ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಅಧ್ಯಕ್ಷರ ಲೇಖನಿಯಿಂದ: ಜೂನ್ 30, 2021

1 min read

ಕೋವಿಡ್-19ರ ಎರಡನೇ ಅಲೆಯೊಳಗೆ ನಾವು ಸಾಗುವತ್ತಿರುವ ಈ ಸಂದರ್ಭದಲ್ಲಿ ವಿಜ್ಞಾನವು ಈ ಪಿಡುಗಿನ ನಿರ್ವಹಣೆಯಲ್ಲಿ ಮತ್ತೆ ಕೇಂದ್ರ ಸ್ಥಾನವನ್ನು ಪಡೆದುಕೊಂಡಿದೆ. ಪರೀಕ್ಷೆಯಿಂದ ಹಿಡಿದು ಚಿಕಿತ್ಸೆಯವರೆವಿಗೂ ಹೊಸ ಆವಿಷ್ಕಾರ/ನಾವಿನ್ಯತೆ ಹಾಗೂ ಹಲವಾರು ವಿಜ್ಞಾನ ಮತ್ತು ತಂತ್ರಜ್ಞಾನ ಸಾಧನಗಳನ್ನು ಬಳಸಿಕೊಳ್ಳಲಾಗಿದೆ. ಸಂವಹನ ಮತ್ತು ವಹಿವಾಟಿನ ಹೊಸ ವಿಧಾನಗಳೊಂದಿಗೆ ನಾವೆಲ್ಲರೂ ಕೈ ಜೋಡಿಸಬೇಕಾದ ಸಂದರ್ಭದಲ್ಲಿ ಈ ಬಿಕ್ಕಟ್ಟನ್ನು ನಿವಾರಿಸುವ ಭರವಸೆಯನ್ನು ನೀಡಿದೆ.

ಮಾರ್ಚ್, 2021 ರಲ್ಲಿ ಪ್ರಮುಖ ಕಾರ್ಯಕ್ರಮಗಳಾದ ತರಬೇತುದಾರರ ತರಬೇತಿ ಕೇಂದ್ರದ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭಗಳನ್ನು ನಡೆಸಿದ ನಂತರ, ಅಕಾಡೆಮಿಯು ಮುಂಬರುವ ಆರ್ಥಿಕ ವರ್ಷ 2021-22 ರ ಚಟುವಟಿಕೆಗಳ ಯೋಜನೆಯತ್ತ ಕಾರ್ಯನಿರತವಾಯಿತು. ಕೋವಿಡ್-19 ಪಿಡುಗು ಸೇರಿದಂತೆ ಪ್ರಸ್ತುತ ವಿಷಯಗಳ ಮೇಲೆ ಕೇಂದ್ರೀಕರಿಸಿದ ವೆಬಿನಾರ್ ಗಳ ಸರಣಿಯ ಜೊತೆಗೆ 2021 ರ ಮೇ-ಆಗಸ್ಟ್ ಅವಧಿಯಲ್ಲಿ 75ನೇ ಭಾರತೀಯ ಸ್ವಾತಂತ್ರ್ಯ ದಿನದ ಸ್ಮರಣಾರ್ಥ ಅಕಾಡೆಮಿಯ ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತರರಿಂದ ‘ಭಾರತ ಸ್ವತಂತ್ರ ಅಮೃತ ಮಹೋತ್ಸವ’  ಎಂಬ ಶೀರ್ಷಿಕೆಯ ಉಪನ್ಯಾಸ ಮಾಲೆಯನ್ನು ನಡೆಸಲಾಗುತ್ತಿದೆ.

ಕಾರ್ಯತಂತ್ರಗಳನ್ನು ರೂಪಿಸುವ ಮತ್ತು ಸಮಾಜಕ್ಕೆ ವಿಜ್ಞಾನದ ಸಂದೇಶಗಳನ್ನು ಪ್ರಸರಿಸುವಂತಹ ಅಕಾಡೆಮಿಯ ಪ್ರಯತ್ನಗಳಿಗೆ ಹೆಚ್ಚು ಹೆಚ್ಚು ಸಹಯೋಗ ಸಂಸ್ಥೆಗಳು ಸೇರುತ್ತಿದ್ದಾರೆ. ಅಕಾಡೆಮಿಯ ಪ್ರಶಸ್ತಿಗಳ ಮುಂದಿನ ಪ್ರಕಟಣೆ ಸೇರಿದಂತೆ ವೆಬ್ ಸೈಟ್ ನಿರಂತರವಾಗಿ ಹೊಸ ವೈಶಿಷ್ಟ್ಯಗಳನ್ನು ಪ್ರಕಟಿಸಲಾಗುತ್ತಿದೆ. ನಿಮ್ಮ ಸಲಹೆಗಳು ಮತ್ತು ಅಕಾಡೆಮಿಯೊಂದಿಗೆ ಸಹಯೋಗವನ್ನು ನಾವು ಎದುರು ನೋಡುತ್ತಿದ್ದೇವೆ.

ಎಸ್. ಅಯ್ಯಪ್ಪನ್

ಜೂನ್ 30, 2021

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.
Skip to content