ಸರ್ವಕಾಲಿಕ ಶ್ರೇಷ್ಠ ಪಕ್ಷಿ ವಿಜ್ಞಾನಿ ಮತ್ತು ಪ್ರಕೃತಿ ಶಾಸ್ತ್ರಜ್ಞ ಸಲೀಮ್ ಮೊಯಿಸುದ್ದೀನ್ ಅಬ್ದುಲ್ ಅಲಿ ರವರು 1896 ರ ನವೆಂಬರ್ 12 ರಂದು ಮುಂಬೈನಲ್ಲಿ ಜನಿಸಿದರು.
ಭಾರತದಲ್ಲಿ ವ್ಯವಸ್ಥಿತ ಪಕ್ಷಿ ಸಮೀಕ್ಷೆ ನಡೆಸಿದ ಮೊದಲ ಭಾರತೀಯ ಮತ್ತು “ಭಾರತದ ಪಕ್ಷಿ ಮನುಷ್ಯ” ಎಂದು ಇವರು ಪ್ರಸಿದ್ಧಿ
1947ರ ನಂತರ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಪುನರುಜ್ಜೀವನಕ್ಕೆ ಪ್ರಮುಖ ಕಾರಣಕರ್ತರು
ಗೀಜಗ ಹಕ್ಕಿಯ ಸ್ವಭಾವ ಮತ್ತು ಚಟುವಟಿಕೆಗಳ ಬಗ್ಗೆ 1930ರಲ್ಲಿ ಅವರು ಒಂದು ಸಂಶೋಧನಾ ಪ್ರಬಂಧವನ್ನು ಪ್ರಕಟಿಸಿದರು. ಈ ಲೇಖನವು ಅವರಿಗೆ ಬಹಳ ಪ್ರಸಿದ್ಧಿಯನ್ನು ತಂದುಕೊಟ್ಟಿತು ಮತ್ತು ಪಕ್ಷಿಶಾಸ್ತ್ರ ಕ್ಷೇತ್ರದಲ್ಲಿ ಇವರ ಹೆಸರು ನೆಲಸುವಂತೆ ಮಾಡಿತು.
ಇವರು 1941ರಲ್ಲಿ ಪ್ರಕಟಿಸಿದ “ದಿ ಬುಕ್ ಆಫ್ ಇಂಡಿಯನ್ ಬರ್ಡ್ಸ್” ಈಗಲೂ ಯುವ ಪಕ್ಷಿ ವಿಜ್ಞಾನಿಗಳಿಗೆ ಬೈಬಲ್ ನಂತಿದೆ.
ಇವರು ವಿಶ್ವಪ್ರಸಿದ್ಧ ಪಕ್ಷಿ ವಿಜ್ಞಾನಿ ಎಸ್. ದಿಲ್ಲೋನ್ ರಿಪ್ಲೆ ರವರೊಡನೆ ‘ಹ್ಯಾಂಡ್ ಬುಕ್ ಆಫ್ ದಿ ಬರ್ಡ್ಸ್ ಆಫ್ ಇಂಡಿಯಾ ಅಂಡ್ ಪಾಕಿಸ್ತಾನ್’ ಎಂಬ ಪುಸ್ತಕವನ್ನು ಪ್ರಕಟಿಸಿದರು. ಅಲ್ಲದೆ, 1967ರಲ್ಲಿ “ಕಾಮನ್ ಬರ್ಡ್ಸ್ ” ಮತ್ತು 1985ರಲ್ಲಿ “ದಿ ಫಾಲ್ ಆಫ್ ಸ್ಪ್ಯಾರೋ” ಆತ್ಮಚರಿತ್ರೆ ಪುಸ್ತಕಗಳನ್ನು ಸಹ ಪ್ರಕಟಿಸಿದ್ದಾರೆ.
ಭಾರತ ಸರ್ಕಾರವು ಇವರಿಗೆ 1958ರಲ್ಲಿ ಪದ್ಮಭೂಷಣ ಮತ್ತು 1976ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ
ಸ್ವೀಡನ್, ಭಾರತ, ಚೀನಾ, ಅಮೆರಿಕ ಮತ್ತು ರಷ್ಯಾ ದೇಶಗಳ ಪಕ್ಷಿ ವಿಜ್ಞಾನಿಗಳ ಒಂದು ಅಂತಾರಾಷ್ಟ್ರೀಯ ತಂಡ ಹೊಸದಾಗಿ ಪತ್ತೆಯಾದ ಪಕ್ಷಿ ಪ್ರಭೇದವನ್ನು ಇವರ ಹೆಸರಿನಲ್ಲಿ ಝೂಥ್ರಿಯಾ ಸಲಿಮಾಲಿ ಎಂದು ನಾಮಕರಣ ಮಾಡಿದೆ
ಝೂಥ್ರಿಯಾ ಸಲಿಮಾಲಿ (ಹಿಮಾಲಯನ್ ಥ್ರಷ್)
ಈಶಾನ್ಯ ಭಾರತ ಮತ್ತು ಅಕ್ಕಪಕ್ಕದ ಚೀನಾ ಪ್ರದೇಶಗಳಲ್ಲಿ ಕಂಡುಬರುತ್ತದೆ