ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಸದಸ್ಯತ್ವ

ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಶಿಕ್ಷಣದ ಕ್ಷೇತ್ರಗಳಲ್ಲಿ ಪ್ರತಿಭಾನ್ವಿತರನ್ನು ಗುರುತಿಸಿ ಪ್ರೋತ್ಸಾಹಿಸಲು ಹಾಗೂ ಸಂಸ್ಥೆಗಳು/ಉದ್ಯಮಗಳೊಂದಿಗೆ ಸಂಪರ್ಕವನ್ನು ಸ್ಥಾಪಿಸುವ ಸಲುವಾಗಿ, ಅಕಾಡೆಮಿಯ ಸಹ ಸದಸ್ಯತ್ವ (ವೈಯಕ್ತಿಕ) ಮತ್ತು ಸಾಂಸ್ಥಿಕ ಸದಸ್ಯತ್ವವನ್ನು ನೀಡಲು ಯೋಜಿಸಲಾಗಿದೆ.

ಸಹ ಸದಸ್ಯತ್ವ (ವೈಯಕ್ತಿಕ)

ಸಾಂಸ್ಥಿಕ

ಸಾಂಸ್ಥಿಕ ಸದಸ್ಯತ್ವ

 • ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರ/ನಾವೀನ್ಯತೆಗಳಲ್ಲಿ  ಅಥವಾ ಅಕಾಡೆಮಿಯ ಉದ್ದೇಶಗಳಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕರ್ನಾಟಕದಲ್ಲಿರುವ ಪ್ರತಿಷ್ಠಿತ ಸಂಸ್ಥೆಗಳು ಮತ್ತು ಪರಸ್ಪರ ಒಪ್ಪಿ ಕಾರ್ಯಕ್ರಮಗಳನ್ನು ನಡೆಸಲು  ಅಕಾಡೆಮಿಯ ಕಾರ್ಪಸ್ ಫಂಡ್‌.ಗೆ ರೂಪಾಯಿ ಒಂದು ಲಕ್ಷ ಕೊಡುಗೆ ನೀಡಲು ಬಯಸುವ ಸಂಸ್ಥೆಗಳು ಸದಸ್ಯತ್ವವನ್ನು ಹೊಂದಬಹುದಾಗಿದೆ.
 • ಸದಸ್ತ್ವದ ಅವಧಿಯು 10 ವರ್ಷಗಳು
 • ಸಾಂಸ್ಥಿಕ ಸದಸ್ಯತ್ವಕ್ಕಾಗಿ ಆಸಕ್ತಿ ವ್ಯಕ್ತಪಡಿಸಿ ವರ್ಷದ ಯಾವುದೇ ಸಮಯದಲ್ಲಿ ಅರ್ಜಿಯನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಪ್ರೊ.ಯು.ಆರ್. ರಾವ್ ವಿಜ್ಞಾನ ಭವನ, ತೋಟಗಾರಿಕೆ ಕಾಲೇಜು ಪ್ರವೇಶ ದ್ವಾರ, ಜಿಕೆವಿಕೆ ಆವರಣ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ, ದೊಡ್ಡಬೆಟ್ಟಹಳ್ಳಿ ಬಡಾವಣೆ, ವಿದ್ಯಾರಣ್ಯಪುರ, ಬೆಂಗಳೂರು 560097 ಇವರಿಗೆ ಕಳುಹಿಸಬಹುದಾಗಿದೆ
 • ಸಾಂಸ್ಥಿಕ ಸದಸ್ಯರು ಅಕಾಡೆಮಿಯ ಉದ್ದೇಶಗಳಿಗೆ ಅನುಗುಣವಾಗಿ ಪರಸ್ಪರ ಒಪ್ಪಿದ ಕ್ಷೇತ್ರಗಳಲ್ಲಿ ಅಕಾಡೆಮಿಯು ಆಯೋಜಿಸಬಹುದಾದ ಕಾರ್ಯಕ್ರಗಳನ್ನು ಶಿಫಾರಸ್ಸು ಮಾಡಬಹುದಾಗಿದ್ದು, ಕಾರ್ಯಕಾರಿ ಸಮಿತಿಯ ಅನುಮೋದನೆಗೆ ಒಳಪಟ್ಟಿರುತ್ತದೆ
 • ಅಕಾಡೆಮಿ ಆಯೋಜಿಸುವ ಎಲ್ಲಾ ವೈಜ್ಞಾನಿಕ ಕಾರ್ಯಕ್ರಗಳಲ್ಲಿ ಭಾಗವಹಿಸಲು ಸಾಂಸ್ಥಿಕ ಸದಸ್ಯರಿಗೆ ಅವಕಾಶ ನೀಡಲಾಗುವುದು
 • ಸಾಂಸ್ಥಿಕ ಸದಸ್ಯರು ಅಕಾಡೆಮಿಯ ಪ್ರಕಟಣೆಗಳನ್ನು ಪಡೆಯಲು ಮತ್ತು ಅಕಾಡೆಮಿಯ ಸಭಾಂಗಣ, ಸಂಪನ್ಮೂಲ ಸೃಜನ ಕೇಂದ್ರ ಮತ್ತು ಅತಿಥಿ ಗೃಹದ ಸೌಲಭ್ಯಗಳನ್ನು ರಿಯಾಯಿತಿ ದರದಲ್ಲಿ ನಿಬಂಧನೆಗಳಿಗೆ ಒಳಪಟ್ಟು ಪಡೆಯಬಹುದು

ಸಹ ಸದಸ್ಯತ್ವ (ವೈಯಕ್ತಿಕ)

 • ಶಿಕ್ಷಣ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕರ್ನಾಟಕ ಮೂಲದ (ಜನನ ಅಥವಾ ನಿವಾಸದ ಮೂಲಕ), ಪ್ರಪಂಚದ ಯಾವುದೇ ಸ್ಥಳದಲ್ಲಿ ವಾಸಿಸುತ್ತಿರುವ ಮೇಲ್ಕಂಡ ವಿಭಾಗಗಳಲ್ಲಿ ಅತ್ಯುನ್ನತ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರುವವರು ವೈಯಕ್ತಿಕ ಸಹ ಸದಸ್ಯತ್ವಕ್ಕೆ ಅರ್ಹರು; ಸಂಶೋಧನಾ ಪ್ರಕಟಣೆಗಳು ಅಥವಾ ಶಿಕ್ಷಕರಾಗಿ ಅಥವಾ ವಿಜ್ಞಾನ ಪ್ರೋತ್ಸಾಹ / ಸಂವಹನ / ಜನಪ್ರಿಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವುದರ ದಾಖಲೆ ಪುರಾವೆಗಳು ಅಗತ್ಯ
 • ಸಹ ಸದಸ್ಯತ್ವದ ಅರ್ಜಿಯ ಜೊತೆಗೆ ಪ್ರವೇಶ ಶುಲ್ಕ ರೂ. 1,000 / – ಗಳನ್ನು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಬೆಂಗಳೂರಿಗೆ ಇವರಿಗೆ ಪಾವತಿಸಬೇಕು.
 • ಸದಸ್ಯತ್ವದ ಅವಧಿಯು 5 ವರ್ಷಗಳು
 • ಸಹ ಸದಸ್ಯತ್ವ ಪಡೆದವರು ನಿಬಂಧನೆಗಳ ಒಳಪಟ್ಟು ಅಕಾಡೆಮಿಯ ಗ್ರಂಥಾಲಯ ಬಳಸಲು ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸಲು; ಅಕಾಡೆಮಿಯ ಪ್ರಕಟಣೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ನಾಮನಿರ್ದೇಶನ ಅರ್ಜಿಯ ನಮೂನೆ
 • Bank details for online transfer:
 • Bank Name     : State Bank of India
 • Address line 1  : NIT Layout
 • Address line 2  : Vidyaranyapura
 • Address line 3 : Bengaluru – 560 097
 • Beneficiary A/c Name : Karnataka Science and Technology Academy
 • Bank Account Number : 64001018807
 • IFSC Code     : SBIN0009045

ವಿಜ್ಞಾನಕ್ಕೆ ಸಂಬಂಧಿಸಿದ ಕ್ಷೇತ್ರಗಳು

ಕೃಷಿ ವಿಜ್ಞಾನಗಳು

ಕೃಷಿ, ಪಶುಸಂಗೋಪನೆ, ಮೀನುಗಾರಿಕೆ, ಅರಣ್ಯಶಾಸ್ತ್ರ, ಕೃಷಿ ಟಾಕ್ಸಿಕಾಲಜಿ, ಮಣ್ಣು ವಿಜ್ಞಾನ, ಸಸ್ಯ ಸಂರಕ್ಷಣೆ, ಕಟಾವಿನ ನಂತರದ ತಂತ್ರಜ್ಞಾನ, ಕೃಷಿ ಎಂಜಿನಿಯರಿಂಗ್ ಸೇರಿದಂತೆ.

ಪ್ರಾಣಿ ವಿಜ್ಞಾನ

ರಚನಾತ್ಮಕ, ಅಭಿವೃದ್ಧಿ, ಕ್ರಿಯಾತ್ಮಕ, ಅನುವಂಶಿಕ, ಪರಿಸರ, ನಡವಳಿಕೆ, ಟ್ಯಾಕ್ಸಾನಾಮಿಕಲ್ ಮತ್ತು ವಿಕಸನೀಯ ಅಂಶಗಳನ್ನು ಒಳಗೊಂಡು

ಬಯೋಕೆಮಿಸ್ಟ್ರಿ, ಬಯೋಫಿಸಿಕ್ಸ್, ಬಯೋಟೆಕ್ನಾಲಜಿ

ವಿಶ್ಲೇಷಣಾತ್ಮಕ, ಅಜೈವಿಕ, ಸಾವಯವ, ಭೌತಿಕ, ಸೈದ್ಧಾಂತಿಕ ರಸಾಯನಶಾಸ್ತ್ರ, ಅನ್ವಯಿಕ ರಸಾಯನಶಾಸ್ತ್ರ ಸೇರಿದಂತೆ

ರಾಸಾಯನಿಕ ವಿಜ್ಞಾನ

ವಿಶ್ಲೇಷಣಾತ್ಮಕ, ಅಜೈವಿಕ, ಸಾವಯವ, ಭೌತಿಕ, ಸೈದ್ಧಾಂತಿಕ ರಸಾಯನಶಾಸ್ತ್ರ, ಅನ್ವಯಿಕ ರಸಾಯನಶಾಸ್ತ್ರ ಸೇರಿದಂತೆ

ಅರ್ಥ್ ಸೈನ್ಸ್

ಇದರಲ್ಲಿ ವಾಯುಮಂಡಲ ವಿಜ್ಞಾನ, ಭೂ-ವಿಜ್ಞಾನ, ಸಾಗರವಿಜ್ಞಾನ, ಭೂಗೋಳಶಾಸ್ತ್ರ
ಎಂಜಿನಿಯರಿಂಗ್ ವಿಜ್ಞಾನಗಳು ಮತ್ತು ಎಂಜಿನಿಯರಿಂಗ್ ತಂತ್ರಜ್ಞಾನ

ಎಂಜಿನಿಯರಿಂಗ್ ವಿಜ್ಞಾನಗಳು ಮತ್ತು ಎಂಜಿನಿಯರಿಂಗ್ ತಂತ್ರಜ್ಞಾನ

ಎಂಜಿನಿಯರಿಂಗ್ ಸೈನ್ಸ್, ಕೆಮಿಕಲ್ ಅಂಡ್ ಮೆಟೀರಿಯಲ್ ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್ & ಟೆಲಿಕಮ್ಯೂನಿಕೇಶನ್, ಇನ್ ಫರ್ಮೇಷನ್ ಟೆಕ್ನಾಲಜಿ, ಇನ್ ಸ್ಟ್ರುಮೆಂಟೇಶನ್ ಸೇರಿದಂತೆ

ಗಣಿತ ವಿಜ್ಞಾನ

ಶುದ್ಧ ಗಣಿತ, ಅನ್ವಯಿಕ ಗಣಿತ, ಸಂಖ್ಯಾಶಾಸ್ತ್ರ, ಕಂಪ್ಯೂಟರ್ / ಮಾಹಿತಿ ವಿಜ್ಞಾನ ಸೇರಿದಂತೆ

ವೈದ್ಯಕೀಯ & ವಿಧಿವಿಜ್ಞಾನ ವಿಜ್ಞಾನ

ಇದರಲ್ಲಿ ಬೇಸಿಕ್ ಮತ್ತು ಕ್ಲಿನಿಕಲ್ ಮೆಡಿಕಲ್ ಸೈನ್ಸಸ್, ಫಾರ್ಮಕಾಲಜಿ, ಆಂತ್ರೊಪಾಲಜಿ, ಸೈಕಾಲಜಿ ಮತ್ತು ವಿಧಿವಿಜ್ಞಾನ ವಿಜ್ಞಾನ, ಮಾನವ ತಳಿಶಾಸ್ತ್ರ, ಸಂತಾನೋತ್ಪತ್ತಿ ಜೀವಶಾಸ್ತ್ರ, ನರವಿಜ್ಞಾನ, ಅಣು ವೈದ್ಯಶಾಸ್ತ್ರ ಸೇರಿದಂತೆ ಹಲವು ಅಂಶಗಳು ಸೇರಿವೆ.

ಭೌತಿಕ ವಿಜ್ಞಾನ

ಖಗೋಳಶಾಸ್ತ್ರ, ಖಭೌತಶಾಸ್ತ್ರ, ಪ್ರಾಯೋಗಿಕ ಮತ್ತು ಸೈದ್ಧಾಂತಿಕ ಭೌತಶಾಸ್ತ್ರ, ಅನ್ವಯಿಕ ಭೌತಶಾಸ್ತ್ರ ಸೇರಿದಂತೆ

ಸಸ್ಯ ವಿಜ್ಞಾನಗಳು

ರಚನಾತ್ಮಕ, ಅಭಿವೃದ್ಧಿ, ಕ್ರಿಯಾತ್ಮಕ, ಅನುವಂಶಿಕ, ಪರಿಸರ, ಟ್ಯಾಕ್ಸಾನಾಮಿಕಲ್ ಮತ್ತು ವಿಕಸನೀಯ ಅಂಶಗಳು ಒಳಗೊಂಡಿವೆ

ವಿಜ್ಞಾನ & ಸೊಸೈಟಿ

ಇದರಲ್ಲಿ ಫಿಲಾಸಫಿ ಆಫ್ ಸೈನ್ಸ್, ಹಿಸ್ಟರಿ ಆಫ್ ಸೈನ್ಸ್, ಎಥಿಕ್ಸ್, ಸೈನ್ಸ್ ಪಾಲಿಸಿ, ಸೈನ್ಸ್ ಅಂಡ್ ಟೆಕ್ನಾಲಜಿ ಆಧಾರಿತ ಉದ್ಯಮಶೀಲತೆ, ಎಸ್ ಅಂಡ್ ಟಿ ಮ್ಯಾನೇಜ್ ಮೆಂಟ್, ಸೈನ್ಸ್ ಜನಪ್ರಿಯತೆ

ಸಮಾಜ ವಿಜ್ಞಾನಗಳು

ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಮನೋವಿಜ್ಞಾನ, ಸಂವಹನ, ಗೃಹ ವಿಜ್ಞಾನ ಸೇರಿದಂತೆ

Copyright © 2019. Karnataka Science and Technology Academy. All rights reserved.
Skip to content