ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಅಲ್ಪಮೊತ್ತದ ಅನುದಾನ/ಅಧ್ಯಯನ

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಜಾಗೃತಿಯನ್ನು ಮೂಡಿಸಲು; ವಿಜ್ಞಾನ & ತಂತ್ರಜ್ಞಾನದ ಹೊಸ ದಿಗಂತಗಳನ್ನು ಬೋಧಕರಿಗೆ ಪರಿಚಯಿಸಲು; ಮತ್ತು ವಿಜ್ಞಾನ ಮತ್ತು ಸಮಾಜಕ್ಕೆ ಸಂಬಂಧಿಸಿದ ಸಮಕಾಲೀನ ವಿಷಯಗಳ ಬಗ್ಗೆ ಜಾಗೃತಿಯನ್ನು ಮೂಡಿಸಲು ಅಕಾಡೆಮಿಯ ವತಿಯಿಂದ ಕಾರ್ಯಾಗಾರಗಳು, ವಿಚಾರ ಸಂಕಿರಣಗಳು ಮತ್ತು ಅಲ್ಪಾವಧಿ ಅಧ್ಯಯನಗಳನ್ನು ಪ್ರೊತ್ಸಾಹಿಸಲಾಗುತ್ತಿದೆ

ಉದ್ದೇಶಗಳು

 • ಪ್ರಚಲಿತ ವಿಜ್ಞಾನ ಮತ್ತು ಇತ್ತೀಚೆಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಉದಯೋನ್ಮುಖ ಕ್ಷೇತ್ರಗಳ ಬಗ್ಗೆ ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಯುವ ಬೋಧಕರಿಗೆ ಮಾಹಿತಿ ಒದಗಿಸುವುದು ಮತ್ತು ಜಾಗೃತಿಯನ್ನು ಮೂಡಿಸುವುದು
 • ಮುಂಚುಣಿ ವಿಷಯಗಳಲ್ಲಿ ಸಂಶೋಧನೆ ಕೈಗೊಳ್ಳಲು ವಿದ್ಯಾರ್ಥಿಗಳಿಗೆ ಪ್ರೇರಣೆ ಮತ್ತು ಪ್ರೋತ್ಸಾಹ ನೀಡುವುದು; ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳ ಬಗ್ಗೆ ಜಾಗೃತಿ ಮೂಡಿಸುವುದು
 • ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ಉದ್ಯಮಶೀಲತೆಯ ಅವಕಾಶಗಳ ಬಗ್ಗೆ ಮಾಹಿತಿ ನೀಡುವುದು
 • ಪ್ರಚಲಿತ ವಿಷಯಗಳು ಮತ್ತು ಸಮಸ್ಯಗಳ ಬಗ್ಗೆ ಗುರುತಿಸಲಾದ, ಅಕಾಡೆಮಿಯಿಂದ ಅನುಮೋದಿಸಲ್ಪಟ್ಟ, ಅಲ್ಪಾವಧಿ ಅಧ್ಯಯನಗಳನ್ನು ಕೈಗೊಳ್ಳುವುದು

ಅರ್ಹತೆ

 • ಸಮಾಜದ ವಿವಿಧ ಸ್ತರಗಳಲ್ಲಿ ಮತ್ತು ರಾಜ್ಯದ ವಿವಿಧ ಪ್ರದೇಶಗಳಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶಿಕ್ಷಣ ಸಂಸ್ಥೆಗಳು ಮತ್ತು ಸಂಬಂಧಿತ ಸಂಸ್ಥೆಗಳು
 • ಕಾರ್ಯಕ್ರಮದ ನೋಡಲ್ ಅಧಿಕಾರಿಯಿಂದ ತಯಾರಿಸಲಾದ ಅಲ್ಪಮೊತ್ತದ ಅನುದಾನದ ಪ್ರಸ್ತಾವನೆಯನ್ನು ಸಂಸ್ಥೆಗಳ ಮುಖ್ಯಸ್ಥರು ಶಿಫಾರಸ್ಸು ಮಾಡಿರಬೇಕು ಮತ್ತು ಎನ್ ಜಿಒಗಳು, ಸಂಬಂಧಿತ ಚಟುವಟಿಕೆಗಳಲ್ಲಿ ಕನಿಷ್ಠ ಮೂರು ವರ್ಷಗಳ ಕಾಲ ತೊಡಗಿಸಿಕೊಂಡಿರುವ ಪುರಾವೆ ಹಾಗೂ ಅಧಿಕೃತ ಲೆಕ್ಕಪರಿಶೋಧನಾ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು.
 • ಕರ್ನಾಟಕ ಸರ್ಕಾರ, ಅಕಾಡೆಮಿ ಕಾರ್ಯಕಾರಿ ಸಮಿತಿ ಅಥವಾ ಇನ್ನಿತರೆ ಸಂಬಂಧಿತರ ಸಲಹೆಗಳ ಆಧಾರದ ಮೇಲೆ ಅಲ್ಪಾವಧಿಯ ಅಧ್ಯಯನಗಳ ವಿಷಯವನ್ನು ಅಕಾಡೆಮಿಯು ಗುರುತಿಸುವುದು, ಈ ವಿಷಯಗಳ ಮೇಲೆ ಅಧ್ಯಯನ ಕೈಗೊಳ್ಳಲು ಸಂಸ್ಥೆಗಳು/ವ್ಯಕ್ತಿಗಳಿಂದ ಇಚ್ಚಾಸಕ್ತಿ ವ್ಯಕ್ತಪಡಿಸಲು ಪ್ರಕಟಣೆ ನೀಡಲಾಗುವುದು, ಗುರುತಿಸಲಾದ ವ್ಯಕ್ತಿಯನ್ನು ಪ್ರಧಾನ ಪರಿಶೋಧಕರನ್ನಾಗಿ ನೇಮಿಸಲಾಗುತ್ತದೆ

ಅಧ್ಯಯನ/ಕಾರ್ಯಕ್ರಮದ ಕ್ಷೇತ್ರಗಳು

 • ಕಾರ್ಯಾಗಾರಗಳು ಮತ್ತು ಮೂಲ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಜ್ಞರಿಂದ ಉಪನ್ಯಾಸಗಳು
 • ಇತ್ತೀಚಿನ ವಿಷಯಗಳು ಮತ್ತು ಮುಂಚುಣಿ ವಿಷಯಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ವಿಷಯದಲ್ಲಿ ಬೋಧಕರಿಗೆ ಪುನಶ್ಚೇತನಾ ಕೋರ್ಸ್ ಗಳು
 • ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿತ ಕಾರ್ಯಾಗಾರಗಳು ಮತ್ತು ಔಟ್ ರೀಚ್ ಕಾರ್ಯಕ್ರಮಗಳಾದ ಪ್ರಬಂಧ, ರಸಪ್ರಶ್ನೆ, ಚರ್ಚಾ ಸ್ಪರ್ಧೆ, ಆಶುಭಾಷಣ, ಕಲಾ ಸ್ಪರ್ಧೆಗಳನ್ನು ಸಂಘಟಿಸುವುದು
 • ವೈಜ್ಞಾನಿಕ ಸಾಕ್ಷರತೆ ಮತ್ತು ಜಾಗೃತಿಯನ್ನು ಮೂಡಿಸುವ ಮತ್ತು ಜನರಲ್ಲಿ ಮೂಢನಂಬಿಕೆಗಳನ್ನು ತೊಡೆದು ಹಾಕುವ ಕಾರ್ಯಕ್ರಮಗಳು
 • ವಿಜ್ಞಾನ ಶಿಕ್ಷಣ ಮತ್ತು ಸಂವಹನ ಮತ್ತು ಸಂಬಂಧಿತ ಪರಿಣಾಮ ಮೌಲ್ಯಮಾಪನಕ್ಕೆ ಸಂಬಂಧಿಸಿದ ಅಲ್ಪಾವಧಿ ಅಧ್ಯಯನಗಳು, ಅವಧಿ ಆರು ತಿಂಗಳಿಗೆ ಮೀರದಂತೆ

ಸೂಚನೆ

 • ಅನುಮೋದಿತ ಚಟುವಟಿಕೆಯನ್ನು ಆರ್ಥಿಕ ವರ್ಷದ ಒಳಗೆ ನಡೆಸಬೇಕು ಮತ್ತು ಅಕಾಡೆಮಿಯ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಅಧಿಕಾರಿಗಳನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸಬೇಕು.
 • ಬ್ಯಾನರ್ ಗಳು, ಆಹ್ವಾನ ಪತ್ರ ಮತ್ತು ಪ್ರಮಾಣ ಪತ್ರಗಳು ಸೇರಿದಂತೆ ಇತರೆ ಪ್ರದರ್ಶನ ಪರಿಕರಗಳು ಅಕಾಡೆಮಿಯ ಲೋಗೋ ಮತ್ತು ವಿವರಗಳನ್ನು ಒಳಗೊಂಡಿರಬೇಕು; ಕಾರ್ಯಕ್ರಮ ಸಂಘಟಕರು ಕಾರ್ಯಕ್ರಮದಲ್ಲಿ ಭಾಗವಹಿಸುವವರ ವಿವರಗಳನ್ನು ಅಕಾಡೆಮಿಗೆ ಒದಗಿಸುವುದು
 • ಅಕಾಡೆಮಿಯು ನೀಡುವ ಅಲ್ಪಮೊತ್ತದ ಅನುದಾನ ಆಯವ್ಯಯ ರೂ. 50 ಸಾವಿರಗಳನ್ನು ಮತ್ತು ಅಲ್ಪಾವಧಿ ಅಧ್ಯಯನ ರೂ. 1.0 ಲಕ್ಷಗಳನ್ನು ಮೀರಬಾರದು.
 • ಕಾರ್ಯಕ್ರಮದ ನೋಡಲ್ ಅಧಿಕಾರಿಯು ಕಾರ್ಯಕ್ರಮ ವೇಳಾಪಟ್ಟಿ ಮತ್ತು ಸಂಪನ್ಮೂಲ ತಜ್ಞರ ಪಟ್ಟಿಯನ್ನು ಅಕಾಡೆಮಿಯಿಂದ ಅನುಮೋದನೆಯನ್ನು ಪಡೆಯಬೇಕು. ಒಂದು ಉಪನ್ಯಾಸ 90 ನಿಮಿಷಗಳು ಮತ್ತು ರೂ. 2,000/- ಗೌರವ ಸಂಭಾವನೆ. ಒಂದು ಕಾರ್ಯಕ್ರಮದಲ್ಲಿ ಒಬ್ಬ ತಜ್ಞರು ಗರಿಷ್ಠ ಎರಡು ಉಪನ್ಯಾಸಗಳನ್ನು ನೀಡಬಹುದು. ಅಲ್ಪ ಅವಧಿಯ ಅಧ್ಯಯನದಲ್ಲಿ ಪ್ರಧಾನ ಸಂಶೋಧಕರು ಕಾರ್ಯಕ್ರಮ ಮತ್ತು ಅಧ್ಯಯನ ತಂಡದ ಪಟ್ಟಿಯನ್ನು ಅಕಾಡೆಮಿಯಿಂದ ಅನುಮೋದನೆ ಪಡೆಯಬೇಕು
 • ನೋಡಲ್ ಅಧಿಕಾರಿ/ ಪ್ರಧಾನ ಸಂಶೋಧಕರಿಗೆ ರೂ 5,000/- ಗಳ ಗೌರವ ಸಂಭಾವನೆ ಸೇರಿ ಸಂಪನ್ಮೂಲ ತಜ್ಞರ ಸಂಭಾವನೆ, ಪ್ರಯಾಣ, ಲೇಖನ ಸಾಮಗ್ರಿ, ಊಟ & ಉಪಹಾರಗಳು, ಬಹುಮಾನಗಳು, ವಸತಿ, ಲೆಕ್ಕಪರಿಶೋಧನೆ ಮತ್ತು ಅಕಾಡೆಮಿಯ ಪೂರ್ವಾನುಮತಿಯೊಂದಿಗೆ ಮಾಡಲಾದ ಇತರೆ ವೆಚ್ಚಗಳು ಕಾರ್ಯಕ್ರಮದ ಆಯವ್ಯಯದಲ್ಲಿ  ಸೇರಿರುತ್ತವೆ,
 • ಕಾರ್ಯಕ್ರಮ ಪೂರ್ಣಗೊಂಡ ನಂತರ ನೋಂದಾಯಿತ ಲೆಕ್ಕ ಪರಿಶೋಧಕರಿಂದ ದೃಢೀಕರಿಸಿದ ಲೆಕ್ಕಪರಿಶೋಧನೆಯ ವರದಿಯನ್ನು ಸೂಕ್ತ ಛಾಯಾಚಿತ್ರಗಳು ಮತ್ತು ಕಾರ್ಯಕ್ರಮ ವರದಿಯ ಸಮೇತ ಒಂದು ತಿಂಗಳ ಒಳಗಾಗಿ ಸಲ್ಲಿಸಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸಿರುವವರಿಂದ ಪ್ರತಿಕ್ರಿಯೆಗಳನ್ನು ಸಹ ಒದಗಿಸಬಹುದು
 • ಕಾರ್ಯಕ್ರಮವನ್ನು ಮತ್ತಷ್ಟು ಯಶಸ್ವಿಗೊಳಿಸಲು, ಅಕಾಡೆಮಿಯ ಪೂರ್ವಾನುಮತಿಯೊಂದಿಗೆ, ಆತಿಥೇಯ ಸಂಸ್ಥೆಗಳು ಹೆಚ್ಚಿನ ಸಂಪನ್ಮೂಲಗಳನ್ನು ಒದಗಿಸಿಕೊಳ್ಳಬಹುದಾಗಿದೆ.
 • ಅಕಾಡೆಮಿಯು ಕಾರ್ಯಕ್ರಮವನ್ನು ಬಾಹ್ಯ ಸಂಸ್ಥೆಯಿಂದ ಮೌಲ್ಯಮಾಪನವನ್ನು ಕೈಗೊಳ್ಳುವುದು, ಆ ಸಮಯದಲ್ಲಿ, ಆತಿಥೇಯ ಸಂಸ್ಥೆಗಳು/ನೋಡಲ್ ಅಧಿಕಾರಿಗಳು ಕಾರ್ಯಕ್ರಮದ ಅಗತ್ಯ ಮಾಹಿತಿ ಮತ್ತು ಪರಿಣಾಮದ ಬಗ್ಗೆ ಮಾಹಿತಿ ಒದಗಿಸುವುದು

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content