ಈ ಬ್ರಿಟಿಷ್-ಭಾರತೀಯ ವಿಜ್ಞಾನಿಯ ಸಂಶೋಧನೆಯು ವಿಕಸನೀಯ ಜೀವಶಾಸ್ತ್ರ ಮತ್ತು ವಿಜ್ಞಾನದ ಇತರೆ ವಿಭಾಗಗಳಲ್ಲಿ ಹಲವಾರು ಉನ್ನತ ಸಂಶೋಧನೆಗೆ ದಾರಿ ಮಾಡಿತು.
ಅವರ ತಂದೆ ಜಾನ್ ಸ್ಕಾಟ್ ಹಾಲ್ಡೇನ್ ಒಬ್ಬ ಪ್ರಸಿದ್ಧ ಶರೀರಶಾಸ್ತ್ರಜ್ಞ.
ವಿಜ್ಞಾನದಲ್ಲಿ ಯಾವುದೇ ಪದವಿಯನ್ನು ಹೊಂದಿಲ್ಲದಿದ್ದರೂ ವಿಜ್ಞಾನದ ವಿವಿಧ ವಿಭಾಗಗಳ ಸಾಂಪ್ರದಾಯಿಕ ಗಡಿಗಳನ್ನು ಮೀರಿ ತಮ್ಮ ಸಂಶೋಧನಾ ಕಾರ್ಯವನ್ನು ಮಾಡಿರುವ ಇವರು ಡಾರ್ವಿನಿನ ವಿಕಾಸದ ಬಗ್ಗೆ ಗಣಿತದ ಲೇಖನಗಳನ್ನು ಪ್ರಕಟಿಸಿದ್ದಾರೆ, IVF ತಂತ್ರಜ್ಞಾನ ಮತ್ತು ಕ್ಲೋನಿಂಗ್ ನ ಮೂಲ ಪರಿಕಲ್ಪನೆಯನ್ನು ಪರಿಚಯಿಸಿದ ಇವರು ಜನಸಂಖ್ಯಾ ಅನುವಂಶಿಕತೆಯ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದಾರೆ.
ಸಂಶೋಧನೆಯಲ್ಲಿ ಯಾವ ಮಟ್ಟಕ್ಕೆ ಬೇಕಾದರೂ ಹೋಗಲು ಸಿದ್ಧರಿದ್ದ ಇವರು ಮಾನವ ಜೀವ ವ್ಯವಸ್ಥೆಯ ಮೇಲೆ ಆಗುವ ಪರಿಣಾಮವನ್ನು ಅಧ್ಯಯನ ಮಾಡಲು ವಿಷಯುಕ್ತ ಅನಿಲಗಳನ್ನು ಸಹ ಸ್ವತಃ ಉಸಿರಾಡಿ ತಿಳಿಯಲು ಸಿದ್ಧರಿದ್ದರು.
ಸ್ವಯಂ-ಪ್ರಯೋಗದ ಮೂಲಕ, ವಿವಿಧ ವಾತಾವರಣದ ಒತ್ತಡಗಳು ಮತ್ತು ತಾಪಮಾನಗಳಲ್ಲಿ ಮಾನವ ಶರೀರ ವಿಜ್ಞಾನದ ಮೇಲೆ ವಿಷಯುಕ್ತ ಇಂಗಾಲದ ಮಾನಾಕ್ಸೈಡ್ ಮತ್ತು ಕಾರ್ಬನ್ ಡೈಆಕ್ಸೈಡ್ ನ ಮಿಶ್ರಣಗಳನ್ನು ಉಸಿರಾಡಿ ಅದರ ಪರಿಣಾಮವನ್ನು ಅಧ್ಯಯನ ಮಾಡಿದರು. ಇದು ಸಾಗರ ಮತ್ತು ಬಾಹ್ಯಾಕಾಶ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
1957ರಲ್ಲಿ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ ಸ್ಟಿಟ್ಯೂಟ್ (ಕೋಲ್ಕತ್ತಾ) ನಲ್ಲಿ ಸಂಶೋಧನಾ ಪ್ರಾಧ್ಯಾಪಕರಾಗಿ ಕೆಲಸಕ್ಕೆ ಸೇರಿ 1961ರವರೆಗೆ ಅಲ್ಲಿ ಕೆಲಸ ಮಾಡಿದರು. ನಂತರ ಅವರು ಅನುವಂಶೀಯ ಮತ್ತು ಜೈವಿಕ ವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸುವ ಗುರಿಯೊಂದಿಗೆ ಒಡಿಶಾಕ್ಕೆ ತೆರಳಿದರು.
1964ರಲ್ಲಿ ಹಾಲ್ಡೇನ್ ಕ್ಯಾನ್ಸರ್ ನಿಂದ ಮರಣ ಹೊಂದಿದರು. ಸಂಶೋಧನೆಗೆ ತಮ್ಮನ್ನೇ ಅರ್ಪಿಸಿಕೊಂಡಿದ್ದ ಇವರು ತನ್ನ ದೇಹವನ್ನು ಸಂಶೋಧನೆಗೆ ದಾನ ಮಾಡಲು ಮೊದಲೇ ನಿರ್ಧರಿಸಿದ್ದರು. ಸಾವಿನ ನಂತರವೂ ಸಂಶೋಧನೆಗೆ ತಮ್ಮನ್ನು ಮುಡುಪಾಗಿಸಿಕೊಂಡ ಮಹಾನ್ ವಿಜ್ಞಾನಿ ಇವರು