ಜೀನಿಯಸ್ ಒಲಂಪಿಯಡ್
ಜೀನಿಯಸ್ ಒಲಂಪಿಯಡ್ ಒಂದು ಅಂತಾರಾಷ್ಟ್ರೀಯ ಮಟ್ಟದ ಪರಿಸರ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರೌಢಶಾಲಾ ಪರಿಯೋಜನಾ ಸ್ಪರ್ಧೆಯಾಗಿದೆ. ಇದರ ಸಂಸ್ಥಾಪಕರಾದ ಟೆರಾ ಸೈನ್ಸ್ ಅಂಡ್ ಎಜುಕೇಶನ್ ಸಂಸ್ಥೆಯು ನ್ಯೂಯಾರ್ಕ್‍ನ ಓಸ್‍ವೆಗೋ ನಲ್ಲಿರುವ ಸ್ಟೇಟ್ ಯುನಿರ್ವಸಿಟಿಯವರ ಸಹಯೋಗದೊಂದಿಗೆ ಆಯೋಜಿಸಿಕೊಂಡು ಬರುತ್ತಿದ್ದು, ಈ ಕೆಳಕಂಡ ವಿಷಯಗಳಲ್ಲಿ ಪರಿಸರಕ್ಕೆ ಕೇಂದ್ರೀಕೃತವಾಗಿರುವ ಪರಿಯೋಜನೆಗಳ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ :
- ಜೀನಿಯಸ್ ವಿಜ್ಞಾನ
- ಜೀನಿಯಸ್ ದೃಶ್ಯ ಮತ್ತು ಪ್ರದರ್ಶಕ ಕಲೆಗಳು
- ಜೀನಿಯಸ್ ವ್ಯಾಪಾರ
- ಜೀನಿಯಸ್ ಸೃಜನಾತ್ಮಕ ಬರವಣಿಗೆ
- ಜೀನಿಯಸ್ ರೋಬೊಟಿಕ್ಸ್
ಜೀನಿಯಸ್ ವಿಜ್ಞಾನ
ಜೀನಿಯಸ್ ವಿಜ್ಞಾನ ಸ್ಪರ್ಧೆಯಲ್ಲಿ ಈ ಕೆಳಕಂಡ ಯಾವುದಾದರೊಂದು ವಿಭಾಗಗಳಲ್ಲಿ ವೈಜ್ಞಾನಿಕ ವಿಧಾನದ ಮೂಲಕ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುವ ಮಾರ್ಗವನ್ನು ವಿದ್ಯಾರ್ಥಿಗಳಿಂದ ಅಪೇಕ್ಷಿಸಲಾಗುತ್ತದೆ.
ವಿಜ್ಞಾನ | ಪರಿಸರ ಗುಣ ಮಟ್ಟ
ವಿಜ್ಞಾನ | ಜೀವಶಾಸ್ತ್ರ ಮತ್ತು ಜೀವವೈವಿಧ್ಯತೆ
ವಿಜ್ಞಾನ | ಸಂಪನ್ಮೂಲ ಮತ್ತು ಶಕ್ತಿ
ವಿಜ್ಞಾನ | ಮಾನವ ಜೀವಶಾಸ್ತ್ರ
ಪ್ರತಿಯೊಂದು ಜೀನಿಯಸ್ ಪರಿಯೋಜನೆಯನ್ನು ಗರಿಷ್ಠ ಇಬ್ಬರು ವಿದ್ಯಾರ್ಥಿಗಳು ತಯಾರಿಸಿ ಮಂಡಿಸಬಹುದಾಗಿದೆ. ಪರಿಯೋಜನೆಗಳನ್ನು ಮಾದರಿ ಮೂಲಕ ಮಂಡಿಸಿದರೆ ಒಳ್ಳೆಯದು, ಆದರೆ ಕಡ್ಡಾಯವಲ್ಲ. ಆದ್ಯಾಗ್ಯೂ, ದತ್ತಾಂಶ, ಗ್ರಾಫಿಕ್ಸ್, ಚಿತ್ರಗಳು ಮತ್ತು ರೇಖಾಚಿತ್ರಗಳನ್ನೊಳಗೊಂಡ ಸಂಶೋಧನಾ ಲೇಖನವನ್ನು ಅಗತ್ಯವಾಗಿ ಮಂಡಿಸಬೇಕಾಗುತ್ತದೆ.
ಈ ಲಿಂಕ್ ಜೀನಿಯಸ್ ವಿಜ್ಞಾನದ ಹೆಚ್ಚನ ವಿವರಗಳನ್ನು ನೀಡುತ್ತದೆ.
ಜೀನಿಯಸ್ ದೃಶ್ಯ ಮತ್ತು ಪ್ರದರ್ಶಕ ಕಲೆಗಳು
ಈ ಸ್ಪರ್ಧೆಯಲ್ಲಿ ಪರಿಸರ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಬಗ್ಗೆ ಜನಸಾಮಾನ್ಯರಲ್ಲಿನ ಕಾಳಜಿಗೆ ಒತ್ತು ಕೊಡುವ ಉದ್ದೇಶವನ್ನು ಹೊಂದಿದ್ದು, ಈ ಕೆಳಕಂಡ ಉಪ ವಿಷಯಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ವಿವರಗಳನ್ನು ಕೆಳಕಂಡ ಲಿಂಕ್ ಮೂಲಕ ಪಡೆಯಬಹುದಾಗಿದೆ
ಈ ಲಿಂಕ್ ಜೀನಿಯಸ್ ಕಲೆ ಬಗ್ಗೆ ಹೆಚ್ಚನ ವಿವರಗಳನ್ನು ನೀಡುತ್ತದೆ
ಈ ಲಿಂಕ್ ಜೀನಿಯಸ್ ಸಂಗೀತದ ಹೆಚ್ಚನ ವಿವರಗಳನ್ನು ನೀಡುತ್ತದೆ ಜೀನಿಯಸ್ ಸಂಗೀತ
ಜೀನಿಯಸ್ ಬ್ಯುಸಿನೆಸ್
ಪರಿಸರದ ಮೌಲ್ಯಗಳ ಬಗ್ಗೆ ವ್ಯಾಪಾರ ಮತ್ತಯ ವ್ಯವಹಾರ ಕ್ಷೇತ್ರದಲ್ಲಿ ಜಾಗೃತಿ ಮೂಡಿಸುವ ಹಾಗೂ ತಮ್ಮ ಕಾರ್ಯಾಚರಣೆಯ ಪ್ರದೇಶದಲ್ಲಿ ಪರಿಸರ ಮತ್ತು ಸಮಾಜದ ಬಗ್ಗೆ ಸಕಾರಾತ್ಮಕ ಉದ್ದೇಶವನ್ನಿಟ್ಟುಕೊಂಡು ಮಾರುಕಟ್ಟೆಗೆ ಹಸಿರು ಉತ್ಪನ್ನಗಳು ಮತ್ತು ಸೇವೆಗಳನ್ನು ತರುವ ಉದ್ದೇಶವನ್ನು, ಸಾಮಾಜಿಕ ಜವಾಬ್ದಾರಿಯುನ್ನು ಹೊಂದಿರುವ ಬ್ಯುಸಿನೆಸ್ ಯೋಜನೆಯನ್ನು ಈ ಸ್ಪರ್ದೆಯಲ್ಲಿ ಗುರುತಿಸಲಾಗುತ್ತದೆ. ಈ ಸ್ಪರ್ಧೆಯಲ್ಲಿ ಗರಿಷ್ಠ ಇಬ್ಬರು ವಿದ್ಯಾರ್ಥಿಗಳು ಬ್ಯುಸಿನೆಸ್ ಯೋಜನೆಯನ್ನು ತಯಾರಿಸಿ ಮಂಡಿಸಬಹುದಾಗಿದೆ.
ಈ ಲಿಂಕ್ ಜೀನಿಯಸ್ ಬ್ಯುಸಿನೆಸ್ ನ ಹೆಚ್ಚನ ವಿವರಗಳನ್ನು ನೀಡುತ್ತದೆ
ಜೀನಿಯಸ್ ಸೃಜನಾತ್ಮಕ ಬರವಣಿಗೆ
ಬರವಣಿಗೆಯ ಮೂಲಕ ಜಾಗತಿಕ ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಅವುಗಳ ಪರಿಹಾರಗಳ ಬಗ್ಗೆ ಕಾರ್ಯೋನ್ಮುಖರಾಗಲು ಜನಸಾಮಾನ್ಯರಿಗೆ ಕರೆ ನೀಡುವ ಯೋಜನೆಗಳನ್ನು ಪುರಸ್ಕರಿಸಲಾಗುವುದು. ಈ ಸ್ಪರ್ಧೆಯನ್ನು ಈ ಕೆಳಕಂಡ ಉಪ ವಿಭಾಗಗಳಲ್ಲ್ಲಿ ಒಬ್ಬ ವಿದ್ಯಾರ್ಥಿಯು ಒಂದು ಯೋಜನೆಯನ್ನು ಮಾತ್ರ ತಯಾರಿಸಿ ಸಲ್ಲಿಸಬಹುದಾಗಿದೆ:
- ಸೃಜನಾತ್ಮಕ ಬರವಣಿಗೆ | ಕಿರುಕಥೆ
- ಸೃಜನಾತ್ಮಕ ಬರವಣಿಗೆ | ಪ್ರಬಂಧ
- ಸೃಜನಾತ್ಮಕ ಬರವಣಿಗೆ | ಕಾವ್ಯ
ಈ ಸೃಜನಾತ್ಮಕ ಬರವಣಿಗೆ ಸ್ಪರ್ಧೆಯಲ್ಲಿ ತಮ್ಮ ಬರವಣಿಗೆಯನ್ನು ಸಭಿಕರ ಮುಂದೆ ಓದಿ ಮಂಡಿಸಬೇಕಾಗುತ್ತದೆ. ಇದಕ್ಕೆ 5 ನಿಮಿಷಗಳ ಕಾಲಾವಕಾಶವಿದ್ದು, ನಂತರ ತೀರ್ಪುಗಾರರಿಂದ ಪ್ರತಿಕ್ರಿಯೆ ಮಂಡಿಸಲಾಗುವುದು.
ಈ ಲಿಂಕ್ ಜೀನಿಯಸ್ ವಿವಿಧ ಸ್ಪರ್ಧೆಗಳ ಹೆಚ್ಚನ ವಿವರಗಳನ್ನು ನೀಡುತ್ತದೆ
ಜೀನಿಯಸ್ ರೋಬೊಟಿಕ್ಸ್
ಜೀನಿಯಸ್ ಒಲಂಪಿಯಾಡ್‍ನಲ್ಲಿ ರೊಬೊಟಿಕ್ಸ್ ಬಗ್ಗೆ ಹೊಸ ವಿಭಾವನ್ನು 2017 ನೇ ಸಾಲಿನಲ್ಲಿ ಪ್ರಾರಂಭಿಸಲಾಗಿದೆ. ಈ ಸ್ಪರ್ಧೆಯನ್ನು ಕೆಳಕಂಡ ಉಪ ವಿಭಾಗಗಳಲ್ಲಿ ನಡೆಸಲಾಗುವುದು:
- ರೋಬೊಟಿಕ್ಸ್ | ಮಾಸ್ಟರ್ ಗೇಮ್
- ರೋಬೊಟಿಕ್ಸ್ | ಲೈನ್ ಫಾಲೋವರ್
- ರೋಬೊಟಿಕ್ಸ್ | ಸುಮೋ
ಈ ಲಿಂಕ್ ಜಿನಿಯಸ್ಮಾ ರೋಬೋಟಿಕ್ಸ್ ನ ಮಾನದಂಡಗಳು ಮತ್ತು ನಿಯಮಗಳ ವಿವರಣೆಯನ್ನು ನೀಡುತ್ತದೆ.