- ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿ ಆ ಕ್ಷೇತ್ರಗಳ ಬೆಳವಣಿಗೆಗೆ ಕೊಡುಗೆಯನ್ನು ನೀಡಿರುವ ಕರ್ನಾಟಕ ಮೂಲದ (ಜನನ ಅಥವಾ ನಿವಾಸ), ಜಗತ್ತಿನ ಯಾವುದೇ ಭಾಗದಲ್ಲಿ ನೆಲಸಿರುವ ಹಿರಿಯ ವಿಜ್ಞಾನಿ / ತಂತ್ರಜ್ಞಾನಿ ಗುರುತಿಸಿ ಅಕಾಡೆಮಿಯ ವಾರ್ಷಿಕ ಸಮ್ಮೇಳನದಲ್ಲಿ ಸನ್ಮಾನಿಸಲಾಗುವುದು. ಅಕಾಡೆಮಿಯ ಮಾನವ ಸಂಪನ್ಮೂಲ ಸಮಿತಿಯು ಪ್ರತಿವರ್ಷ ನವೆಂಬರ್ ವೇಳೆಗೆ ಕಾರ್ಯಕಾರಿ ಸಮಿತಿಯ ಪರಿಗಣನೆಗೆ ಹೆಸರುಗಳ ಪಟ್ಟಿಯನ್ನು ಸಿದ್ಧಪಡಿಸುತ್ತದೆ.
- ಆಯ್ಕೆಯಾದ ವಿಜ್ಞಾನಿ / ತಂತ್ರಜ್ಞಾನಿಗೆ ಚಿನ್ನದ ಪದಕ, ರೂ. 2.00 ಲಕ್ಷಗಳ ನಗದು ಪುರಸ್ಕಾರ ಮತ್ತು ಉಲ್ಲೇಖ ಫಲಕ ನೀಡಿ ಗೌರವಿಸಲಾಗುವುದು.
- ಪ್ರಶಸ್ತಿ ಪುರಸ್ಕೃತರನ್ನು ವಾರ್ಷಿಕ ಸಮ್ಮೇಳನಕ್ಕೆ ಆಹ್ವಾನಿಸಲಾಗುತ್ತದೆ ಮತ್ತು ಅವರು ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಭಾಷಣವನ್ನು ಮಾಡುತ್ತಾರೆ. ಸಮಾರಂಭದಲ್ಲಿ ಭಾಗವಹಿಸಲು ಅವರಿಗೆ ವಸತಿ ವ್ಯವಸ್ಥೆ ಮತ್ತು ವಿಮಾನ ಪ್ರಯಾಣ (ಎಕಾನಮಿ ದರ್ಜೆ) ಅಥವಾ ಪ್ರಥಮ ದರ್ಜೆ ರೈಲು ಪ್ರಯಾಣ ದರವನ್ನು ನೀಡಲಾಗುವುದು

ಡಾ. ಬಿ ವಿ ಶ್ರೀಕಂಠನ್ ರವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ
ಜೀವಮಾನ ಸಾಧನೆ ಪುರಸ್ಕ್ರತರು
2007

ಪ್ರೊ. ಯು ಆರ್ ರಾವ್ & ಪ್ರೊ. ಸಿ ಎನ ಆರ್ ರಾವ್
2009

ಪ್ರೊ. ರೊದ್ದಂ ನರಸಿಂಹ
2010

ಪ್ರೊ. ಆರ್ ದ್ವಾರಕೀನಾಥ್
2011

ಡಾ. ವಿ ಪ್ರಕಾಶ್
2012

ಡಾ. ಪಿ. ಎಸ್. ಶಂಕರ್
2013

ಪ್ರೊ. ಶರತ್ಚಂದ್ರ
2014

ಡಾ. ವಿ ಕೆ ಅತ್ರೆ
2015

ಡಾ. ಬಿ ಎನ್ ಸುರೇಶ್
2016

ಡಾ. ಎ ಎಸ್ ಕಿರಣ್ ಕುಮಾರ್
2017

ಡಾ ಎಸ್ ಕೆ ಶಿವಕುಮಾರ್
2018
