ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಆವಿಷ್ಕಾರ/ನಾವೀನ್ಯತೆ ವೇದಿಕೆ

ಆರ್ಥಿಕತೆಯ ಎಲ್ಲ ವಲಯಗಳಲ್ಲೂ ನಾವಿನ್ಯತೆ ವ್ಯಾಪಿಸುತ್ತಿದ್ದು, ಹಿಂದೆಂದೂ ಕಂಡಿರದ ರೀತಿಯಲ್ಲಿ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಮತ್ತೊಂದು ರೀತಿಯಲ್ಲಿ ಉಲ್ಲೇಖಿಸುವುದಾದರೆ, ನಾವಿನ್ಯತೆಯು ನವೀನ, ಸೃಜನಾತ್ಮಕ ಪರಿಣಾಮ, ವಹಿವಾಟುಗಳಲ್ಲಿ ಹೊಸತನ ಮತ್ತು ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಸಾಮರ್ಥ್ಯಗಳನ್ನು ಹೆಚ್ಚಿಸುವುದಾಗಿದೆ. ಭಾರತೀಯ ಸನ್ನಿವೇಶದಲ್ಲಿ ಮಾನವ ಸಂಪನ್ಮೂಲ, ಹೂಡಿಕೆ, ಜ್ಞಾನಾಧಾರಿತ ಉದ್ಯೋಗ, ವ್ಯಾಪಾರ, ಸುರಕ್ಷತೆ ಮತ್ತು ಕಾನೂನು ಪರಿಸರ ಆವಿಷ್ಕಾರ/ನಾವಿನ್ಯತೆಯನ್ನು ಅರ್ಥೈಸುವ  ಅಂಶಗಳಾಗಿವೆ. ಇವುಗಳೆಲ್ಲದರಲ್ಲೂ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ಸಾಂಸ್ಥಿಕ ಮತ್ತು ವೈಯಕ್ತಿಕ ಆವಿಷ್ಕಾರ/ನಾವಿನ್ಯತೆಗಳ ಮಾಹಿತಿ ಕಲೆ ಹಾಕಲು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಒಂದು ಆವಿಷ್ಕಾರ ವೇದಿಕೆಯನ್ನು ಸ್ಥಾಪಿಸಿದೆ.

ಉದ್ದೇಶಗಳು

  • ವಿವಿಧ ಕ್ಷೇತ್ರಗಳಲ್ಲಿ ಅನ್ವೇಷಣೆ/ನಾವೀನ್ಯತೆಗಳನ್ನು ಪರಿಶೋಧಿಸುವುದು ಮತ್ತು ದಾಖಲಿಸುವುದು
  • ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆ, ಮಾನ್ಯತೆ ಮತ್ತು ಉನ್ನತೀಕರಣಕ್ಕಾಗಿ ಸಂಶೋಧಕರಿಗೆ/ಅನ್ವೇಷಕಗಳಿಗೆ ಒಂದು ವೇದಿಕೆಯನ್ನು ಒದಗಿಸುವುದು
  • ನಾವೀನ್ಯತೆಗಳ ಮತ್ತಷ್ಟು ಪರಿಷ್ಕರಣೆ ಮತ್ತು ಅದರ ಅನ್ವಯಿಕೆಗಳಿಗೆ ಮಾರ್ಗದರ್ಶಕ
  • ಆವಿಷ್ಕಾರ-ಉದ್ಯಮ-ವ್ಯಾಪಾರ/ವ್ಯವಹಾರ ಸಂಪರ್ಕಗಳನ್ನು ಕಲ್ಪಿಸುವುದು
  • ಆವಿಷ್ಕಾರ/ನಾವೀನ್ಯತೆಗಳನ್ನು ಒಳಗೊಂಡ ಸಮುದಾಯ ಕಾರ್ಯಾಗಾರಗಳು ಮತ್ತು ಪ್ರದರ್ಶನಗಳನ್ನು ಆಯೋಜಿಸುವುದು
  • ಪ್ರಕಟಣೆ ಮತ್ತು ಪ್ರಶಸ್ತಿಗಳ ಮೂಲಕ, ಜನಸಾಮಾನ್ಯರಲ್ಲಿ ನಾವೀನ್ಯತೆ/ಆವಿಷ್ಕಾರಕ ಮನೋಭಾವವನ್ನು ಬೆಳಸುವುದು

ಪ್ರಕ್ರಿಯೆ

  • ಕೃಷಿ, ಎಂಜಿನಿಯರಿಂಗ್, ಇಂಧನ, ಕೈಗಾರಿಕೆ, ಸೇವಾ ವಲಯ, ಇತ್ಯಾದಿ ವಿವಿಧ ವಿಭಾಗಗಳಲ್ಲಿ ಆವಿಷ್ಕಾರಕರು/ನಾವಿನ್ಯತೆಕಾರರ ಒಕ್ಕೂಟ ಸ್ಥಾಪಿಸುವುದು
  • ಸಾಮರ್ಥ್ಯವರ್ಧನೆಗಾಗಿ ಮುಂಚೂಣಿ ನಾವೀನ್ಯತೆಗಳ ಬಗ್ಗೆ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಪರಿಕಲ್ಪನೆಗಳು, ಪ್ರಕ್ರಿಯೆಗಳು ಮತ್ತು ಉತ್ಪನ್ನಗಳನ್ನು ಆಹ್ವಾನಿಸುವುದು
  • ವಾಣಿಜ್ಯ ಅನ್ವಯಕಗಳಿಗೆ ಆವಿಷ್ಕಾರ/ನಾವಿನ್ಯತೆಗಳ ಸಂಸ್ಕರಣೆ ಮತ್ತು ಮಾನ್ಯತೆಗೆ ಅಗತ್ಯಗಳಿಗನುಗುಣವಾಗಿ ಸೀಮಿತ ಆರ್ಥಿಕ ನೆರವನ್ನು ಒದಗಿಸುವುದು
  • ಉನ್ನತೀಕರಣಕ್ಕಾಗಿ ಬೌದ್ಧಿಕ ಆಸ್ತಿ ನಿರ್ವಹಣೆ ಕಾರ್ಯವಿಧಾನಗಳನ್ನು ಕ್ರಿಯಾತ್ಮಕಗೊಳಿಸುವುದು; ಬೇಡಿಕೆ ಮೌಲ್ಯಮಾಪನ ಮತ್ತು ಆವಿಷ್ಕಾರಕರು ಮತ್ತು ಅನ್ವಯಿಕ ಸಂಸ್ಥೆಗಳ ನಡುವೆ ಹೊಂದಾಣಿಕೆ ಏರ್ಪಡಿಸುವುದು
  • ಜ್ಞಾನಾಧಾರಿತ ಉದ್ಯೋಗಕ್ಕಾಗಿ ಆರಂಭಿಕ ಉದ್ಯಮ ಮತ್ತು ಉದ್ಯಮದಾರರಿಗೆ ಮಾದರಿಗಳು
  • ವಾರ್ಷಿಕ ಪ್ರಶಸ್ತಿಗಳ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಆವಿಷ್ಕಾರಕರ ಸಾಧನೆಯನ್ನು ಗುರುತಿಸುವುದು

ಆಡಳಿತ / ಹಣಕಾಸು

  • ಅರ್ಜಿ ನಮೂನೆಯೊಂದಿಗೆ ಆವಿಷ್ಕಾರಕಾರರಿಂದ ಪರಿಕಲ್ಪನೆಗಳು, ಪ್ರಕ್ರಿಯೆಗಳು ಮತ್ತು ಉತ್ಪನ್ನಗಳನ್ನು ಆಹ್ವಾನಿಸಿ ಅಕಾಡೆಮಿಯ ವೆಬ್ ಸೈಟ್ ನಲ್ಲಿ ಪ್ರಕಟಣೆ ನೀಡಲಾಗುವುದು
  • ಶಿಕ್ಷಣ ತಜ್ಞರು, ವಿಜ್ಞಾನಿಗಳು, ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಕೈಗಾರಿಕೆ ಮತ್ತು ಕೃಷಿ ಸಂಬಂಧಿತ ಕಾರ್ಮಿಕರು ಮತ್ತು ಜನಸಾಮಾನ್ಯರು ತಮ್ಮ ನಾವೀನ್ಯತೆಯ ಹಕ್ಕು ಪ್ರತಿಪಾದನೆಯನ್ನು ವರ್ಷದಲ್ಲಿ ಯಾವುದೇ ಸಮಯದಲ್ಲಿ ಕಳುಹಿಸಬಹುದು.
  •  ಅಕಾಡೆಮಿಯ ಸಂಪನ್ಮೂಲ ಕ್ರೋಡೀಕರಣ ಸಮಿತಿಯು ತ್ರೈಮಾಸಿಕ ಆಧಾರದ ಮೇಲೆ ಅರ್ಜಿಗಳನ್ನು ಪರಿಶೀಲಿಸಿ, ಸಂಸ್ಕರಣೆ, ಮಾಪನ, ವಾಣಿಜ್ಯೀಕರಣ, ಹಣಕಾಸು ಬೆಂಬಲ ಇತ್ಯಾದಿ ಮುಂದಿನ ಕ್ರಮಗಳಿಗೆ ಶಿಫಾರಸು ಮಾಡುತ್ತದೆ
  •  ಅಕಾಡೆಮಿಯಿಂದ ಅಗತ್ಯತೆಗನುಗುಣವಾಗಿ, ಸೀಮಿತ ಹಣಕಾಸಿನ ಬೆಂಬಲವು, ನಿರ್ದಿಷ್ಟ ಉದ್ದೇಶಕ್ಕಾಗಿ ನಿಧಿಗಳನ್ನು ಬಳಸುವ ಷರತ್ತು; ಪ್ರಗತಿಗಳ ವರದಿ, ತಾಂತ್ರಿಕ ಮತ್ತು ಆರ್ಥಿಕ; ಬೌದ್ಧಿಕ ಆಸ್ತಿ ನಿಬಂಧನೆಗಳಿಗೆ ಸಂಬಂಧಿಸಿದಂತೆ ಒಪ್ಪಂದಗಳು; ಮತ್ತು ಒಪ್ಪಂದ ಪತ್ರ ಗಳನ್ನು ಹೊಂದಿರಿತ್ತದೆ.
  • ಕಾರ್ಯಾಗಾರಗಳ ಸಂಘಟನೆ ಮತ್ತು ಆವಿಷ್ಕಾರ-ಸಂಬಂಧಿತ ಸಭೆಗಳು ಅಕಾಡೆಮಿಯ ನಿಬಂಧನೆಗಳ ಪ್ರಕಾರ ನಡೆಸಲಾಗುವುದು
ಅರ್ಜಿ/ನಾಮನಿರ್ದೇಶನ ನಮೂನೆ
word format

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.
Skip to content