
ಪ್ರೊ. ಯು. ಆರ್. ರಾವ್ ಪ್ರಶಸ್ತಿ (ಸ್ನಾತಕೋತ್ತರ)

ಡಾ. ಎಸ್. ಕೆ. ಶಿವಕುಮಾರ್ ಪ್ರಶಸ್ತಿ (ಪದವಿ)
2021-22ನೇ ಸಾಲಿನ ಪ್ರಶಸ್ತಿಯ ಆಯ್ಕೆ ಪಟ್ಟಿ
URR-SKS- ವಿಜ್ಞಾನ ಮತ್ತು ತಂತ್ರಜ್ಞಾನ ಅಥವಾ ಆರ್ಥಿಕತೆಯ ಯಾವುದೇ ವಿಭಾಗದಿಂದ ಮೂಡಿದ ಜನಸಾಮಾನ್ಯರ ಅದರಲ್ಲೂ ಗ್ರಾಮೀಣ ಪ್ರದೇಶದ ಜನಜೀವನವನ್ನು ಪರಿವರ್ತಿಸಲು ಸಹಾಯಕವಾದ ಅಥವಾ ಉದ್ಯಮಗಳು ಹಾಗೂ ಉದ್ಯೋಗ ಶೃಷ್ಟಿಗೆ ಕಾರಣವಾದ ಅನುಕರಣೀಯ ಆವಿಷ್ಕಾರಗಳು / ಪರಿಹಾರಗಳನ್ನು ಪ್ರತಿ ವರ್ಷ ಗುರುತಿಸಲಾಗುವುದು.
- ಅರ್ಜಿದಾರ ಆವಿಷ್ಕಾರಕರು ಕರ್ನಾಟಕ ಮೂಲದವರಾಗಿ (ಜನನ ಅಥವಾ ನಿವಾಸ) ಜಗತ್ತಿನ ಯಾವುದೇ ಭಾಗದಲ್ಲಿ ವಾಸವಿರಬಹುದು
ಪ್ರಶಸ್ತಿ
- ಸ್ನಾತಕೋತ್ತರ ವಿಭಾಗ : ಸ್ನಾತಕೋತ್ತರ ವಿದ್ಯಾರ್ಥಿಗಳ ಅತ್ಯುತ್ತಮ ಆವಿಷ್ಕಾರ/ನಾವಿನ್ಯತೆಗೆ ಪ್ರೊ. ಯು. ಆರ್. ರಾವ್ ಪ್ರಶಸ್ತಿ
- ಪದವಿ ವಿಭಾಗ : ಪದವಿ ವಿದ್ಯಾರ್ಥಿಗಳ ಅತ್ಯುತ್ತಮ ಆವಿಷ್ಕಾರ/ನಾವಿನ್ಯತೆಗೆ ಡಾ. ಎಸ್. ಕೆ. ಶಿವಕುಮಾರ್ ಪ್ರಶಸ್ತಿ
- ಪ್ರಶಸ್ತಿ ಮೊತ್ತ ರೂ. 10,000/- ನಗದು ಪುರಸ್ಕಾರ ಮತ್ತು ಪ್ರಶಸ್ತಿ ಪತ್ರ
- ಪ್ರತಿ ವರ್ಷ ಡಿಸೆಂಬರ್ ವೇಳೆಗೆ ಅಕಾಡೆಮಿಯ ತಜ್ಞ ಸಮಿತಿ ಸಲ್ಲಿಕೆಯಾದ ಪ್ರವೇಶ ಅರ್ಜಿಗಳನ್ನು ಪರಿವೀಕ್ಷಿಸಿ ಪ್ರತಿ ವಿಭಾಗಗಳಲ್ಲಿ ಉತ್ತಮ ಆವಿಷ್ಕಾರ/ನಾವಿನ್ಯತೆ ಪಟ್ಟಿಯನ್ನು ಅಕಾಡೆಮಿಯ ಕಾರ್ಯಕಾರಿ ಸಮಿತಿಗೆ ಸಲ್ಲಿಸುವುದು
- ಪ್ರಶಸ್ತಿಗಳನ್ನು ಅಕಾಡೆಮಿಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು ಹಾಗೂ ಪ್ರಶಸ್ತಿಗಳನ್ನು ಅಕಾಡೆಮಿಯ ವಾರ್ಷಿಕ ಸಮ್ಮೇಳನದಲ್ಲಿ ವಿತರಿಸಲಾಗುವುದು
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಜನವರಿ 31, 2022 ಸಂಜೆ 5:30 ರೊಳಗಾಗಿ ನಮ್ಮ ಇ-ಮೇಲ್: award.ksta@gmail.com ಇಲ್ಲಿಗೆ ಕಳುಹಿಸುವುದು
ಅರ್ಜಿ ನಮೂನೆ
ಅರ್ಜಿ ನಮೂನೆಯನ್ನು ಈ ಕೆಳಕಂಡ ಲಿಂಕ್ ಮೂಲಕ ಪಡೆಯಿರಿ