ನವೆಂಬರ್ 03: ಈ ದಿನ, ಅಂದು

ನವೆಂಬರ್ 03
- ಈ ದಿನ ಅಂದರೆ, 1957ರ ನವೆಂಬರ್ 03 ರಂದು ರಷ್ಯಾ ಸ್ಪುಟ್ನಿಕ್ 2 ಅನ್ನು ಉಡಾವಣೆ ಮಾಡಿತು
- ಈ ಉಡಾವಣಿಯಲ್ಲಿ ಮೊದಲ ಬಾರಿಗೆ ಜೀವಂತ ಪ್ರಾಣಿ – ಸೈಬೀರಿಯನ್ ಹಸ್ಕಿ ನಾಯಿ ‘ಲೈಕಾ’ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಯಿತು.
- ಕ್ಯಾಪ್ಸೂಲ್ ಅನ್ನು ಹಿಂಪಡೆಯುವ ಯಾವುದೇ ಯೋಜನೆ ಇಲ್ಲದ ಕಾರಣ ‘ಲೈಕಾ’ ಕಕ್ಷೆಯಲ್ಲಿಯೇ ತನ್ನ ಜೀವವನ್ನು ಕಳೆದುಕೊಂಡಿತು
- ನಂತರ, ರಷ್ಯಾದ ಯೂರಿ ಅಲೆಕ್ಸೆವಿಚ್ ಗಗಾರಿನ್ 12 ಏಪ್ರಿಲ್ 1961ರಂದು ಬಾಹ್ಯಾಕಾಶಕ್ಕೆ ಪ್ರಯಾಣ ಮಾಡಿದ ಮೊದಲ ಮಾನವನಾದನು.