ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ನವೆಂಬರ್ 08: ಈ ದಿನ, ಅಂದು

1 min read

ನವೆಂಬರ್ 8, 1895: X-ರೇ ಆವಿಷ್ಕಾರ

  • ಜರ್ಮನಿಯ ಭೌತಶಾಸ್ತ್ರಜ್ಞ ವಿಲ್ಹೆಲ್ಮ್ ರೊಂಟ್ಗೆನ್ ಆಕಸ್ಮಿಕವಾಗಿ X-ರೇಗಳನ್ನು ನವೆಂಬರ್ 8, 1895 ರಂದು ಕಂಡುಹಿಡಿದರು
  • ಕಡಿಮೆ ಒತ್ತಡದಲ್ಲಿ ಅನಿಲಗಳ ಮೂಲಕ ವಿದ್ಯುತ್ ಹಾಯಿಸುವುದರಿಂದಾಗುವ ಪರಿಣಾಮಗಳನ್ನು ಅಧ್ಯಯನ ಮಾಡುತ್ತಿದ್ದಾಗ  ಈ ಕಿರಣಗಳು ಮೂಡಿದವು
  • ಇವು ಅತ್ಯಂತ ಶಕ್ತಿಯುಳ್ಳ ವಿದ್ಯುತ್ಕಾಂತೀಯ ವಿಕಿರಣಗಳು ಹಾಗೂ ಘನ ವಸ್ತುಗಳನ್ನು ಮೂಲಕ ನುಸುಳಲು ಸಮರ್ಥವಾಗಿವೆ.
  • ಈ ಸಂಶೋಧನೆಯು ಭೌತಶಾಸ್ತ್ರ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಕ್ರಾಂತಿಯನ್ನುಂಟುಮಾಡಿತು.

ನವೆಂಬರ್ 8: ಜಾಕ್ ಸೇಂಟ್ ಕ್ಲೇರ್ ಕಿಲ್ಬಿ ರವರ ಜನ್ಮದಿನ

  • ಜಾಕ್ ಸೇಂಟ್ ಕ್ಲೇರ್ ಕಿಲ್ಬಿ ರವರು 1923ರ ನವೆಂಬರ್ 8ರಂದು ಮಿಸ್ಸೌರಿಯ ಜೆಫರ್ಸನ್ ನಗರದಲ್ಲಿ ಜನಿಸಿದರು.
  • ಇವರು ಅಮೇರಿಕನ್ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿದ್ದರು, ಮೊದಲ ಇಂಟಿಗ್ರೇಟೆಡ್ ಸರ್ಕ್ಯೂಟ್ (IC), ಮಾನೋಲಿತಿಕ್ ಇಂಟಿಗ್ರೇಟೆಡ್ ಸರ್ಕ್ಯೂಟ್ – ಮೈಕ್ರೋಚಿಪ್ ಅನ್ನು 1958ರ ಸೆಪ್ಟೆಂಬರ್ 12ರಂದು ಟೆಕ್ಸಾಸ್ ಇನ್.ಸ್ಟ್ರುಮೆಂಟ್ಸ್ (ಟಿಐ) ನಲ್ಲಿ ಅಭಿವೃದ್ಧಿಪಡಿಸಿದರು.
  • 2000ರಲ್ಲಿ ಕಿಲ್ಬಿಗೆ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ದೊರೆಯಿತು.
  • ಅವರ ಆವಿಷ್ಕಾರವು ಆಧುನಿಕ ಮೈಕ್ರೊಎಲೆಕ್ಟ್ರಾನಿಕ್ಸ್ ನ ಕ್ಷೇತ್ತಕ್ಕೆ ಹೊಸ ಪರಿಕಲ್ಪನೆ ಮತ್ತು ತಾಂತ್ರಿಕ ತಳಹದಿಯನ್ನು ಹಾಕಿತು. ಈ ಹೊಸ ತಂತ್ರಜ್ಞಾನವೇ ಇಂದಿನ ಮಾಹಿತಿ ಯುಗದ ಅತ್ಯಾಧುನಿಕ ಹೈ-ಸ್ಪೀಡ್ ಕಂಪ್ಯೂಟರ್ ಗಳು ಮತ್ತು ದೊಡ್ಡ ಸಾಮರ್ಥ್ಯದ ಸೆಮಿಕಂಡಕ್ಟರ್ ಮೆಮೊರಿ ಅಭಿವೃದ್ಧಿಗೆ ನಾಂದಿಯಾಯಿತು.
  • ಅಲ್ಲದೆ, ಇವರು ಸೂರ್ಯನ ಬೆಳಕಿನಿಂದ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲು ಸಿಲಿಕಾನ್ ತಂತ್ರಜ್ಞಾನದ ಬಳಕೆಯನ್ನು ಸಹ ತೋರಿಸಿಕೊಟ್ಟರು.

ನವೆಂಬರ್ 8: ಕ್ರಿಸ್ಟಿಯನ್ ಬರ್ನಾರ್ಡ್ ರವರ ಜನ್ಮದಿನ

  • ಕ್ರಿಸ್ಟಿಯನ್ ನೀತ್ಲಿಂಗ್ ಬರ್ನಾರ್ಡ್ ರವರು 1922ರ ನವೆಂಬರ್ 8 ರಂದು ಜನಿಸಿದರು
  • ದಕ್ಷಿಣ ಆಫ್ರಿಕಾದ ಶಸ್ತ್ರಚಿಕಿತ್ಸಕರಾಗಿದ್ದ ಇವರು ವಿಶ್ವದ ಮೊದಲ ಮಾನವ ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದರು.
  • 1967ರ ಡಿಸೆಂಬರ್ 3ರಂದು ನಡೆದ ಐದು ಗಂಟೆಗಳ ಶಸ್ತ್ರಚಿಕಿತ್ಸೆಯಲ್ಲಿ, ಬರ್ನಾರ್ಡ್, ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಲೂಯಿಸ್ ವಾಶ್ ಕಾನ್ಸ್ಕಿ (55) ರವರ ಹೃದಯವನ್ನು ಯಶಸ್ವಿಯಾಗಿ ಬದಲಾಯಿಸಿ, ಅಪಘಾತದಿಂದ ಆಸ್ಪತ್ರೆಯಲ್ಲಿ ನಿಧನರಾದ ಅದೇ ರಕ್ತದ ಮಾದರಿಯ ಹೊಂದಿದ್ದ 20 ರ ಹರೆಯದ ಮಹಿಳೆ ಡೆನಿಸ್ ಡಾರ್ವಲ್ ರವರ ಆರೋಗ್ಯವಂತ ಹೃದಯವನ್ನು ಕಸಿ ಮಾಡಿದರು.

ನವೆಂಬರ್ 8: ಟಿ ಎಡ್ಮಂಡ್ ಹ್ಯಾಲಿ ರವರ ಜನ್ಮದಿನ

  • ಎಡ್ಮಂಡ್ ಹ್ಯಾಲಿ ಯವರು 1656ರ ನವೆಂಬರ್ 8ರಂದು ಜನಿಸಿದರು.
  • ಇಂಗ್ಲಿಷ್ ಖಗೋಳಶಾಸ್ತ್ರಜ್ಞ ಮತ್ತು ಗಣಿತಶಾಸ್ತ್ರಜ್ಞರಾಗಿದ್ದ ಹ್ಯಾಲಿ ರವರು ಧೂಮಕೇತುವಿನ ಕಕ್ಷೆಯನ್ನು ನಿಖರವಾಗಿ ಅಧ್ಯಯನ ಮಾಡಿದವರು.
  • ಧೂಮಕೇತುವು  ಪ್ರತಿ 76 ವರ್ಷಗಳಿಗೊಮ್ಮೆ ಹಿಂದಿರುಗುತ್ತದೆ ಎಂದು ಹ್ಯಾಲಿ ಲೆಕ್ಕಹಾಕಿ 1758ರಲ್ಲಿ ಅದು ಹಿಂದಿರುಗುತ್ತದೆ ಎಂದು ಸರಿಯಾಗಿ ಊಹಿಸಿದ್ದರು. ಹಾಗೆಯೇ ಅದು ಸ್ವಲ್ಪ ವಿಳಂಬವಾಗಿ 1759ರ ಆದಿಯಲ್ಲಿ ಗೋಚರಿಸಿತು. ಇವರ ಅಧ್ಯಯನದಂತೆ  ಹ್ಯಾಲಿಯ ಧೂಮಕೇತುವು 2062ರಲ್ಲಿ ರಾತ್ರಿ ಆಕಾಶದಲ್ಲಿ ಗೋಚರಿಸಲಿದೆ.

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.
Skip to content