ನವೆಂಬರ್ 10: ಈ ದಿನ, ಅಂದು
1 min readನವೆಂಬರ್ 10: ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನ
- 2001ರಲ್ಲಿ ಯುನೆಸ್ಕೋ (UNESCO)ದಿಂದ ಘೊಷಣೆ.
- 2020ರ ಕೇಂದ್ರ ವಿಷಯ: ಸಮಾಜಕ್ಕಾಗಿ ಮತ್ತು ಸಮಾಜದೊಂದಿಗೆ ವಿಜ್ಞಾನ
- ಈ ದಿನಾಚರಣೆಯ ಉದ್ದೇಶಗಳು:
- ಶಾಂತಿಯುತ ಮತ್ತು ಸುಸ್ಥಿರ ಸಮಾಜಕ್ಕಾಗಿ ವಿಜ್ಞಾನದ ಪಾತ್ರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು;
- ದೇಶ ದೇಶಗಳ ನಡುವೆ ವಿಜ್ಞಾನದ ಬೆಳವಣಿಗೆಗಳ ಪರಸ್ಪರ ಹಂಚಿಕೆಗಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಐಕ್ಯತೆಯನ್ನು ಉತ್ತೇಜಿಸುವುದು;
- ಸಮಾಜದ ಒಳಿತಿಗಾಗಿ ವಿಜ್ಞಾನವನ್ನು ಬಳಸುವತ್ತ ಅಳವಡಿಸಿಕೊಂಡಿರುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬದ್ಧತೆಗಳನ್ನು ಮನನ ಮಾಡಿಕೊಳ್ಳುವುದು;
- ವೈಜ್ಞಾನಿಕ ಪ್ರಯತ್ನಗಳು/ಮುನ್ನಡೆಗಳಿಗೆ ಬೆಂಬಲಿಸುವ ನಿಟ್ಟಿನಲ್ಲಿ ವಿಜ್ಞಾನವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಗಮನ ಸೆಳೆಯುವುದು
- ಜಗತ್ತು COVID-19 ಸಾಂಕ್ರಾಮಿಕ ಪಿಡುಗಿನಿಂದ ತೊಳಲಾಡುತ್ತಿರುವ ಈ ತುರ್ತು ಪರಿಸ್ಥಿತಿಯಲ್ಲಿ ಸಮಯೋಚಿವಾಗಿ ಈ ವರ್ಷ, ವಿಶ್ವ ವಿಜ್ಞಾನ ದಿನಾಚರಣೆಯು “ಜಾಗತಿಕ ಸಾಂಕ್ರಾಮಿಕ ಪಿಡುಗನ್ನು ಎದುರಿಸಲು ಸಮಾಜಕ್ಕಾಗಿ ಮತ್ತು ಸಮಾಜದೊಂದಿಗೆ ವಿಜ್ಞಾನ” ಎಂಬ ಧ್ಯೇಯದೊಂದಿಗೆ ಆಚರಿಸಲಾಗುತ್ತಿದೆ.
- COVID-19 ನೊಂದಿಗೆ ಹೋರಾಟಕ್ಕಾಗಿ ಯುನೆಸ್ಕೋ “ಸಮಾಜಕ್ಕಾಗಿ ಮತ್ತು ಸಮಾಜದೊಂದಿಗೆ ವಿಜ್ಞಾನ” ಎಂಬ ವಿಷಯ ಕುರಿತು ಆನ್ ಲೈನ್ ದುಂಡು ಮೇಜಿನ ಕಾರ್ಯಕ್ರಮ ಆಯೋಜಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಹ್ಯಾಷ್ ಟ್ಯಾಗ್ #ScienceDay ಬಳಸಿ.
ನವೆಂಬರ್ 10: ಆರ್ನೆಸ್ಟ್ ಒಟ್ಟೊ ಫಿಶರ್ ಜನ್ಮದಿನ
ಆರ್ನೆಸ್ಟ್ ಒಟ್ಟೊ ಫಿಶರ್
- ಲೋಹಗಳು ಮತ್ತು ಸಾವಯವ ವಸ್ತುಗಳನ್ನು ಸಂಯೋಜಿಸುವ ಸಂಪೂರ್ಣ ಹೊಸ ವಿಧಾನವನ್ನು ಗುರುತಿಸಿರುವುದಕ್ಕಾಗಿ ಜರ್ಮನ್ ರಸಾಯನಶಾಸ್ತ್ರಜ್ಞ ಫಿಸ್ಕರ್ ರವರಿಗೆ 1973ರಲ್ಲಿ ರಸಾಯನ ವಿಜ್ಞಾನಕ್ಕಾಗಿ ನೊಬೆಲ್ ಪ್ರಶಸ್ತಿ ನೀಡಲಾಯಿತು. ಈ ಪ್ರಶಸ್ತಿಯನ್ನು ಬ್ರಿಟಿಷ್ ವಿಜ್ಞಾನಿ ಜೆಫ್ರಿ ವಿಲ್ಕಿನ್ಸನ್ ರವರ ಜೊತೆ ಹಂಚಿಕೊಂಡಿದ್ದಾರೆ.
- ಫೆರೊಸಿನೆಯನ್ನು ಅಧ್ಯಯನ ಮಾಡಿದ ಫಿಶರ್, ಪಂಚಭುಜದ ಎರಡು ಇಂಗಾಲದ ಉಂಗುರಗಳ ನಡುವೆ ಒಂದು ಕಬ್ಬಿಣದ ಪರಮಾಣು ಇರುವುದಾಗಿ ತೋರಿಸಿಕೊಟ್ಟರು. ಇವರು CrCl3 ಮತ್ತು C6H6 ನಿಂದ ಡೈಬೆಂಝೋಲ್ಕ್ರೋಮ್ ಅನ್ನು AlCl3 ನ ಉಪಸ್ಥಿತಿಯಲ್ಲಿ ಸಂಶ್ಲೇಷಿಸಿದರು ಮತ್ತು ಅರೇನ್ ಉತ್ಪನ್ನಗಳ ಸಂಶ್ಲೇಷನಾ ವಿಧಾನವನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾದರು.