ನವೆಂಬರ್ 06: ಸರ್ ವಿಲಿಯಂ ಬೂಗ್ ಲೆಷ್ಮನ್ (1865-1926) ಜನ್ಮ ದಿನ
ಲೆಷ್ಮನ್ ಹೆಸರಾಂತ ಬ್ಯಾಕ್ಟೀರಿಯಾಶಾಸ್ತ್ರಜ್ಞ ಮತ್ತು ರೋಗಶಾಸ್ತ್ರಜ್ಞ
ನವೆಂಬರ್ 6, 1865 ರಂದು ಗ್ಲ್ಯಾಸ್ಗೋದಲ್ಲಿ ಜನನ
ಒಬ್ಬ ಸೇನಾ ವೈದ್ಯರಾಗಿ ಸೇವೆ ಸಲ್ಲಿಸುವಾಗ ಉಷ್ಣವಲಯದ ರೋಗಗಳ ಬಗ್ಗೆ ಅಧ್ಯಯನ ಮಾಡಿದರು
1900ರಲ್ಲಿ ಕಾಲಾ-ಅಜರ್ ಅಥವಾ ದಮ್-ಡುಮ್ ಜ್ವರಕ್ಕೆ ಕಾರಣವಾದ ಪರಾವಲಂಬಿ ಜೀವಿಯನ್ನು ಗುರುತಿಸಿದರು. ಆ ಸಮಯದಲ್ಲಿ ಕಾಲಾ ಅಜರ್ 7,50,000 ಜನರ ಸಾವಿಗೆ ಕಾರಣವಾಗಿತ್ತು.
ಟೈಫಾಯ್ಡ್ ಜ್ವರದ ವಿರುದ್ಧ ಲಸಿಕೆಯನ್ನು ಅಭಿವೃದ್ಧಿಪಡಿಸಿದರು ಮತ್ತು ಒಂದನೇ ವಿಶ್ವ ಸಮರದ ಸಮಯದಲ್ಲಿ ಅದನ್ನು ಬಳಸಲಾಯಿತು
1901ರಲ್ಲಿ ‘ರೊಮಾನೊವ್ಸ್ಕಿಯ ಸ್ಟೇನ್’ ಪದ್ಧತಿಯನ್ನು ಮಾರ್ಪಡಿಸಿ, ಮಲೇರಿಯಾ ರೋಗವನ್ನು ಸುಲಭವಾಗಿ ಪತ್ತೆ ಹಚ್ಚುವ ದಾರಿಯನ್ನು ತೋರಿಸಿದರು. ಇದು ವಿಶೇಷವಾಗಿ ಉಷ್ಣವಲಯಗಳಲ್ಲಿ ಅದರಲ್ಲೂ ಸೌಲಭ್ಯಗಳು ಸೀಮಿತವಾಗಿರುವೆಡೆ ಬಹಳ ಉಪಯುಕ್ತವಾಗಿದೆ. ಈ ಪದ್ಧತಿಯನ್ನು ‘ಲೆಷ್ಮನ್ ಸ್ಟೇನ್’ ಎಂದು ಕರೆಯುತ್ತಾರೆ ಮತ್ತು ಇದು ಕಾಲಾ-ಅಜರ್ (ಲೆಶ್ಮೇನಿಯಾ ಡೊನೊವಾನಿ) ಪರಾವಲಂಬಿಯ ಪತ್ತೆಗೆ ಕಾರಣವಾಯಿತು.