‘ಹ್ಯೂಮನ್ ಕಂಪ್ಯೂಟರ್’/ಮಾನವ ಗಣಕಯಂತ್ರ’ ಎಂದು ಜನಪ್ರಿಯವಾಗಿದ್ದರೂ ಸಹ ಅವರಿಗೆ ಆ ರೀತಿ ಕರೆಯಲ್ಪಡುವುದು ಇಷ್ಟವಿರಲಿಲ್ಲ. ಏಕೆಂದರೆ, ಗಣಕ ಯಂತ್ರಗಳ ಸೃಷ್ಟಿಕರ್ಥ ಮಾನವ, ಹಾಗಾಗಿ ಎಂದಿಗೂ ಯಂತ್ರಗಳಿಗಿಂತ ಮಾನವ ಶ್ರೇಷ್ಠ ಎಂಬುದು ಅವರ ಅಭಿಪ್ರಾಯ.
1980ರ ಜೂನ್ 18ರಂದು, ಇಂಪೀರಿಯಲ್ ಕಾಲೇಜ್ ಲಂಡನ್ ನ ಗಣಕೀಕರಣ ವಿಭಾಗವು ಆಯ್ಕೆ ಮಾಡಿದ ಎರಡು 13 ಸಂಖ್ಯೆಗಳ (7,686,369,774,870 × 2,465,099,745,779) ಗುಣಾಕಾರವನ್ನು ಅವರು ಪ್ರದರ್ಶಿಸಿದರು. ಇದಕ್ಕೆ ಅವರು ತೆಗೆದುಕೊಂಡ ಸಮಯ ಕೇವಲ 28 ಸೆಕೆಂಡುಗಳು (ಉತ್ತರ-18,947,668,177,995,426,462,773,730). ಇದರಲ್ಲಿ ಉತ್ತರವನ್ನು ಕಂಡು ಹಿಡಿದು ಅದನ್ನು ಹೇಳಲು ತೆಗೆದುಕೊಂಡ ಸಮಯವೂ ಸೇರಿದೆ. ಇದು 1982ರ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನನಲ್ಲಿ ದಾಖಲಾಗಿದೆ.
ಇವರು ಪ್ರಸಿದ್ಧ ಜ್ಯೋತಿಷಿಯೂ ಆಗಿದ್ದರು, ಅಡುಗೆ ಪುಸ್ತಕ, ಕಾದಂಬರಿಗಳೂ ಸೇರಿದಂತೆ ಅನೇಕ ಗ್ರಂಥಗಳ ಲೇಖಕಿಯೂ ಆಗಿದ್ದರು.
1977ರಲ್ಲಿ ‘ದಿ ವರ್ಲ್ಡ್ ಆಫ್ ಹೋಮೋಸೆಕ್ಸ್ಯುಯಲ್ಸ್’ ಎಂಬ ಕೃತಿಯನ್ನು ಬರೆದರು.
ಅಲ್ಲದೆ, ಕ್ರೈಂ ಥ್ರಿಲ್ಲರ್ ‘ಪರ್ಫೆಕ್ಟ್ ಮರ್ಡರ್’, ಪಝಲ್ಸ್ ಟು ಪಝಲ್ ಯು’, ‘ಸೂಪರ್ ಮೆಮೊರಿ: ಇಟ್ ಕ್ಯಾನ್ ಬಿ ಯುವರ್ಸ್ ಮತ್ತು ‘ಮ್ಯಾಥಬಿಲಿಟಿ: ಅವೇಕ್ ನ್ ದಿ ಮ್ಯಾಥ್ ಜೀನಿಯಸ್ ಇನ್ ಯುವರ್ ಚೈಲ್ಡ್’
ಜುಲೈ 31, 2020 ರಂದು ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ‘ಶಕುಂತಲಾ ದೇವಿ’ ಎಂಬ ಜೀವನಚರಿತ್ರೆಯ ಚಿತ್ರ ಬಿಡುಗಡೆಯಾಯಿತು. ಈ ಚಿತ್ರವನ್ನು ಅನು ಮೆನನ್ ಬರೆದು ನಿರ್ದೇಶನ ಮಾಡಿದ್ದು, ಸೋನಿ ಪಿಕ್ಚರ್ಸ್ ನೆಟ್ ವರ್ಕ್ಸ್, ಇಂಡಿಯಾ ನಿರ್ಮಾಣ ಮಾಡಿದ್ದಾರೆ.
ನವೆಂಬರ್ 04: ಅಂತಾರಾಷ್ಟ್ರೀಯ ನಿಯತಕಾಲಿಕೆ ‘ನೇಚರ್’ ನ ಮೊದಲ ಸಂಚಿಕೆ ಬಿಡುಗಡೆ
1869ರ ನವೆಂಬರ್ 4ರಂದು ನೇಚರ್ ನ ಮೊದಲ ಸಂಚಿಕೆಯನ್ನು ಪ್ರಕಟಿಸಲಾಯಿತು.
‘ನೇಚರ್’ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದ ಎಲ್ಲ ಕ್ಷೇತ್ರಗಳಲ್ಲಿನ ಅತ್ಯುತ್ತಮ ಸಂಶೋಧನೆಯನ್ನು ಪ್ರಕಟಿಸುವ ಒಂದು ಸಾಪ್ತಾಹಿಕ ಅಂತಾರಾಷ್ಟ್ರೀಯ ನಿಯತಕಾಲಿಕೆ.