ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಅಧ್ಯಕ್ಷರ ಲೇಖನಿಯಿಂದ: ಸೆಪ್ಟೆಂಬರ್ 30, 2020

1 min read

ನಾವೆಲ್ಲರೂ ಶತಮಾನದಲ್ಲಿ ಹಿಂದೆಂದೂ ಕಂಡರಿಯದ ಜೈವಿಕ ವಿಪತ್ತು, ಕೋವಿಡ್ 19 ಸಾಂಕ್ರಾಮಿಕ ಪಿಡುಗಿನ ನಡುವೆ ಇದ್ದು, ನಮ್ಮ ಜೀವನ ಮತ್ತು ಜೀವನೋಪಾಯದ ಮೇಲೆ ಅತ್ಯಂತ ಪರಿಣಾಮವನ್ನು ಎದುರುಸುತ್ತಿದ್ದೇವೆ. ಸಮಯೋಚಿತವೆಂಬಂತೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಕರ್ನಾಟಕ ಸರ್ಕಾರದ ಯೋಜನೆ, ಕಾರ್ಯಕ್ರಮ ಸಂಯೋಜನೆ, ಮತ್ತು ಸಾಂಖ್ಯಿಕ ಇಲಾಖೆಯ ಸಹಯೋಗದೊಂದಿಗೆ ಜೂನ್ 19, 2020 ರಂದು ಬೆಂಗಳೂರಿನಲ್ಲಿ ಕೋವಿಡ್19: ಸ್ಟ್ರಾಟಜಿ ಅಂಡ್ ವೇ ಫಾರ್ವರ್ಡ್ ಫಾರ್ ಕರ್ನಾಟಕ ಎಂಬ ಸಭೆಯನ್ನು ನಡೆಸಿತು. ಸರ್ಕಾರದ ಹಿರಿಯ ಅಧಿಕಾರಿಗಳು, ಆರೋಗ್ಯ, ಕೃಷಿ, ಕೈಗಾರಿಕೆ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಸಾರ್ವಜನಿಕ ವ್ಯವಹಾರ ಮತ್ತು ನೀತಿಗೆ ಸಂಬಂಧಿಸಿದ ವಿವಿಧ ಕ್ಷೇತ್ರಗಳ ಪ್ರಮುಖ ತಜ್ಞರು ಹಾಗೂ ಬಳಕೆದಾರ ಸಂಸ್ಥೆಗಳಾದ ಎಪ್.ಐ.ಸಿ.ಸಿ.ಐ ಮತ್ತು ಕೆ.ಎಸ್.ಎನ್.ಡಿ.ಎಂ.ಸಿ ಸಂಸ್ಥೆಗಳು ಚರ್ಚೆಯಲ್ಲಿ ಭಾಗವಹಿಸಿದರು. ಈ ಸಭೆಯ ಪಲಿತಾಂಶವು ಅಕಾಡೆಮಿಯ ಮೊದಲ ಸ್ಟ್ರಾಟಜಿ ಪೇಪರ್ ಆಗಿ ಪ್ರಕಟವಾಗಿದೆ.

ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರ/ನಾವೀನ್ಯತೆಗಳ ನಮ್ಮ ಜೀವನವನ್ನು ಪರಿವರ್ತಿಸುತ್ತಿವೆ. ಪ್ರಸ್ತುತ ಸನ್ನಿವೇಶದ ಅವಲೋಕನ ಹಾಗೂ ಮತ್ತು ಅನುಭವಗಳೂ ಸಹ ಇವುಗಳ ಮಹತ್ವವನ್ನು ಸಾರಿವೆ. ಈ ಪ್ರಕ್ರಿಯೆಯಲ್ಲಿ, ಸಾಮಾಜದ ಉನ್ನತಿಗಾಗಿ ತ್ವರಿತ ಗತಿಯ ಉತ್ಪಾದನೆ ಮತ್ತು ಹೊಸ ತಂತ್ರಜ್ಞಾನಗಳ ಅಳವಡಿಕೆಗಾಗಿ ಪಾಲುದಾರಿಕೆಗಳು ಮತ್ತು ಸಹಯೋಗಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಒಂದೆಡೆ ವೃದ್ದಿಯಾಗುತ್ತಿರುವ ಬಹು-ವಲಯಗಳ ಅಗತ್ಯಗಳು ಹಾಗೂ ಮತ್ತೊಂದೆಡೆ ಶೃಂಗೀಯ ನೈಪುಣ್ಯತೆಗಲಿಂದಾಗಿ, ವಿಷಯಗಳಲ್ಲಿಯಾಗಲಿ ಅಥವಾ ಸಂಸ್ಥೆಗಳಲ್ಲಿಯಾಗಲಿ, ಪರಿಹಾರಗಳು ಬಹುಶಾಸ್ತ್ರೀಯ ಮತ್ತು ಸೀಮಿತಗಳನ್ನು ಮೀರಿದುದಾಗಿರಬೇಕು. ಪ್ರತಿ ಉದ್ಯಮವು, ಕಾರ್ಯ ದಕ್ಷತೆಯ ವರ್ಧಿನೆ ಮತ್ತು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ಕ್ಷಮತೆಯನ್ನು ಹೊಂದಿರುವ ಹೊಸ ಆವಿಷ್ಕಾರಗಳ ನೀರೀಕ್ಷಣೆಯಲ್ಲಿವೆ.

ಈ ಹಿನ್ನಲೆಯಲ್ಲಿ, ಅಕಾಡೆಮಿಯು ಸಮಾಜದ ಎಲ್ಲಾ ಸ್ಥರಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ, ತಂತ್ರಜ್ಞಾನ ಪ್ರಸರಣಕ್ಕೆ ಅನುಕೂಲಕರವಾದ ವಾತಾವರಣವನ್ನು ಕಲ್ಪಿಸುವ, ಸಾಮಾಜದ ಏಳಿಗೆಗಾಗಿ ಆವಿಷ್ಕಾರ/ನಾವೀನ್ಯತೆಗಳನ್ನು ಉತ್ತೇಜಿಸುವ ಮತ್ತು ಉದ್ಯಮಶೀಲತೆಯನ್ನು ವೃದ್ದಿಸುವ ಸಹಭಾಗಿತ್ವ ಹೊಂದಲು ಉದ್ದೇಶಿಸಿದೆ. ವಿಜ್ಞಾನ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ವಿವಿಧ ಕ್ಷೇತ್ರಗಳಲ್ಲಿನ ಸಾರ್ವಜನಿಕ ಮತ್ತು ಕಾರ್ಪೊರೇಟ್ ಸಂಸ್ಥೆಗಳ ಜೊತೆಗೆ ಸಹಯೋಗಕ್ಕೆ ಆದ್ಯತೆ ನೀಡಲಾಗುತ್ತಿದೆ. ಅದರಂತೆ, ಕರ್ನಾಟಕದಲ್ಲಿರುವ ಹಲವಾರು ಸಂಸ್ಥೆಗಳಿಗೆ ತರಬೇತಿ ಕಾರ್ಯಕ್ರಮಗಳು, ಸಂಶೋದನೆಗಳು ಮತ್ತು ಅಭಿವೃದ್ಧಿಗಳು ಹಾಗೂ ಸಂಬಂಧಿತ ಅಂಶಗಳಲ್ಲಿ ಸಹಯೋಗಕ್ಕೆ ಒಡಂಬಡಿಕೆ ನಮೂನೆಯೊಂದಿಗೆ ಪತ್ರಗಳನ್ನು ಕಳುಹಿಸಲಾಗಿದ್ದು, ಉತ್ಸಾಹಭರಿತ ಪ್ರತಿಕ್ರಿಯೆಗಳನ್ನು ಪಡೆಯಲಾಗಿದೆ.

ಒಂದುಗೂಡಿದಲ್ಲಿ ಬದಲಾವಣೆಯನ್ನು ತರಬಹುದು ಎಂಬುದು ನನ್ನ ನಂಬಿಕೆ. ವಿಜ್ಞಾನ-ತಂತ್ರಜ್ಞಾನ-ಆವಿಷ್ಕಾರ ಹಾಗೂ ಸಹಭಾಗಿತ್ವದ ಮನೋಭಾವದ ಮೂಲಕ ಸಮಾಜಕ್ಕೆ ನಮ್ಮ ಕೊಡುಗೆ ನೀಡಲು ನಾವು ಕೈಜೋಡಿಸೋಣ.

– ಎಸ್. ಅಯ್ಯಪ್ಪನ್

ಸೆಪ್ಟೆಂಬರ್ 30, 2020

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content