ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ನವೆಂಬರ್ 11: ಈ ದಿನ, ಅಂದು

1 min read

ನವೆಂಬರ್ 11: ಅಮೆರಿಸಿಯಂ ಮತ್ತು ಕ್ಯೂರಿಯಂ ಗಳ ಆವಿಷ್ಕಾರ ಪ್ರಕಟಣೆ

  • ಅಮೆರಿಸಿಯಂ ಮತ್ತು ಕ್ಯೂರಿಯಂ ಗಳ ಆವಿಷ್ಕಾರವನ್ನು ನವೆಂಬರ್ 11ರಂದು ಮಕ್ಕಳ ರೇಡಿಯೋ ರಸಪ್ರಶ್ನೆ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಗ್ಲೆನ್ ಥಿಯೋಡೊರ್ ಸೀಬೋರ್ಗ್ ರವರು ಪ್ರಕಟಿಸಿದರು.
  • ರಸಾಯನ ವಿಜ್ಞಾನದಲ್ಲಿ ಟ್ರಾನ್ಸ್ಯುರೇನಿಯಂ ಧಾತುಗಳ ಆವಿಷ್ಕಾರಕ್ಕಾಗಿ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಎಡ್ವಿನ್ ಮ್ಯಾಟಿಸನ್ ಮ್ಯಾಕ್ಮಿಲನ್ ಮತ್ತು ಗ್ಲೆನ್ ಥಿಯೋಡೊರ್ ಸೀಬೋರ್ಗ್ ರವರುಗಳಿಗೆ ಜಂಟಿಯಾಗಿ 1951ರ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.”

ಅಮೆರಿಸಿಯಂ (Am)

  • ಆವರ್ತಕ ಕೋಷ್ಟಕದಲ್ಲಿ ಆಕ್ಟಿನಾಯ್ಡ್ ಸರಣಿಯ ಕೃತಕ ರಾಸಾಯನಿಕ ಧಾತು (ಪರಮಾಣು ಸಂಖ್ಯೆ 95) .
  • ಪ್ಲುಟೋನಿಯಂ-239 (ಪರಮಾಣು ಸಂಖ್ಯೆ 94) ನಿಂದ ಕೃತಕವಾಗಿ ಉತ್ಪಾದಿಸಲಾಯಿತು
  • ಈ ಮೂಲಧಾತುವನ್ನು ಹೆಸರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಹೆಸರಿನಿಂದ ಬಂದಂತಹದಾಗಿದೆ.
  • ಈ ಲೋಹವು ಬೆಳ್ಳಿಯಂತೆ ಬಿಳಿಬಣ್ಣದಿಂದ ಕೂಡಿದ್ದು, ಕೊಠಡಿಯ ತಾಪಮಾನದಲ್ಲಿ ಒಣ ವಾತಾವರಣದಲ್ಲಿ ನಿಧಾನವಾಗಿ ಬಣ್ಣ ಕಳೆದುಕೊಳ್ಳುತ್ತದೆ.
  • ಅಮೆರಿಸಿಯಂ-241 ನ ಗಾಮಾ ವಿಕಿರಣವನ್ನು ಬಳಸಿಕೊಂಡು ದ್ರವ-ಸಾಂದ್ರತೆಯ ಗೇಜ್ ಗಳು, ದಪ್ಪವನ್ನು ಅಳೆಯುವ ಗೇಜುಗಳು, ವಿಮಾನದ ಇಂಧನ ಗೇಜ್ ಗಳು ಮತ್ತು ದೂರ ಸಂವೇದಿ ಸಾಧನಗಳಲ್ಲಿ ಬಳಸಲಾಗುತ್ತಿದೆ. ಬಹುತೇಕ ಎಲ್ಲ ಕಟ್ಟಡಗಳಲ್ಲಿ ಅಮೆರಿಸಿಯಂನ್ನು ಹೊಗೆ ಪತ್ತೆ ಮಾಡುವ ಸಾಧನಗಳಲ್ಲಿ ಬಳಸಲಾಗುತ್ತಿದೆ ಮತ್ತು ಭವಿಷ್ಯದ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಬಳಕೆಯಾಗುವ ಸಾಮರ್ಥ್ಯವನ್ನು ಹೊಂದಿದೆ.
  • ಅಮೆರಿಸಿಯಂ ಹೆಚ್ಚು ವಿಕಿರಣಶೀಲವಾಗಿದ್ದು, ಇದು ಬಹಳ ಅಪಾಯಕಾರಿಯಾಗಿದೆ. ನಿರ್ವಹಣೆಯಲ್ಲಿ ಅಚಾತುರ್ಯವಾದರೆ ತೀವ್ರವಾದ ಆರೂಗ್ಯ ತೊಂದರೆಗಳಿಗೆ ಕಾರಣವಾಗಬಹುದು.

ಕ್ಯೂರಿಯಂ (Cm)

  • ಆವರ್ತಕ ಕೋಷ್ಟಕದ ಆಕ್ಟಿನಾಯ್ಡ್ ಸರಣಿಯ ಕೃತಕ ರಾಸಾಯನಿಕ ಧಾತು, ಪರಮಾಣು ಸಂಖ್ಯೆ 96.
  • ರಸಾಯನಶಾಸ್ತ್ರಜ್ಞ ಮತ್ತು ಭೌತವಿಜ್ಞಾನಿ ಮೇರಿ ಕ್ಯೂರಿ ಮತ್ತು ಆಕೆಯ ಪತಿ ಪಿಯರೆ ಕ್ಯೂರಿ ಅವರ ನೆನಪಿನಲ್ಲಿ ಕ್ಯೂರಿಯಂ ಎಂದು ಕರೆಯಲಾಗಿದೆ.
  • ಪ್ರಾಥಮಿಕವಾಗಿ ಮೂಲ ವೈಜ್ಞಾನಿಕ ಸಂಶೋಧನೆಗೆ ಕ್ಯೂರಿಯಂ ಅನ್ನು ಬಳಸಲಾಗುತ್ತದೆ. ಅದರ ಕೆಲವು ಸಮಸ್ಥಾನಿಗಳಲ್ಲಿ, 242Cm, ಪ್ರತಿ ಗ್ರಾಂ ಗೆ ಸುಮಾರು ಮೂರು ವ್ಯಾಟ್ ನಷ್ಟು ಶಕ್ತಿಯನ್ನು ಉತ್ಪಾದಿಸುತ್ತದೆ.ಇದು ಪ್ಲುಟೋನಿಯಂ ಗಿಂತ ಹೆಚ್ಚು.
  • 242Cm ಮತ್ತು 244Cm ಎರಡೂ ಬಾಹ್ಯಾಕಾಶ ಮತ್ತು ವೈದ್ಯಕೀಯ ಅಧ್ಯಯನಗಳಲ್ಲಿ ಶಕ್ತಿ ಮೂಲಗಳಾಗಿ ಬಳಸಲ್ಪಡುತ್ತವೆ.
  • ಕ್ಯೂರಿಯಂ ತುಂಬಾ ವಿಷಕಾರಿಯಾಗಿದ್ದು, ದೇಹದಲ್ಲಿ ಮೂಳೆಗಳಲ್ಲಿ ಹೆಚ್ಚು ಶೇಖರವಾಗುತ್ತದೆ. ಇದರ ವಿಕಿರಣವು ಕೆಂಪು ರಕ್ತ ಕಣಗಳ ರಚನೆಯನ್ನು ನಾಶಮಾಡುತ್ತದೆ.

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.
Skip to content