ವಿಜ್ಞಾನ ಸಾಕ್ಷರತೆ ಮತ್ತು ವಿಜ್ಞಾನ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಅಕಾಡೆಮಿಯ ವತಿಯಿಂದ ಪದವಿ ಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕವಾಗಿ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.
ಪ್ರಬಂಧ ಸ್ಪರ್ಧೆಯ ವಿಷಯಗಳು 2020
ಪದವಿ ಹಂತ
ಸ್ನಾತಕೋತ್ತರ ಹಂತ
ಜನಸಾಮಾನ್ಯರಿಗೆ
ಕೋವಿಡ್ 19 ನಂತರದ ಸಾಮಾಜಿಕ-ಆರ್ಥಿಕ ಸವಾಲುಗಳು
ಕೋವಿಡ್ 19 ನಂತರದ ಆರ್ಥಿಕ ಪುನಶ್ಚೇತನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳ ಪಾತ್ರ
ಪ್ರಬಂಧ ಬರವಣಿಗೆಯ ಮೂಲಕ ಸೃಜನಶೀಲತೆ ಮತ್ತು ನಾಯಕತ್ವ ಕೌಶಲ್ಯಗಳನ್ನು ಉತ್ತೇಜಿಸುವುದು ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ. ಸ್ಪರ್ಧಿಗಳಲ್ಲಿ ತ್ವರಿತವಾಗಿ ಯೋಚಿಸುವ, ಮನವೊಲಿಸುವ ಬರವಣಿಗೆ ಮತ್ತು ಉತ್ತಮ ವಿಚಾರಗಳನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುವ ಸಾಮರ್ಥ್ಯವನ್ನು ಈ ಸ್ಪರ್ಧೆಯು ಹೊರತರುತ್ತದೆ. ಉತ್ತಮ ಬರವಣಿಗೆಶೈಲಿಯು ವಿಜೇತರನ್ನು ನಿರ್ಧರಿಸುವಲ್ಲಿ ಪ್ರಮುಖ ಅಂಶವಾಗಿರುತ್ತದೆ
ಪ್ರಬಂಧ ಬರವಣಿಗೆಯು ನಿರ್ಣಾಯಕ ಚಿಂತನೆ ಮತ್ತು ಪ್ರತಿಫಲನಾತ್ಮಕ ವಿಶ್ಲೇಷಣೆಯನ್ನು ಒಳಗೊಂಡಿರುತ್ತದೆ. ವಾದಗಳನ್ನು ಪರಾಮರ್ಶಿಸಿ ತಮ್ಮ ದೃಷ್ಟಿಕೋನವನ್ನು ಹೆಚ್ಚು ಸಮಗ್ರವಾಗಿ ಅಭಿವೃದ್ಧಿಗೊಳಿಸಲು ನಿಲುವುಗಳನ್ನು ತೆಗೆದುಕೊಳ್ಳುವತ್ತ ವಿದ್ಯಾರ್ಥಿಗಳು ವಿಮರ್ಶಾತ್ಮಕ ಚಿಂತನೆಯ ಸವಾಲನ್ನು ಎದುರಿಸುತ್ತಾರೆ
ಮೂರು ವರ್ಗಗಳ ಪ್ರಬಂಧ ಸ್ಪರ್ಧೆಯ ಕೇಂದ್ರ ವಿಷಯವನ್ನು ಅಕಾಡೆಮಿಯ ಕಾರ್ಯಕಾರಿ ಸಮಿತಿಯ ಸದಸ್ಯರ ಸಲಹೆಗಳ ಮೇಲೆ ನಿರ್ಧರಿಸಲಾಗುವುದು ಮತ್ತು ವೆಬ್ ಸೈಟ್ ನಲ್ಲಿ ಹೋಸ್ಟ್ ಮಾಡಲಾಗುವುದು. ಅಕಾಡೆಮಿಗೆ ಪ್ರಬಂಧಗಳನ್ನು (ಆನ್ ಲೈನ್ ಮತ್ತು ಹಾರ್ಡ್ ಕಾಪಿಗಳೆರಡನ್ನೂ) ಕಳುಹಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗುವುದು.
ಪ್ರಬಂಧಗಳು ನೈಜವಾಗಿರಬೇಕು, ಈ ಮೊದಲು ಎಲ್ಲಿಯೂ ಪ್ರಕಟಿಸಿರಬಾರದು ಅಥವಾ ಪ್ರಸ್ತುತಿ ಪಡಿಸಿರಬಾರದು ಹಾಗೂ 10 ಪುಟಗಳಿಗೆ ಮೀರದಂತೆ ಅಕಾಡೆಮಿ ಸೂಚಿಸಿದ ನಮೂನೆಯಲ್ಲಿರಬೇಕು
ಪ್ರಬಂಧದ ಜೊತೆಗೆ ಲೇಖಕರ ವಿವರಗಳನ್ನು ಒಂದು ಪ್ರತ್ಯೇಕ ಪುಟದಲ್ಲಿ ಸ್ಪಷ್ಟವಾಗಿ ನೀಡುವುದು. ಯಾವುದೇ ಪತ್ರವ್ಯವಹಾರಕ್ಕೆ ಉತ್ತೇಜನವಿಲ್ಲ
ಅರ್ಹತೆ
ಸ್ಪರ್ಧಿಗಳು ಕರ್ನಾಟಕ ಮೂಲದವರಾಗಿ ವಿಶ್ವದ ಯಾವುದೇ ಭಾಗದಲ್ಲಿ ನೆಲೆಸಿರಬಹುದು
ಪದವಿಪೂರ್ವ ವಿದ್ಯಾರ್ಥಿಗಳು: ಪದವಿಪೂರ್ವ ಕೋರ್ಸ್ ಗೆ ಸೇರ್ಪಡೆಯಾಗಿರುವ ಮತ್ತು ಕೋರ್ಸ್ ಇನ್ನೂ ಪೂರ್ಣಗೊಂಡಿಲ್ಲದ ವಿದ್ಯಾರ್ಥಿಗಳು; ವಯಸ್ಸು 22 ವರ್ಷಗಳನ್ನು ಮೀರಿರಬಾರದು
ಸ್ನಾತಕೋತ್ತರ ವಿದ್ಯಾರ್ಥಿಗಳು: ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಿಗೆ ಗೆ ಸೇರ್ಪಡೆಯಾಗಿರುವ ಮತ್ತು ಕೋರ್ಸ್ ಇನ್ನೂ ಪೂರ್ಣಗೊಂಡಿಲ್ಲದ ವಿದ್ಯಾರ್ಥಿಗಳು; ವಯಸ್ಸು 24 ವರ್ಷಗಳನ್ನು ಮೀರಿರಬಾರದು
ಜನಸಾಮಾನ್ಯರು: ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರದಲ್ಲಿ ಆಸಕ್ತಿ ಹೊಂದಿರುವವರು; ವಯಸ್ಸು 50 ವರ್ಷಗಳನ್ನು ಮೀರಿರಬಾರದು
ಮೌಲ್ಯಮಾಪನ & ಪ್ರಶಸ್ತಿಗಳು
ಪ್ರಬಂಧಗಳನ್ನು ಸ್ಪಷ್ಟತೆ ಮತ್ತು ವಿಷಯಕ್ಕೆ ಸಂಬಂಧಿಸಿದ ಮಾನದಂಡಗಳೊಂದಿಗೆ, ಪ್ರಬಂಧಗಳ ನೈಜತೆ ಮತ್ತು ಪ್ರಸ್ತುತತೆ; ರಚನೆ ಮತ್ತು ಚಿಂತನೆಗಳ ಹರಿವು; ಸಂದೇಶದ ಸಂವಹನ ಮತ್ತು ಪರಿಣಾಮಕಾರಿತ್ವದ ಅಂಶಗಳ ಮೇಲೆ ಪ್ರತಿಷ್ಠಿತ ತಜ್ಞರ ಸಮಿತಿಯ ಮೂಲಕ ಮೌಲ್ಯಮಾಪನ ಮಾಡಿಸಲಾಗುವುದು
ಪ್ರಬಂಧಗಳನ್ನು ಸ್ವೀಕರಿಸಲು ಕೊನೆಯ ದಿನಾಂಕದಿಂದ ಮೂರು ತಿಂಗಳೊಳಗಾಗಿ ಅಕಾಡೆಮಿಯ ವೆಬ್ ಸೈಟ್ ನಲ್ಲಿ ಪ್ರಶಸ್ತಿಗಳ ಫಲಿತಾಂಶಗಳನ್ನು ಪ್ರಕಟಿಸಲಾಗುವುದು.
ಅಕಾಡೆಮಿಯು ಪ್ರಶಸ್ತಿಗೆ ಸಲ್ಲಿಸಿದ ಪ್ರಬಂಧಗಳ ಹಕ್ಕುಸ್ವಾಮ್ಯವನ್ನು ಹೊಂದಿರುತ್ತದೆ ಮತ್ತು ಪ್ರಶಸ್ತಿ ವಿಜೇತ ಪ್ರಬಂಧಗಳನ್ನು ಸಂಪಾದಕೀಯ ಸಮಿತಿಯ ವಿವೇಚನೆಯ ಮೇರೆಗೆ ಅಕಾಡೆಮಿಯ ಇ-ನ್ಯೂಸ್ ಲೆಟರ್ ನಲ್ಲಿ ಪ್ರಕಟಿಸಲಾಗುತ್ತದೆ
ಸ್ಪರ್ಧೆಗೆ ಯಾವುದೇ ಪ್ರಬಂಧಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಹಕ್ಕನ್ನು ಅಕಾಡೆಮಿಯು ಹೋದಿರುತ್ತದೆ ಮತ್ತು ಈ ವಿಷಯದಲ್ಲಿ ಅಕಾಡೆಮಿಯ ನಿರ್ಧಾರಗಳು ಅಂತಿಮ ಮತ್ತು ಬದ್ಧವಾಗಿರುತ್ತದೆ.
ಪ್ರಶಸ್ತಿಯ ವರ್ಗಗಳು ಮತ್ತು ನಿಗದಿಪಡಿಸಿದ ನಗದು ಪುರಸ್ಕಾರ (ಕನ್ನಡ & ಇಂಗ್ಲಿಷ್ ಗೆ ಪ್ರತ್ಯೇಕ ಬಹುಮಾನ)