ಅಧ್ಯಕ್ಷರ ಲೇಖನಿಯಿಂದ
ಸಾಂಕ್ರಾಮಿಕ ಪಿಡುಗಿನಿಂದ ಚೇತರಿಕೆಯ ಭರವಸೆ ಹಾಗೂ ವಿಶ್ವದಾದ್ಯಂತ ವಿಜ್ಞಾನ ಮತ್ತು ತಂತ್ರಜ್ಞಾನ ಸಾಧನಗಳ ಮೆಚ್ಚುಗೆಯೊಂದಿಗೆ 2022ನೇ ವರ್ಷ ಆರಂಭವಾಯಿತು. ಭಾರತದ ಸ್ವಾತಂತ್ರ್ಯದ 75ನೇ ವರ್ಷಾಚರಣೆಯು, ಆಜಾದಿ ಕಾ ಅಮೃತ ಮಹೋತ್ಸವ, ‘ವಿಜ್ಞಾನ ಸರ್ವತ್ರ ಪೂಜ್ಯತೆ ‘ ಎಂಬ ರಾಷ್ಟ್ರವ್ಯಾಪಿ ವಿಜ್ಞಾನ ಸಪ್ತಾಹಾಚರಣೆಯನ್ನು ಸಹ ಕಂಡಿತು. 2022ರ ಫೆಬ್ರವರಿ 22 ರಿಂದ 28 ರವರೆಗೆ ನಡೆದ ಈ ಕಾರ್ಯಕ್ರಮಕ್ಕೆ ಗೌರವಾನ್ವಿತ ಪ್ರಧಾನಮಂತ್ರಿಗಳ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ, ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ನವದೆಹಲಿಯ ವಿಜ್ಞಾನ ಪ್ರಸಾರ್ ಸಂಸ್ಥೆಗಳು ಚಾಲನೆಯನ್ನು ನೀಡಿದವು ಹಾಗೂ ರಾಜ್ಯದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯನ್ನು ಈ ಕಾರ್ಯಕ್ರಮದ ಅನುಷ್ಟಾದ ನೋಡಲ್ ಸಂಸ್ಥೆಯಾಗಿ ಗುರುತಿಸಿದವು.
ಈ ಕಾರ್ಯಕ್ರಮವನ್ನು 2022 ರ ಫೆಬ್ರವರಿ 22 ರಂದು ಕರ್ನಾಟಕ ಸರ್ಕಾರದ ಸನ್ಮಾನ್ಯ ಉನ್ನತ ಶಿಕ್ಷಣ, ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ. ಸಿ. ಎನ್. ಅಶ್ವಥ್ ನಾರಾಯಣ್ ರವರು ಉದ್ಘಾಟಿಸಿದರು. ಸನ್ಮಾನ್ಯ ಸಂಸತ್ ಸದಸ್ಯರು ಹಾಗೂ ಮಾಜಿ ಕೇಂದ್ರ ಸಚಿವರಾದ ಶ್ರೀ ಡಿ. ವಿ. ಸದಾನಂದ ಗೌಡರವರು ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು ಹಾಗೂ ಯಲಹಂಕ ಕ್ಷೇತ್ರದ ಸನ್ಮಾನ್ಯ ಶಾಸಕರಾದ ಶ್ರೀ ಎಸ್.ಆರ್. ವಿಶ್ವನಾಥ್ ರವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗೌರವಾನ್ವಿತ ಪ್ರಧಾನಮಂತ್ರಿಗಳ ಪ್ರಧಾನ ವೈಜ್ಞಾನಿಕ ಸಲಹೆಗಾರ ಡಾ. ಕೆ. ವಿಜಯ ರಾಘವನ್ ರವರು ಹಾಗೂ ಮೂರ್ತಿ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಸುಧಾ ಮೂರ್ತಿ ರವರು ವಿಡಿಯೋ ಕಾನ್ಫೆರೆನ್ಸ್ ಮೂಲಕ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು. ಕರ್ನಾಟಕ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ, ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ. ಇ. ವಿ. ರಮಣ ರೆಡ್ಡಿ ರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸನ್ಮಾನ್ಯ ಸಚಿವರು ಅಕಾಡೆಮಿ ಜೀವಮಾನ ಸಾಧನೆ ಪ್ರಶಸ್ತಿ ಮತ್ತು ಫೆಲೋಶಿಪ್ ಗಳನ್ನು ವಿತರಿಸಿದರು. ಕಾರ್ಯಕ್ರಮದ ಅಂಗವಾಗಿ ತಜ್ಞರ ಉಪನ್ಯಾಸಗಳು, ವಿದ್ಯಾರ್ಥಿ ಸ್ಪರ್ಧೆಗಳನ್ನು ಒಂದು ವಾರದ ಕಾಲ ನಡೆಸಲಾಯಿತು ಹಾಗೂ ಪ್ರತಿಷ್ಠಿತ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳ ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. 2022 ರ ಫೆಬ್ರವರಿ 28 ರಂದು ಸಮಾರೋಪ ಸಮಾರಂಭದಲ್ಲಿ ಬೆಂಗಳೂರಿನ ಜವಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ ಅಧ್ಯಕ್ಷರಾದ ಡಾ. ಜಿ. ಯು. ಕುಲಕರ್ಣಿ ರವರು ಸಮಾರೋಪ ಭಾಷಣ ಮಾಡಿ, ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಆರು ಪ್ರಕಟಣೆಗಳು, ಸ್ಟೇಟಸ್ ಪೇಪರ್ 2: ‘ಕರ್ನಾಟಕದ ಸಂಶೋಧನೆ ಮತ್ತು ಅಭಿವೃದ್ಧಿ ಚಿತ್ರಣ’; ಸ್ಟೇಟಸ್ ಪೇಪರ್ 3: ಮ್ಯೂಕೋರ್ಮೈಕೋಸಿಸ್: ಅನುಭವ ಮತ್ತು ಶಿಫಾರಸುಗಳು’; ಅಪ್ರೋಚ್ ಪೇಪರ್ 1: ಕರ್ನಾಟಕದಲ್ಲಿ ತೋಟಗಾರಿಕೆ – ಮುಂದಿನ ಹಾದಿ’; ಅಕಾಡೆಮಿ ವಾರ್ಷಿಕ ಪುಸ್ತಕ 2022; ‘ದಿ ಡ್ಯಾನ್ಸಿಂಗ್ ಬೀಸ್’ ಪುಸ್ತಕದ ಅನುವಾದ ‘ದುಂಬಿಗಳ ನರ್ತನ’ ಹಾಗೂ ‘ಅಕಾಡೆಮಿಯ ಬ್ರೋಚರ್’ ಅನ್ನು ಬಿಡುಗಡೆ ಮಾಡಲಾಯಿತು.
ಈ ತ್ರೈಮಾಸಿಕದಲ್ಲಿ ಅಕಾಡೆಮಿಯ ಕಾರ್ಯಕಾರಿ ಸಮಿತಿ ಸಭೆಯನ್ನು ನಡೆಸಲಾಯಿತು. ಸದಸ್ಯರಿಂದ ಪಡೆದ ಮಾರ್ಗದರ್ಶನ ಮತ್ತು ವಿಚಾರಗಳನ್ನು ಕೃತಜ್ಞತೆಯಿಂದ ಅಂಗೀಕರಿಸಲಾಗಿದೆ.
– ಎಸ್. ಅಯ್ಯಪ್ಪನ್