Skip to content
ನವೆಂಬರ್ 21: ಈ ದಿನ, ಅಂದು – ಡಾ.ಕೆ.ಚಂದ್ರಶೇಖರನ್ ರವರ ಜನ್ಮದಿನ
- 1920ರ ನವೆಂಬರ್ 21ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಬಾಪಟ್ಲದಲ್ಲಿ ಜನಿಸಿದರು.
- ಭಾರತದಲ್ಲಿ ಸ್ವಾತಂತ್ರದ ನಂತರದ ಗಣಿತದ ಬೆಳವಣಿಗೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.
- ಗಣಿತದಲ್ಲಿ ಅವರ ಆಸಕ್ತಿಗಳು ವಿಶ್ಲೇಷಣೆ ಮತ್ತು ವಿಶ್ಲೇಷಣಾ ಸಂಖ್ಯಾ ಸಿದ್ಧಾಂತದ ಸುತ್ತ ಕೇಂದ್ರೀಕೃತವಾದವು.
- ಇವರು ಟಾಟಾ ಇನ್ ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಟಿ.ಐ.ಎಫ್.ಆರ್ ) ನಲ್ಲಿ ಸ್ಕೂಲ್ ಆಫ್ ಮ್ಯಾಥಮೆಟಿಕ್ಸ್ ನ ಸಂಸ್ಥಾಪಕರು
- 20ನೇ ಶತಮಾನದ ಪ್ರಮುಖ ಗಣಿತಶಾಸ್ತ್ರಜ್ಞರಲ್ಲಿ ಒಬ್ಬರಾದ ಇವರು, ಟಿ.ಐ.ಎಫ್.ಆರ್ ಅನ್ನು ಗಣಿತದ ವಿಶ್ವಪ್ರಸಿದ್ಧ ಕೇಂದ್ರವನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ನವೆಂಬರ್ 21: ಈ ದಿನ, ಅಂದು – ಬಿಸಿ ಗಾಳಿಯ ಬಲೂನು :- ಮೊದಲ ಮಾನವ ಸಹಿತ ಹಾರಾಟ
- 1783ರ ನವೆಂಬರ್ 21ರಂದು ಫ್ರಾನ್ಸ್ ನ ಪ್ಯಾರಿಸ್ ನಲ್ಲಿ ಮಾಂಟ್ ಗೋಲ್ಫೈಯರ್ ಸಹೋದರರು ಕಾಗದ ಮತ್ತು ರೇಷ್ಮೆಯಿಂದ ತಯಾರಿಸಿದ ಬಿಸಿ ಗಾಳಿಯ ಬಲೂನು ಮೊದಲ ಮಾನವ ಸಹಿತ ಹಾರಾಟ ನಡೆಸಿತು.
- ಬಲೂನ್ ನಲ್ಲಿ ಫ್ರಾಂಕೋಯಿಸ್ ಪಿಲಾತ್ರ್ ಡಿ ರೋಜಿಯರ್ ಮತ್ತು ಅರ್ಲ್ಯಾಂಡರ್ಸ್ ನ ಮಾರ್ಕ್ವಿಸ್ ಎಂಬ ಇಬ್ಬರು ವ್ಯಕ್ತಿಗಳು ಪ್ರಯಾಣಿಸಿದರು
- ಈ ಹಾರಾಟದಲ್ಲಿ ಬಲೂನ್ ಸುಮಾರು 500 ಅಡಿ ಎತ್ತರವನ್ನು ತಲುಪಿದಲ್ಲದೆ 51/2 ಮೈಲುಗಳ ಪ್ರಯಾಣ ನಡೆಸಿ 25 ನಿಮಿಷಗಳ ನಂತರ ಸುರಕ್ಷಿತವಾಗಿ ಧರೆಗಿಳಿಯಿತು
Skip to content