ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು 2005ರಿಂದ ಕಾರ್ಯನಿರ್ವಹಿಸುತ್ತಿದ್ದು, ವಿಜ್ಞಾನ ಸಂವಹನ, ತಂತ್ರಜ್ಞಾನ ಪ್ರಸರಣದ, ಆವಿಷ್ಕಾರಗಳು/ನಾವಿನ್ಯತೆಗೆ ಪ್ರೊತ್ಸಾಹ, ಸಮಾಜದ ಉಪಯೋಗಕ್ಕಾಗಿ ಉದ್ಯಮಶೀಲತೆಗೆ ಉತ್ತೇಜನ, ಪ್ರತಿಭೆಗಳನ್ನು ಗುರುತಿಸುವುದು ಮತ್ತು ಸಾಮರ್ಥ್ಯ ವರ್ಧನೆ ಮತ್ತು ಕಾರ್ಯಕ್ರಮಗಳ ಅನುಷ್ಠಾನದ ಮೂಲಕ ಸಮಾಜದ ಎಲ್ಲಾ ಸ್ಥರಗಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸುವ ಉದ್ದೇಶವನ್ನು ಹೊಂದಿದ್ದೆದು, ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಸಲಹಾ ಮಂಡಳಿಯಾಗಿಯೂ ಕಾರ್ಯನಿರ್ವಹಿಸುತ್ತಿದೆ. ಆರ್ಥೀಕ ವರ್ಷ 2020-21ರಲ್ಲಿ ಈ ಕೆಳಗಿನ ಹೊಸ ಮುನ್ನಡೆಗಳನ್ನು ಕೈಗೊಂಡು ಅನುಷ್ಠಾನಗೊಳಿಸಲಾಗುತ್ತಿದೆ.
- ನೀತಿ/ಕಾರ್ಯತಂತ್ರ/ಅಪ್ರೋಚ್/ಸ್ಥಿತಿ ಪತ್ರಗಳು
- ವಿಜ್ಞಾನ ಪ್ರವಾಸೋದ್ಯಮ
- ಅಲ್ಪಾವಧಿ ಅಧ್ಯಯನಗಳು
- ವಿಜ್ಞಾನ ವೀಡಿಯೊ ಕ್ಯಾಪ್ಸೂಲ್ ಗಳು
- ಪ್ರಖ್ಯಾತಿಗೆ ಹತ್ತು ನಿಮಿಷಗಳು: ವೀಡಿಯೊ ಉಪನ್ಯಾಸ ಸ್ಪರ್ಧೆ
- ಪುಸ್ತಕಗಳ ಪ್ರಕಟಣೆ
- ಆವಿಷ್ಕಾರ/ನಾವಿನ್ಯತೆ ವೇದಿಕೆ
- ಯೋಜನಾ ನಿರ್ವಹಣೆ ಮತ್ತು ಮೌಲ್ಯಮಾಪನ ಹಾಗೂ ಪರಿಣಾಮ ಮೌಲ್ಯಮಾಪನ ಅಧ್ಯಯನ