ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಎಮೆರಿಟಸ್ ಸಮಲೋಚಕರು

ಸಮಾಜದ ಜಟಿಲ ಸವಾಲುಗಳನ್ನು ಎದುರಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಹಾಗೂ ಸರ್ಕಾರ-ಸಾಂಸ್ಥಿಕ ಸಹಭಾಗಿತ್ವಕ್ಕೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ  ಈ ಕೆಳಗೆ ಸೂಚಿಸಲಾದ ಕ್ಷೇತ್ರಗಳಲ್ಲಿ ತಜ್ಞರ ಒಂದು ಸಮೂಹವನ್ನು ರಚಿಸಲು ಅಕಾಡೆಮಿಯು ಉದ್ದೇಶಿಸಿದೆ.

  • ಸಾರ್ವಜನಿಕ, ಕಾರ್ಪೊರೇಟ್, ಖಾಸಗಿ ಸಂಸ್ಥಗಳು, ನಿವೃತ್ತರು, ಅಥವಾ ಸ್ವಂತ ಉದ್ಯಮದಲ್ಲಿ ಸಾಧನೆ ಮಾಡಿರುವ ಕರ್ನಾಟಕ ಮೂಲದ (ಹುಟ್ಟಿನಿಂದ ಅಥವಾ ನಿವಾಸ)  ಶಿಕ್ಷಣ ತಜ್ಞರು, ಸಂಶೋಧಕರು, ಎಂಜಿನಿಯರ್ ಗಳು ಮತ್ತು ತಂತ್ರಜ್ಞರು, ಸೇವೆಯಲ್ಲಿದ್ದು ನಿವೃತ್ತಿ ಹೊಂದಿದವರು ಸೇರಿ, ಕೆಳಕಂಡ ವಿಭಾಗಗಳಲ್ಲಿನ ಉದಯೋನ್ಮುಕ ಉದ್ಯಮಿಗಳು, ಸ್ಟಾರ್ಟ್ಪ್ ಅಥವಾ ಉದ್ಯಮ ಕ್ಷೇತ್ರಕ್ಕೆ ಕಾಲಿಡುತ್ತಿರುವ ಹೊಸಬರಿಗೆ ಮಾರ್ಗದರ್ಶನ ನೀಡುವತ್ತ ತಮ್ಮ ಪರಿಣತಿ ಮತ್ತು ಸೇವೆಗಳನ್ನು ಒದಗಿಸಲು ಸಿದ್ಧರಿರುವವರು
  • ಅಕಾಡೆಮಿಯೊಂದಿಗೆ ನೋಂದಾಯಿಸಿಕೊಂಡು ಅಕಾಡೆಮಿಯಿಂದ ಕಾಲಕಾಲಕ್ಕೆ ಆಯೋಜಿಸುವ ಸಮ್ಮೇಳನಗಳು, ಕಾರ್ಯಾಗಾರಗಳು, ಸರ್ಟಿಫಿಕೇಟ್ ಕೋರ್ಸ್ ಗಳು, ತರಬೇತಿ ಕಾರ್ಯಕ್ರಮಗಳು, ವೆಬಿನಾರ್ ಗಳಲ್ಲಿ ತಮ್ಮ ಜ್ಞಾನವನ್ನು ಹಂಚಿಕೊಳ್ಳಲು  ಪ್ರತಿ ವರ್ಷ ಆಗಸ್ಟ್ ಮಾಹೆಯಲ್ಲಿ ಅಕಾಡೆಮಿಯ ವೆಬ್ ಸೈಟ್ ನಲ್ಲಿ ಇಚ್ಚಾಸಕ್ತಿ ವ್ಯಕ್ತಪಡಿಸಲು ಆಹ್ವಾನ ನೀಡಲಾಗುವುದು. ನಿಯಮಾನುಸಾರ ಅವಕಾಶವಿರುವ ಗೌರವಧನ ನೀಡಲಾಗುವುದು.
  • ಆಸಕ್ತರು ತಜ್ಞ ಸಮಿತಿಯ ಪರಿಶೀಲನೆಗೆ ತಮ್ಮ ಸ್ವವಿವರವನ್ನು ಒದಗಿಸಬಹುದು ಹಾಗೂ ತಜ್ಞ ಸಮಿತಿಯು ಪ್ರತಿ ವರ್ಷ ಡಿಸೆಂಬರ್ ಮಾಹೆಯೊಳಗಾಗಿ ಕಾರ್ಯಕಾರಿ ಸಮಿತಿಯ ಪರಿಗಣನಿಗೆ ಸಲ್ಲಿಸುವುದು
  • ಅವಶ್ಯಕತೆಗನುಸಾರ ಎಮೆರಿಟಸ್ ಸಮಾಲೋಚಕರ ಸೇವೆಯನ್ನು, ಅವರ ಪರಿಣಿತಿ ಮತ್ತು ಬೇಡಿಕೆಯ ನಡುವೆ ಸಮನ್ವಯದೊಂದಿಗೆ ಮತ್ತು ಅಕಾಡೆಮಿ – ಸಮಾಲೋಚಕರು- ಉದ್ಯಮದ ನಡುವೆ ತ್ರಿಪಕ್ಷೀಯ ಒಪ್ಪಂದ ಮಾಡಿಕೊಂಡು ಪಡೆಯಲಾಗುವುದು

ವಿಜ್ಞಾನಕ್ಕೆ ಸಂಬಂಧಿಸಿದ ಕ್ಷೇತ್ರಗಳು

ಕೃಷಿ ವಿಜ್ಞಾನಗಳು

ಕೃಷಿ, ಪಶುಸಂಗೋಪನೆ, ಮೀನುಗಾರಿಕೆ, ಅರಣ್ಯಶಾಸ್ತ್ರ, ಕೃಷಿ ಟಾಕ್ಸಿಕಾಲಜಿ, ಮಣ್ಣು ವಿಜ್ಞಾನ, ಸಸ್ಯ ಸಂರಕ್ಷಣೆ, ಕಟಾವಿನ ನಂತರದ ತಂತ್ರಜ್ಞಾನ, ಕೃಷಿ ಎಂಜಿನಿಯರಿಂಗ್ ಸೇರಿದಂತೆ.

ಪ್ರಾಣಿ ವಿಜ್ಞಾನ

ರಚನಾತ್ಮಕ, ಅಭಿವೃದ್ಧಿ, ಕ್ರಿಯಾತ್ಮಕ, ಅನುವಂಶಿಕ, ಪರಿಸರ, ನಡವಳಿಕೆ, ಟ್ಯಾಕ್ಸಾನಾಮಿಕಲ್ ಮತ್ತು ವಿಕಸನೀಯ ಅಂಶಗಳನ್ನು ಒಳಗೊಂಡು

ಬಯೋಕೆಮಿಸ್ಟ್ರಿ, ಬಯೋಫಿಸಿಕ್ಸ್, ಬಯೋಟೆಕ್ನಾಲಜಿ

ವಿಶ್ಲೇಷಣಾತ್ಮಕ, ಅಜೈವಿಕ, ಸಾವಯವ, ಭೌತಿಕ, ಸೈದ್ಧಾಂತಿಕ ರಸಾಯನಶಾಸ್ತ್ರ, ಅನ್ವಯಿಕ ರಸಾಯನಶಾಸ್ತ್ರ ಸೇರಿದಂತೆ

ರಾಸಾಯನಿಕ ವಿಜ್ಞಾನ

ವಿಶ್ಲೇಷಣಾತ್ಮಕ, ಅಜೈವಿಕ, ಸಾವಯವ, ಭೌತಿಕ, ಸೈದ್ಧಾಂತಿಕ ರಸಾಯನಶಾಸ್ತ್ರ, ಅನ್ವಯಿಕ ರಸಾಯನಶಾಸ್ತ್ರ ಸೇರಿದಂತೆ

ಅರ್ಥ್ ಸೈನ್ಸ್

ಇದರಲ್ಲಿ ವಾಯುಮಂಡಲ ವಿಜ್ಞಾನ, ಭೂ-ವಿಜ್ಞಾನ, ಸಾಗರವಿಜ್ಞಾನ, ಭೂಗೋಳಶಾಸ್ತ್ರ
ಎಂಜಿನಿಯರಿಂಗ್ ವಿಜ್ಞಾನಗಳು ಮತ್ತು ಎಂಜಿನಿಯರಿಂಗ್ ತಂತ್ರಜ್ಞಾನ

ಎಂಜಿನಿಯರಿಂಗ್ ವಿಜ್ಞಾನಗಳು ಮತ್ತು ಎಂಜಿನಿಯರಿಂಗ್ ತಂತ್ರಜ್ಞಾನ

ಎಂಜಿನಿಯರಿಂಗ್ ಸೈನ್ಸ್, ಕೆಮಿಕಲ್ ಅಂಡ್ ಮೆಟೀರಿಯಲ್ ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್ & ಟೆಲಿಕಮ್ಯೂನಿಕೇಶನ್, ಇನ್ ಫರ್ಮೇಷನ್ ಟೆಕ್ನಾಲಜಿ, ಇನ್ ಸ್ಟ್ರುಮೆಂಟೇಶನ್ ಸೇರಿದಂತೆ

ಗಣಿತ ವಿಜ್ಞಾನ

ಶುದ್ಧ ಗಣಿತ, ಅನ್ವಯಿಕ ಗಣಿತ, ಸಂಖ್ಯಾಶಾಸ್ತ್ರ, ಕಂಪ್ಯೂಟರ್ / ಮಾಹಿತಿ ವಿಜ್ಞಾನ ಸೇರಿದಂತೆ

ವೈದ್ಯಕೀಯ & ವಿಧಿವಿಜ್ಞಾನ ವಿಜ್ಞಾನ

ಇದರಲ್ಲಿ ಬೇಸಿಕ್ ಮತ್ತು ಕ್ಲಿನಿಕಲ್ ಮೆಡಿಕಲ್ ಸೈನ್ಸಸ್, ಫಾರ್ಮಕಾಲಜಿ, ಆಂತ್ರೊಪಾಲಜಿ, ಸೈಕಾಲಜಿ ಮತ್ತು ವಿಧಿವಿಜ್ಞಾನ ವಿಜ್ಞಾನ, ಮಾನವ ತಳಿಶಾಸ್ತ್ರ, ಸಂತಾನೋತ್ಪತ್ತಿ ಜೀವಶಾಸ್ತ್ರ, ನರವಿಜ್ಞಾನ, ಅಣು ವೈದ್ಯಶಾಸ್ತ್ರ ಸೇರಿದಂತೆ ಹಲವು ಅಂಶಗಳು ಸೇರಿವೆ.

ಭೌತಿಕ ವಿಜ್ಞಾನ

ಖಗೋಳಶಾಸ್ತ್ರ, ಖಭೌತಶಾಸ್ತ್ರ, ಪ್ರಾಯೋಗಿಕ ಮತ್ತು ಸೈದ್ಧಾಂತಿಕ ಭೌತಶಾಸ್ತ್ರ, ಅನ್ವಯಿಕ ಭೌತಶಾಸ್ತ್ರ ಸೇರಿದಂತೆ

ಸಸ್ಯ ವಿಜ್ಞಾನಗಳು

ರಚನಾತ್ಮಕ, ಅಭಿವೃದ್ಧಿ, ಕ್ರಿಯಾತ್ಮಕ, ಅನುವಂಶಿಕ, ಪರಿಸರ, ಟ್ಯಾಕ್ಸಾನಾಮಿಕಲ್ ಮತ್ತು ವಿಕಸನೀಯ ಅಂಶಗಳು ಒಳಗೊಂಡಿವೆ

ವಿಜ್ಞಾನ & ಸೊಸೈಟಿ

ಇದರಲ್ಲಿ ಫಿಲಾಸಫಿ ಆಫ್ ಸೈನ್ಸ್, ಹಿಸ್ಟರಿ ಆಫ್ ಸೈನ್ಸ್, ಎಥಿಕ್ಸ್, ಸೈನ್ಸ್ ಪಾಲಿಸಿ, ಸೈನ್ಸ್ ಅಂಡ್ ಟೆಕ್ನಾಲಜಿ ಆಧಾರಿತ ಉದ್ಯಮಶೀಲತೆ, ಎಸ್ ಅಂಡ್ ಟಿ ಮ್ಯಾನೇಜ್ ಮೆಂಟ್, ಸೈನ್ಸ್ ಜನಪ್ರಿಯತೆ

ಸಮಾಜ ವಿಜ್ಞಾನಗಳು

ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಮನೋವಿಜ್ಞಾನ, ಸಂವಹನ, ಗೃಹ ವಿಜ್ಞಾನ ಸೇರಿದಂತೆ

Copyright © 2019. Karnataka Science and Technology Academy. All rights reserved.
Skip to content