಅಟಾರ್ನಿ ಮತ್ತು ಸಮಾಲೋಚಕರು, ಕೆಎಸ್ ಸಿಎಸ್ ಟಿ .
212:15 — 1.30ಪೇಟೆಂಟ್ ಗಳು: ಮಾನದಂಡಗಳು, ವಿಷಯ, ವಿಧಾನ ಮತ್ತು ರಕ್ಷಣೆಡಾ. ಸರಸಿಜ ಪದ್ಮನಾಭನ್
ಪೇಟೆಂಟ್ ಏಜೆಂಟ್, ಬೆಂಗಳೂರು
ದಿನ 2: ಡಿಸೆಂಬರ್ 9, 2020 (ಬುಧವಾರ)
310:30 — 11:45GI ರಕ್ಷಣೆ ಮತ್ತು ಪ್ರೋತ್ಸಾಹ –
ಸಾಂಪ್ರದಾಯಿಕ ಜ್ಞಾನ
ಶ್ರೀ ಚಿನ್ನರಾಜು ನಾಯ್ಡು,
ಉಪ ರಿಜಿಸ್ಟ್ರಾರ್ ಆಫ್ ಜಿಯೋಗ್ರಫಿಕಲ್
ಇಂಡಿಕೇಷನ್, ಐಪಿ ಆಫೀಸ್, ಚನೈ
ಶ್ರೀ ಪ್ರಶಾಂತ್ ಕುಮಾರ್ ಬಿ
ಟ್ರೇಡ್ ಮಾರ್ಕ್ ಮತ್ತು ಜಿಐ ಹಿರಿಯ ಪರೀಕ್ಷಕರು
411:45 — 1:00ಕೈಗಾರಿಕಾ ವಿನ್ಯಾಸ ಮತ್ತು ರಕ್ಷಣೆ ಪ್ರಕರಣ ಅಧ್ಯಯನಗಳುಶ್ರೀ ನಾಗರಾಜ್ ಎಂ.ಜಿ.
ಯೋಜನಾ ಸಹಾಯಕರು, ಕೆಎಸ್ ಸಿಎಸ್ ಟಿ .
ದಿನ 3: ಡಿಸೆಂಬರ್ 10, 2020 (ಗುರುವಾರ)
510:30  — 10:33ಟ್ರೇಡ್ ಮಾರ್ಕ್ ನೋಂದಾವಣೆ ಪ್ರಕ್ರಿಯೆಶ್ರೀ ಎಂ. ಮೊಹಮ್ಮದ್ ಹಬೀಬುಲ್ಲಾ ಸಹಾಯಕ ರಿಜಿಸ್ಟ್ರಾರ್, ಟ್ರೇಡ್ ಮಾರ್ಕ್ಸ್ & GI.
ಟ್ರೇಡ್ ಮಾರ್ಕ್ ರಿಜಿಸ್ಟ್ರಿ, ಚೆನ್ನೈ
611:45  — 01:00ಟ್ರೇಡ್ ಮಾರ್ಕ್ ಉಲ್ಲಂಘನೆ ಮತ್ತು ಪ್ರಕರಣ ಅಧ್ಯಯನಗಳುಶ್ರೀ ಎಂ. ಜಿ. ಕೋದಂಡರಾಂ ಐಎಆರ್ (ನಿವೃತ್ತ), ಎನ್ಎಸಿಐಎನ್
ದಿನ 4: ಡಿಸೆಂಬರ್ 11, 2020 (ಶುಕ್ರವಾರ)
710:30  — 11:30ಕೃತಿಸ್ವಾಮ್ಯ, ಉಲ್ಲಂಘನೆ ಮತ್ತು ಕೃತಿಚೌರ್ಯ
ಮತ್ತು ಸಂಶೋಧನಾ ನೈತಿಕತೆ
ಶ್ರೀ ವಿವೇಕಾನಂದ ಸಾಗರ
IP ಅಟಾರ್ನಿ ಮತ್ತು ಸಮಾಲೋಚಕರು, ಕೆಎಸ್ ಸಿಎಸ್ ಟಿ .
811:30  — 12:30IP ವಾಣಿಜ್ಯೀಕರಣಡಾ. ಬಜಯ್ ಕುಮಾರ್ ಸಾಹು ಪ್ರಾದೇಶಿಕ ವ್ಯವಸ್ಥಾಪಕರು, ವಿಪ್ರೊ ಟೆಕ್ನಾಲಜಿ ಅಂಡ್ ಇನ್ನೋವೇಷನ್ ಸಪೋರ್ಟ್ ಸೆಂಟರ್, ಎನ್ಆರ್ಡಿಸಿ, ವಿಶಾಕ ಪಟ್ಟಣ
912 : 30  — 1:00ಸ್ಪರ್ಧಿಗಳ ಪ್ರಸ್ತುತಿ
ಮತ್ತು IP ಕ್ವಿಜ್
ಶ್ರೀ ನಾಗಾರ್ಜುನ್ ಎಂ.ಜಿ.
ಯೋಜನಾ ಸಹಾಯಕರು, ಕೆಎಸ್ ಸಿಎಸ್ ಟಿ .

ವಿಶ್ವ ಮಣ್ಣಿನ ದಿನ: ಡಿಸೆಂಬರ್ 05, 2020

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು 2020ರ ಡಿಸೆಂಬರ್ 05 ರಂದು ವಿಶ್ವ ಮಣ್ಣಿನ ದಿನವನ್ನು ಆಚರಿಸುತ್ತಿದೆ. ಬನ್ನಿ, ಆರೋಗ್ಯಕರ ಮಣ್ಣಿನ ಪ್ರಾಮುಖ್ಯತೆಯ ಬಗ್ಗೆ ಅರಿತು ಮಣ್ಣಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗೆ ಬದ್ಧರಾಗಿದ್ದೇವೆಂದು ದೃಡೀಕರಿಸೂಣ. ಅಕಾಡೆಮಿಯು 2020ರ ಡಿಸೆಂಬರ್ 5 ರಂದು ನಡೆಸಲಾಗುತ್ತಿರುವ ವಿಶ್ವ ಮಣ್ಣಿನ ದಿನ (WSD) ವೆಬಿನಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಈ ಆಚರಣೆಯಲ್ಲಿ ಕೈಜೋಡಿಸಿ

ಧ್ಯೇಯ ವಾಕ್ಯ: ಮಣ್ಣನ್ನು ಜೀವಂತವಾಗಿಡಿ, ಮಣ್ಣಿನ ಜೀವವೈವಿಧ್ಯತೆಯನ್ನು ರಕ್ಷಿಸಿ

2020ರ ಡಿಸೆಂಬರ್ 05; ಸಮಯ: 2:10ರಿಂದ 4:05

ಈ ಲಿಂಕ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿ

ಸೂಚನೆ:

 • ಪ್ರಮಾಣ ಪತ್ರ ನೀಡಲಾಗುವುದಿಲ್ಲ
 • ಪ್ಲಾಟ್‌ಫಾರ್ಮ್: ಸಿಸ್ಕೊ ವೆಬ್ಎಕ್ಸ್

ಉತ್ತಮ ಸಂಪರ್ಕಕ್ಕೆ ಕೆಲವೊಂದು ಸೂಚನೆಗಳು ತಪ್ಪದೆ ವೀಕ್ಷಿಸಿ

ಕಾರ್ಯಕ್ರಮದ ವಿವರ

2:15 – 2:20ಸ್ವಾಗತಡಾ. ಎ. ಎಂ ರಮೇಶ್
ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ
2:20 – 2:25ಪ್ರಸ್ತಾವಿಕ ನುಡಿಡಾ. ಪ್ರಕಾಶ್ ಎಂ. ಸೊರಬದ
ನಿರ್ದೇಶಕರು (ತಾಂತ್ರಿಕ), ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ/ಎಂಡಿ, ಕೆಸ್ಟೆಪ್ಸ್/ಸದಸ್ಯ ಕಾರ್ಯದರ್ಶಿಗಳು, ಕವಿತಂಅ
2:25-2:30ಅಧ್ಯಕ್ಷರ ನುಡಿಪ್ರೊ. ಎಸ್. ಅಯ್ಯಪ್ಪನ್
ಅಧ್ಯಕ್ಷರು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ
2:30-3:15ಸೆಷನ್ 1ಡಾ. ಬಿ. ಎಸ್. ದ್ವಿವೇದಿ
ನಿರ್ದೇಶಕರು, ಎನ್.ಬಿ.ಎಸ್.ಎಸ್. & ಎಲ್.ಯು.ಪಿ, ನಾಗ್ಪುರ
3:15-4:00ಸೆಷನ್ 2ಡಾ. ರಾಜೇಂದ್ರ ಹೆಗಡೆ
ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರು, ಎನ್.ಬಿ.ಎಸ್.ಎಸ್. & ಎಲ್.ಯು.ಪಿ, ಬೆಂಗಳೂರು
4:00-4:05ವಂದನಾರ್ಪಣೆಶ್ರೀ ಉಮೇಶ್ ವಿ. ಜಿ.
ವೈಜ್ಞಾನಿಕ ಅಧಿಕಾರಿಗಳು, ಅಕಾಡೆಮಿ

ತಮ್ಮ ಮಾಹಿತಿಗಾಗಿ

ತಿಂಗಳ ವಿಜ್ಞಾನ ಉಪನ್ಯಾಸ ಮಾಲೆ -4 : ಹವಾಮಾನ ಬದಲಾವಣೆ: ಮೂಲಗಳು, ಪರಿಣಾಮಗಳು, ಪ್ರತಿಕ್ರಿಯೆಗಳು

ತಿಂಗಳ ವಿಜ್ಞಾನ ಉಪನ್ಯಾಸ ಮಾಲೆ -4 : ಹವಾಮಾನ ಬದಲಾವಣೆ: ಮೂಲಗಳು, ಪರಿಣಾಮಗಳು, ಪ್ರತಿಕ್ರಿಯೆಗಳು

ಅಕಾಡೆಮಿಯ ವತಿಯಿಂದ ಚಾಮರಾಜನಗರದ ಗ್ರಾವಿಟಿ ವಿಜ್ಞಾನ ಪ್ರತಿಷ್ಠಾನದ ಸಹಯೋಗದಲ್ಲಿ ದಿನಾಂಕ 21.11.2020ರಂದು ಸಂಜೆ 5:15 ಗಂಟೆಗೆ ‘ತಿಂಗಳ ವಿಜ್ಞಾನ ಉಪನ್ಯಾಸ ಮಾಲೆ ಕಾರ್ಯಕ್ರಮದಡಿಯಲ್ಲಿ ‘ಹವಾಮಾನ ಬದಲಾವಣೆ: ಮೂಲಗಳು, ಪರಿಣಾಮಗಳು, ಪ್ರತಿಕ್ರಿಯೆಗಳು’ ಎಂಬ ಉಪನ್ಯಾಸವನ್ನು ಆಯೋಜಿಸಲಾಗಿದೆ

ಪ್ರೊ. ಕೆ. ಎಸ್. ಲೋಕೇಶ್

 • ವಿಶ್ರಾಂತ ಕುಲಸಚಿವರು ಮತ್ತು ಪ್ರಾಧ್ಯಾಪಕರು,
 • ಜೆ. ಎಸ್.ಎಸ್. ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯ
 • ಬ್ರಿಟೀಷ್ ಕೌನ್ಸಿಲ್ ಫೆಲೋ (ಯು.ಕೆ) ಮೆಲಾನ್ ಸ್ಕಾಲರ್ (ಯು.ಎಸ್.ಎ.)

ಇಲ್ಲಿ ನೋಂದಾಯಿಸಿ

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:

gravitysciencefoundation@gmail.com

kstatraining@gmail.com

9742065065

ಭೌತವಿಜ್ಞಾನದಲ್ಲಿ ಮೂರು ದಿನಗಳ ವೆಬಿನಾರ್

ಭೌತವಿಜ್ಞಾನದಲ್ಲಿ ಮೂರು ದಿನಗಳ ವೆಬಿನಾರ್

ಅಕಾಡೆಮಿಯು ನವೆಂಬರ್ 24 ರಿಂದ 26ರವರೆಗೆ ಭೌತವಿಜ್ಞಾನದಲ್ಲಿ 03 ದಿನಗಳ ವೆಬಿನಾರ್ ಕಾರ್ಯಕ್ರಮವನ್ನು ನಡೆಸುತ್ತಿದೆ.

ನೋಂದಣಿ: ಉಚಿತ

ಪ್ರಮಾಣ ಪತ್ರ: ರೂ. 99

ಈ ಲಿಂಕ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ

ಹಣ ಕಳುಹಿಸಲು QR ಕೋಡ್ ಬಳಸಿ ಅಥವಾ ಅಕಾಡೆಮಿಯ ಖಾತೆಗೆ ಜಮಾ ಮಾಡಿ ವಿವರ ಕಳುಹಿಸಿ

 • A/c Name: Karnataka Science and Technology Academy
 • Bank: State Bank of India
 • A/c No. 64001018807
 • IFSC: SBIN0009045
 • Branch: Vidyaranyapura

ಕಾರ್ಯಕ್ರಮದ ವಿವರ

ದಿನ 1: ನವೆಂಬರ್ 24, 2020 [ಮಂಗಳವಾರ]

ಬೆಳಗ್ಗೆ 10:00 ರಿಂದ – 11:00 | ಸ್ವಾಗತ ಮತ್ತು ಕಾರ್ಯಕ್ರಮದ ಹಿನ್ನಲೆ

ಬೆಳಗ್ಗೆ 11:00 ರಿಂದ ಮಧ್ಯಾಹ್ನ 12:15 – ಸ್ಪೆಕ್ಟ್ರೋಸ್ಕೋಪಿಯ ಮೂಲಭೂತ ಅಂಶಗಳು

ಮಧ್ಯಾಹ್ನ 12:15 – 01:30 – ಕ್ವಾಂಟಮ್ ರಸಾಯನಶಾಸ್ತ್ರದ ಮೂಲಭೂತ ಅಂಶಗಳು

ದಿನ 2: ನವೆಂಬರ್ 25, 2020 [ಬುಧವಾರ]

ಬೆಳಗ್ಗೆ 11:00 ರಿಂದ ಮಧ್ಯಾಹ್ನ 12:15 –  NMR ಸ್ಪೆಕ್ಟ್ರೋಸ್ಕೋಪಿಯ ತತ್ವಗಳು ಮತ್ತು ಅನ್ವಯಿಕಗಳು

ಮಧ್ಯಾಹ್ನ 12:15 – 01:30 – ಅಣು ರಚನೆ ಮತ್ತು ಸ್ಪೆಕ್ಟ್ರೋಸ್ಕೊಪಿ

ದಿನ 3: ನವೆಂಬರ್ 26, 2020 [ಗುರುವಾರ]

ಬೆಳಗ್ಗೆ 11:00 ರಿಂದ ಮಧ್ಯಾಹ್ನ 12:15 – ಕ್ವಾಂಟಂ ಟೆಕ್ನಾಲಜೀಸ್

ಮಧ್ಯಾಹ್ನ 12:15 – 01:30 – ನ್ಯಾನೊ ತಂತ್ರಜ್ಞಾನ/ಸಾಫ್ಟ್ ಮ್ಯಾಟರ್ಸ್

ನವೆಂಬರ್ 07: ಈ ದಿನ, ಅಂದು

ನವೆಂಬರ್ 07: ಸರ್ ಸಿ ವಿ ರಾಮನ್ (1888-1970) ಜನ್ಮ ದಿನ

ಚಂದ್ರಶೇಖರ ವೆಂಕಟ ರಾಮನ್

ತಮ್ಮ ಸಂಶೋದನೆಯಿಂದ ವಿಶ್ವವಿಖ್ಯಾತಿಯನ್ನು ಪಡೆದರಲ್ಲದೆ ವೈಜ್ಞಾನಿಕ ಭೂಪಟದಲ್ಲಿ ಭಾರತಕ್ಕೆ ಒಂದು ಸ್ಥಾನವನ್ನು ತಂದುಕೊಟ್ಟರು

ಬೆಳಕಿನ ಚದುರುವಿಕೆಯ ಬಗ್ಗೆ ಅವರ ಸಂಶೋಧನೆಗೆ 1930ರಲ್ಲಿ ಭೌತಶಾಸ್ತ್ರಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ಪಡೆದರು. ಇವರು ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಮೊದಲ ಏಷ್ಯನ್ನರು.

ರಾಮನ್ ಸಂಗೀತ ವಾದ್ಯಗಳ ಅಕೋಸ್ಟಿಕ್ಸ್ ನಲ್ಲಿಯೂ ಸಹ ಕೆಲಸ ಮಾಡಿದ್ದಾರೆ. ಭಾರತೀಯ ತಾಳವಾದ್ಯಗಳಾದ ಮೃದಂಗ ಮತ್ತು ತಬಲಾಗಳ ಮಾದುರ್ಯದ ಧ್ವನಿಯ ಸ್ವರೂಪವನ್ನು ಅಧ್ಯಯನ ಮಾಡಿದವರಲ್ಲಿ ಇವರು ಮೊದಲಿಗರು.

 • 1888, ನವೆಂಬರ್ 7 – ತಿರುಚ್ಚಿರಾಪಳ್ಳಿಯ ಸಮೀಪದ ತಿರುವನಾಯ್ಕಲ್ ನಲ್ಲಿ ಜನನ
 • 1892-1902 – ವಿಶಾಖಪಟ್ಟಣದಲ್ಲಿ ಆರಂಭಿಕ ಶಿಕ್ಷಣ
 • 1900 – ಮೆಟ್ರಿಕ್ಯುಲೇಷನ್ ಪರೀಕ್ಷೆ
 • 1904 – ಬಿ. ಎ. ಮೊದಲನೇ ದರ್ಜೆ, ಚಿನ್ನದ ಪದಕ
 • 1906 -ಲಂಡನ್ ನ ಫಿಲೊಸೊಫಿಕಲ್ ಮ್ಯಾಗಜಿನ್ ನಲ್ಲಿ ಮೊದಲ ಲೇಖನ ಪ್ರಕಟ
 • 1907 – ಎಂ.ಎ. ಫೈನಾನ್ಶಿಯಲ್ ಸಿವಿಲ್ ಸರ್ವೀಸ್ ಪರೀಕ್ಷೆ, ಮೊದಲನೇ ರಾಂಕ್
  • ಲೋಕಸುಂದರಿಯೊಂದಿಗೆ ಮದುವೆ
  • ಸಹಾಯಕ ಲೆಕ್ಕಾಧಿಕಾರಿ ಜನರಲ್, ಭಾರತೀಯ ಹಣಕಾಸು ಇಲಾಖೆ, ಕಲ್ಕತ್ತ
  • ಕಲ್ಕತ್ತಾದ ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್ (ಐಎಸಿಎಸ್) ನಲ್ಲಿ ಸಂಶೋಧನೆ ಆರಂಭ
 • 1921 – ಮೊದಲ ವಿದೇಶ ಪ್ರವಾಸ (ಇಂಗ್ಲೆಂಡಿಗೆ) .
 • 1924 – ಲಂಡನ್ನಿನ ರಾಯಲ್ ಸೊಸೈಟಿಯ ಚುನಾಯಿತ ಫೆಲೋ
 • 1928, ಫೆಬ್ರವರಿ 28 – ಕಲ್ಕತ್ತಾದ ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್ (ಐಎಸಿಎಸ್) ನಲ್ಲಿ ರಾಮನ್ ಪರಿಣಾಮದ ಆವಿಷ್ಕಾರ
 • 1928, ಮಾರ್ಚ್ 16 – ದಕ್ಷಿಣ ಭಾರತೀಯ ವಿಜ್ಞಾನ ಸಂಘದ ವತಿಯಿಂದ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ರಾಮನ್ ಪರಿಣಾಮದ ಬಗ್ಗೆ ಮೊದಲ ಸಾರ್ವಜನಿಕ ಉಪನ್ಯಾಸ
 • 1930 – ಭೌತಶಾಸ್ತ್ರಕ್ಕೆ ನೊಬೆಲ್ ಪ್ರಶಸ್ತಿ .
  • ರಾಯಲ್ ಸೊಸೈಟಿಯ ಹ್ಯೂಸ್ ಮೆಡಲ್
 • 1933, ಮಾರ್ಚ್ 31 – ನಿರ್ದೇಶಕರು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು
 • 1934 – ರಾಮನ್ ರಿಂದ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ಪ್ರಾರಂಭ
 • 1948 – ರಾಮನ್ ಸಂಶೋಧನಾ ಸಂಸ್ಥೆ ಸ್ಥಾಪನೆ.
 • 1954 – ಭಾರತ ರತ್ನ ಪ್ರಶಸ್ತಿ ಪ್ರದಾನ
 • 1970, ನವೆಂಬರ್ 21 – ಬೆಂಗಳೂರಿನಲ್ಲಿ ನಿಧನ

ನವೆಂಬರ್ 07: ಪ್ರೊ. ಮೇರಿ ಕ್ಯೂರಿ (1867-1934) ಜನ್ಮ ದಿನ

ಪ್ರೊ. ಮೇರಿ ಸ್ಕ್ಲೋಡೊವ್ಸ್ಕಾ ಕ್ಯೂರಿ ಒಬ್ಬ ಪೋಲಿಷ್-ಫ್ರೆಂಚ್ ರಸಾಯನಶಾಸ್ತ್ರಜ್ಞೆ ಮತ್ತು ಭೌತವಿಜ್ಞಾನಿಯಾಗಿದ್ದು, ಇವರು ಯುರೇನಿಯಂ ಖನಿಜಗಳ ಮೇಲೆ ನಡೆಸಿದ ಪ್ರಯೋಗಗಳಿಂದ ಪೊಲೊನಿಯಂ ಮತ್ತು ರೇಡಿಯಂ ಎಂಬ ಎರಡು ಹೊಸ ಧಾತುಗಳ ಆವಿಷ್ಕಾರಕ್ಕೆ ಕಾರಣವಾಯಿತು.

ಮೇರಿ ಕ್ಯೂರಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ ಹಾಗೂ ಇವರು ರಸಾಯನ ವಿಜ್ಞಾನದಲ್ಲಿಯೂ ಸಹ ನೊಬೆಲ್ ಪ್ರಶಸ್ತಿ ಪಡೆದಿದ್ದಾರೆ. ಇವರು ಎರಡು ಬಾರಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ

ಫ್ರೆಂಚ್ ಭೌತಶಾಸ್ತ್ರಜ್ಞ ಪಿಯರೆ ಕ್ಯೂರಿಯನ್ನು 1895ರ ಜುಲೈ 26ರಂದು ಮೇರಿ ಮದುವೆಯಾದರು.

ಎರಡು ತಲೆಮಾರುಗಳಲ್ಲಿ ಆಕೆಯ ಕುಟುಂಬಕ್ಕೆ ಐದು ನೊಬೆಲ್ ಪ್ರಶಸ್ತಿಗಳು ಲಭಿಸಿವೆ.

ಸರ್ ಸಿ ವಿ ರಾಮನ್ ಮತ್ತು ರಾಮನ್ ಪರಿಣಾಮ

ಸರ್. ಸಿ. ವಿ ರಾಮನ್ ರವರ 132ನೇ ಜನ್ಮ ದಿನದ ಆಚರಣೆಯ ಪ್ರಯುಕ್ತ ಅಕಾಡೆಮಿಯು ಗ್ರಾವಿಟಿ ವಿಜ್ಞಾನ ಸಂಸ್ಥೆ, ಚಾಮರಾಜನಗರ ಇವರ ಸಹಯೋಗದಲ್ಲಿ ಉಪನ್ಯಾಸವನ್ನು ಆಯೋಜಿಸುತ್ತಿದೆ.

ದಿನಾಂಕ: 07.11.2020; ಸಮಯ: ಮದ್ಯಾಹ್ನ 4:00 ಗಂಟೆಗೆ

ಉಪನ್ಯಾಸ : ಸರ್ ಸಿ ವಿ ರಾಮನ್ ಮತ್ತು ರಾಮನ್ ಪರಿಣಾಮ

ಸಂಪನ್ಮೂಲ ತಜ್ಞರು: ಪ್ರೊ. ಕೆ. ಎಸ್. ಮಲ್ಲೇಶ್, ನಿವೃತ್ತ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಭೌತಶಾಸ್ತ್ರ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು

ಆಸಕ್ತರು ಈ ಲಿಂಕ್ ಮೂಲಕ ವೆಬಿನಾರ್ ಉಪನ್ಯಾಸಕ್ಕೆ ನೋಂದಾಯಿಸಿಕೊಳ್ಳಬಹುದಾಗಿದೆ:

ಹ್ಯಾಲೋವಿನ್ ನೀಲ ಚಂದ್ರ – 2020

ನಮಗೆಲ್ಲ ತಿಳಿದಿರುವಂತೆ, ಒಂದು ವರ್ಷದಲ್ಲಿ 12 ಹುಣ್ಣಿಮೆಗಳು, ಅಂದರೆ ತಿಂಗಳಿಗೊಮ್ಮೆ, ಪ್ರತಿ ಋತುವಿನಲ್ಲಿ ಮೂರು. ಪ್ರತಿ ಹುಣ್ಣಿಮೆಯು 29.5 ದಿನಗಳಿಂದ ಕೂಡಿದ್ದು, ಚಂದ್ರನು 12 ಪೂರ್ಣ ಹುಣ್ಣಿಮೆಗಳನ್ನು ಪೂರ್ಣಗೊಳಿಸಲು 354 ದಿನಗಳು ಬೇಕಾಗುತ್ತದೆ. ವರ್ಷದ ಉಳಿಕೆ ದಿನಗಳು ಸೇರುತ್ತಾ ಬಂದು ಎರಡು ವರೆ ವರ್ಷಗಳಿಗೊಮ್ಮೆ ಒಂದೇ ಕ್ಯಾಲೆಂಡರ್ ವರ್ಷದಲ್ಲಿ 13 ಹುಣ್ಣಿಮೆಗಳು ಕಾಣಿಸಿಕೊಳ್ಳುತ್ತವೆ, ಈ ಹೆಚ್ಚುವರಿ ಹುಣ್ಣಿಮೆ ಒಂದು ಅಪರೂಪದ ಘಟನೆಯಾಗಿದ್ದು, ಇದನ್ನು ನೀಲ ಚಂದ್ರ ಅಥವಾ ಬ್ಲೂ ಮೂನ್ ಎಂದು ಕರೆಯಲಾಗುತ್ತದೆ.

 • ಬ್ಲೂ ಮೂನ್ ಪ್ರತಿ 19 ವರ್ಷಗಳಿಗೊಮ್ಮೆ ಏಳು ಬಾರಿ ಸಂಭವಿಸುತ್ತದೆ.
 • ಹ್ಯಾಲೋವೀನ್ ನ ನೀಲಿ ಚಂದ್ರ ಅಕ್ಟೋಬರ್ 1ರ ನಂತರದ ಎರಡನೇ ಹುಣ್ಣಿಮೆ.
 • ಅಮೇರಿಕಾದ ನ್ಯಾಷನಲ್ ಎರೋನಾಟಿಕ್ಸ್ ಅಂಡ್ ಸ್ಪೇಸ್ ಅಡಮಿನಿಸ್ಟ್ರೇಷನ್ (ನ್ಯಾಸ)ದ ಉಲ್ಲೇಖದಂತೆ 1883ರಲ್ಲಿ ಕ್ರಾಕಟೋವಾ ಎಂಬ ಇಂಡೋನೇಷ್ಯಾದ ಜ್ವಾಲಾಮುಖಿ ಸ್ಫೋಟಗೊಂಡು ಬೂದಿ ಆಕಾಶಕ್ಕೆ ಚದುರಿದ್ದರಿಂದ ಹಾಗೂ  ಈ ಬೂದಿ ಮೋಡಗಳಲ್ಲಿ ಕೆಂಪು ಕಿರಣಗಳನ್ನು ಚದುರಿಸಲು ಸರಿಯಾದ ಗಾತ್ರದ ಕಣಗಳನ್ನು ಹೊಂದಿದ್ದರಿಂದ ಚಂದ್ರ ನೀಲಿಯಾಗಿ ಕಾಣಲು ಕಾರಣವಾಯಿತು. ಇದೊಂದು ಅಪರೂಪದ ಘಟನೆ .
 • ಅಕ್ಟೋಬರ್ 31ರ ರಾತ್ರಿ ಹ್ಯಾಲೋವೀನ್ ನೀಲಿ ಚಂದ್ರ ಕಾಣಲಿದೆ.
 • ನಾಸಾ ದ ಪ್ರಕಾರ, ಮುಂದಿನ ಹ್ಯಾಲೋವೀನ್ ಬ್ಲೂ ಮೂನ್ 2039ರಲ್ಲಿ ಕಾಣಲಿದೆ. ಕಳೆದ ಬಾರಿ ಇಂತಹ ವಿದ್ಯಮಾನವನ್ನು 1944ರಲ್ಲಿ ಕಾಣಲಾಗಿತ್ತು.
 • 2020 ನಿಜಕ್ಕೂ ಆಕಾಶ ನೋಡುವವರಿಗೆ ಬಹಳ ವಿಶೇಷ ವರ್ಷ. ಈ ವರ್ಷ ಮೂರು ಸೂಪರ್ ಮೂನ್ ಗಳು, ನಾಲ್ಕು ಚಂದ್ರಗ್ರಹಣಗಳು ಮತ್ತು ಒಂದು ನೀಲ ಚಂದ್ರ ಸೇರಿದಂತೆ ಒಟ್ಟು 13 ಹುಣ್ಣಿಮೆಗಳು ನಾವು ವೀಕ್ಷಿಸಿದ್ದೇವೆ. ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮೂರು ಸೂಪರ್ ಮೂನ್ ಗಳನ್ನು ನೋಡಲಾಗಿತ್ತು.

ವರ್ಷದ ಉಳಿದ ಆಕಾಶ ಚಟುವಟಿಕೆಗಳು ನವೆಂಬರ್ 30 ಮತ್ತು ಡಿಸೆಂಬರ್ 29 ರಂದು ನಡೆಯಲಿದೆ. ನವೆಂಬರ್ ನಲ್ಲಿ ಬೀವರ್ ಅಥವಾ ಫ್ರೋಸ್ಟಿ ಮೂನ್ ಮತ್ತು ಒಂದು ಪೆಂಬ್ರೋಲ್ ಚಂದ್ರ ಗ್ರಹಣವನ್ನು ನಾವು ನೋಡಲಿದ್ದೇವೆ ಮತ್ತು 2021ಕ್ಕೆ ಎರಡು ದಿನಗಳ ಮುಂಚೆ ನಾವು ಶೀತಲ ಚಂದ್ರನನ್ನು ನೋಡಲಿದ್ದೇವೆ. ಡಿಸೆಂಬರ್ ನಲ್ಲಿ ಹುಣ್ಣಿಮೆಯನ್ನು ಶೀತಚಂದ್ರ ಎಂದು ಕರೆಯಲಾಗುತ್ತದೆ, ಏಕೆಂದರೆ ತಾಪಮಾನವು ತೀವ್ರವಾಗಿ ಇಳಿಮುಖವಾಗುತ್ತದೆ ಮತ್ತು ಬೀವರ್ ಚಂದ್ರ ನವೆಂಬರ್ ಮೊದಲ ಹುಣ್ಣಿಮೆಯಾಗಿದೆ.

ಡಾ. ಆನಂದ್ ಆರ್, ಹಿರಿಯ ವೈಜ್ಞಾನಿಕ ಅಧಿಕಾರಿ

ನೊಬೆಲ್ ಪಾರಿತೋಷಕ ಉಪನ್ಯಾಸ ಸರಣಿ 2020

ನೊಬೆಲ್ ಪಾರಿತೋಷಕ ಉಪನ್ಯಾಸ ಸರಣಿ 2020

ಈ ಪುಟದ ನವೀಕರಣ ದಿನಾಂಕ This Page was last updated on ಅಕ್ಟೋಬರ್ 28th, 2020 at 03:37 ಅಪರಾಹ್ನ

ಅಕಾಡೆಮಿಯು 2020ರ ನವೆಂಬರ್ 2 ಮತ್ತು 3 ರಂದು (ಸೋಮವಾರ & ಮಂಗಳವಾರ) ನೊಬೆಲ್ ಪ್ರಶಸ್ತಿ 2020 ಕುರಿತು ಉಪನ್ಯಾಸ ಸರಣಿಯನ್ನು ನಡೆಸುತ್ತಿದೆ. ಆಸಕ್ತರು ಭಾಗವಹಿಸಲು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ಈ ಲಿಂಕ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ

ಈ ಲಿಂಕ್ ಮೂಲಕ ಕಾರ್ಯಕ್ರಮದ ಕೈಪಿಡಿ ಪಡೆಯಬಹುದಾಗಿದೆ

nobel

ವಿಶ್ವ ಆಹಾರ ದಿನ 2020

ಅಕ್ಟೋಬರ್ 16, 2020: ಧ್ಯೇಯ ವಾಕ್ಯ- ಒಟ್ಟಾಗಿ., ಬೆಳೆಯಿರಿ, ಪೋಷಿಸಿ, ಉಳಿಸಿ. ನಮ್ಮ ಕ್ರಿಯೆಗಳೇ ನಮ್ಮ ಭವಿಷ್ಯ

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಪ್ರತಿ ವರ್ಷ ಅಕ್ಟೋಬರ್ 16ನ್ನು ವಿಶ್ವ ಆಹಾರ ದಿನವನ್ನಾಗಿ ಮೀಸಲಿಟ್ಟಿದೆ. ವಿಶ್ವ ಆಹಾರ ದಿನ 2020 ಕೂಡ FAOನ 75ನೇ ವಾರ್ಷಿಕೋತ್ಸವವೂ ಆಗಿದೆ. ಆರಂಭದಲ್ಲಿ FAO ಸ್ಥಾಪನೆಯ ನೆನಪಿಗಾಗಿ ವಿಶ್ವ ಆಹಾರ ದಿನವನ್ನು ಆರಂಭಿಸಲಾಯಿತು. ಕ್ರಮೇಣ, ಜಗತ್ತಿನಾದ್ಯಂತ ಆಹಾರ ಕೊರತೆ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆಹಾರ ವ್ಯವಸ್ಥೆಗಳನ್ನು ಪುನಶ್ಚೇತನಗೊಳಿಸುವ ಉದ್ದೇಶಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ಎಫ್. ಎ. ಓ. ಗೆ 75 ವರ್ಷಗಳು

 • ಜೀವನವನ್ನು ಸುಧಾರಿಸುವ ಬದ್ಧತೆಯೊಂದಿಗೆ 1945ರಲ್ಲಿ ಎಫ್. ಎ. ಓ. ಸ್ಥಾಪನೆಯಾಯಿತು.
 • 194 ಸದಸ್ಯ ರಾಷ್ಟ್ರಗಳು ಮತ್ತು ವಿಶ್ವದಾದ್ಯಂತ 130 ಕ್ಕೂ ಹೆಚ್ಚು ದೇಶಗಳಲ್ಲಿ ಎಫ್. ಎ. ಓ ಕಾರ್ಯನಿರ್ವಹಿಸುತ್ತದೆ.
 • ಹಸಿವಿನ ಕೊನೆ ಮತ್ತು ನಮ್ಮ ಆಹಾರ ವ್ಯವಸ್ಥೆಯಲ್ಲಿ ಪರಿವರ್ತನೆ ತರಲು ಪ್ರತಿಯೊಬ್ಬರೂ ತಮ್ಮ ಕೊಡುಗೆಯನ್ನು ನೀಡಬಹುದು.

ಚಟುವಟಿಕೆ ಪುಸ್ತಕ – ಆಹಾರ ವೀರರು

 1. ಪ್ರಕಟಣೆಗಳ ವರ್ಷ: 2020
 2. ಪ್ರಕಾಶನ ಸ್ಥಳ: ರೋಮ್, ಇಟಲಿ
 3. ಪುಟಗಳು: #24 ಪು.
 4. ISBN: 978-92-5-132979-5
 5. ಲೇಖಕರು: ಎಫ್. ಎ. ಓ
 6. ಪ್ರಕಾಶಕ: ಎಫ್. ಎ. ಓ

ಹೆಚ್ಚಿನ ವಿವರಗಳನ್ನು ಈ ಲಿಂಕ್ ಮೂಲಕ ಪಡೆಯಿರಿ

ಹಕ್ಕುಗಳು 2019- ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ. Copyright (c) 2019. Karnataka Science & Technology Academy
ಈ ವೆಬ್‌ಸೈಟ್ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಗೆ ಸೇರಿದೆ. This is the official website of Karnataka Science and Technology Academy
Skip to content