ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಅಕಾಡೆಮಿಯ ಇತಿಹಾಸ

ಅಕ್ಟೋಬರ್ 28, 2004

ಪ್ರಸ್ತಾವನೆ

ಭಾರತ ಸರ್ಕಾರದ ಅಂದಿನ ಮಾನ್ಯ ಯೋಜನಾ ರಾಜ್ಯ ಮಂತ್ರಿಗಳು ತಮ್ಮ ಪತ್ರದಲ್ಲಿ,  “ಸ್ಪರ್ಧಾ ಪ್ರಪಂಚದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಾಗದಿದ್ದರೆ ಪ್ರಾದೇಶಿಕ ಬೆಳವಣಿಗೆ ಸಾಧ್ಯವಾಗುವುದಿಲ್ಲ” ಎಂದು ತಿಳಿಸುತ್ತಾ ಖ್ಯಾತ ವಿಮರ್ಶಕಾರರಾದ ಶ್ರೀ ಎಲ್. ಎನ್. ಶೇಷಗಿರಿರಾವ್ ರವರೂ ಸಹ ಕನ್ನಡಿಗರ ಜಾಗೃತಿ ಸಮಾವೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯನ್ನು ಸ್ಥಾಪಿಸಬೇಕು ಎಂದು ಕರೆ ಕೊಟ್ಟಿದ್ದಾರೆಂದು  ಅಂದಿನ ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರನ್ನು ಕೋರಿದ್ದರು.

ಘೋಷಣೆ

ಕನ್ನಡ ರಾಜೋತ್ಸವ ಆಚರಣೆಯ ಸಂದಂರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯನ್ನು ರಚಿಸುವುದಾಗಿ ಘೋಷಣೆ

ನವೆಂಬರ್ 01, 2004
ಜುಲೈ 30, 2005

ಸ್ಥಾಪನೆ

ರಾಜ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಬೆಳವಣಿಗೆ, ಮೂಲ ವಿಜ್ಞಾನಕ್ಕೆ ಉತ್ತೇಜನ ಹಾಗೂ ವಿದ್ಯಾರ್ಥಿಗಳಲ್ಲಿ ಮತ್ತು ಜನಸಾಮಾನ್ಯರಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವ ಸಲುವಾಗಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯನ್ನು ಜುಲೈ 30, 2005 (ಸರ್ಕಾರಿ ಆದೇಶ ಸಂಖ್ಯೆ: ವಿಯಇ 70 ವಿತ್ರಮ 2004)ರಂದು ಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ ದಿವಂಗತ ಪ್ರೊ. ಯು. ಆರ್. ರಾವ್‍ರವರ ಅಧ್ಯಕ್ಷತೆಯಲ್ಲಿ ಸರ್ಕಾರವು ಸ್ಥಾಪಿಸಿತ್ತು.

ಪ್ರೊ. ಯು. ಆರ್. ರಾವ್ ರವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ

ಸರ್ಕಾರವು ಅಕಾಡೆಮಿಯನ್ನು ರಚಿಸಿ, ಪ್ರಮುಖ ಇಲಾಖೆಗಳ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಪರಿಣತರನ್ನೊಳಗೊಂಡ ನಾಮನಿರ್ದೇಶಿತ ಸದಸ್ಯರನ್ನು ನೇಮಿಸಿ ಆದೇಶ. ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಪ್ರೊ. ಯು. ಆರ್. ರಾವ್ ರವರ ಅಧ್ಯಕ್ಷತೆಯಲ್ಲಿ

ಜುಲೈ 30, 2005
ಸೆಪ್ಟೆಂಬರ್ 05, 2005

ಉದ್ಘಾಟನೆ

ಅಕಾಡೆಮಿಯನ್ನು 2005ರ ಸೆಪ್ಟೆಂಬರ್ 5 ರಂದು ಉದ್ಗಾಟಿಸಲಾಯಿತು

ಮೊದಲನೇ ಪುನರ್ ರಚನೆ

ಪ್ರೊ. ಯು. ಆರ್. ರಾವ್ ರವರ ಅಧ್ಯಕ್ಷತೆಯಲ್ಲಿ ಪುನರ್ ರಚಿಸಿ, 2008ರ ನವೆಂಬರ್ 04 ರಂದು ಸರ್ಕಾರದ ಆದೇಶ

ನವೆಂಬರ್ 04, 2008
ಏಪ್ರಲ್ 06, 2009

ಸ್ವಾಯತ್ತ ಸಂಸ್ಥೆ

ಸರ್ಕಾರವು ಅಕಾಡೆಮಿಯನ್ನು ಕರ್ನಾಟಕ ಸಂಘ ನೊಂದಾವಣಿ ಕಾಯಿದೆ 1960 ರಡಿಯಲ್ಲಿ ಏಪ್ರಿಲ್ 06, 2009 ರಂದು ನೊಂದಾಯಿಸಿರುತ್ತದೆ.

ಎರಡನೇ ಪುನರ್ ರಚನೆ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷರನ್ನು ಮತ್ತು ಸದಸ್ಯರುಗಳನ್ನು ಎರಡನೇ ಬಾರಿ ಪುನರ್ ರಚಿಸಿ, 2012ರ ಮೇ 28 ರಂದು ಸರ್ಕಾರದ ಆದೇಶ

ಮೇ 28, 2012
ನವೆಂಬರ್ 04, 2015

ಮೂರನೇ ಪುನರ್ ರಚನೆ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷರನ್ನು ಮತ್ತು ಸದಸ್ಯರುಗಳನ್ನು ಮೂರನೇ ಬಾರಿ ಪುನರ್ ರಚಿಸಿ, 2015ರ ನವೆಂಬರ್ 04 ರಂದು ಸರ್ಕಾರದ ಆದೇಶ

ಡಾ. ಎಸ್. ಕೆ. ಶಿವಕುಮಾರ್ ರವರನ್ನು ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಕ

ಪ್ರೊ. ಯು. ಆರ್. ರಾವ್ ರವರು ದೈವಾದೀನರಾಗಿ ತೆರವಾದ ಅಧ್ಯಕ್ಷರ ಸ್ಥಾನಕ್ಕೆ ಯು ಆರ್ ಆರ್ ಉಪಗ್ರಹ ಕೇಂದ್ರದ ನಿವೃತ್ತ ನಿರ್ದೇಶಕರಾದ ಪ್ರೊ. ಎಸ್. ಕೆ. ಶಿವಕುಮಾರ್ ರವರನ್ನು ನೇಮಿಸಿ ಸರ್ಕಾರದ ಆದೇಶ

2017, ನವೆಂಬರ್ 01
ಮೇ 21, 2020

ಪ್ರೊ. ಎಸ್. ಅಯ್ಯಪ್ಪನ್ ಅಧ್ಯಕ್ಷತೆಯಲ್ಲಿ ಸಮಿತಿ ಪುನರ್ ರಚನೆ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷರನ್ನು ಮತ್ತು ಸದಸ್ಯರುಗಳನ್ನು ನಾಲ್ಕನೇ ಬಾರಿ ಪುನರ್ ರಚಿಸಿ, 2020ರ ಮೇ 21 ರಂದು ಸರ್ಕಾರದ ಆದೇಶ. ಅಧ್ಯಕ್ಷರನ್ನಾಗಿ ಪ್ರೊ. ಎಸ್. ಅಯ್ಯಪ್ಪನ್  ನಿವೃತ್ತ ಮಹಾ ನಿರ್ದೇಶಕರು, ಭಾರತೀಯ ಕೃಷಿ ಅನುಸಂದಾನ ಪರಿಷತ್‍ ಇವರ ನೇಮಕ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.
Skip to content