ಅಕಾಡೆಮಿಯು ಒಂದು ಶೈಕ್ಷಣಿಕ ಸಂಸ್ಥೆಯಾಗಿ, ವಿವಿಧ ಸಂಸ್ಥೆಗಳು ಮತ್ತು ಉದ್ಯಮಗಳಲ್ಲಿನ ಶಿಕ್ಷಣ ತಜ್ಞರು, ಸಂಶೋಧಕರು, ಎಂಜಿನಿಯರ್ ಗಳು, ತಂತ್ರಜ್ಞಾನಿಗಳು ಹಾಗೂ ಭರವಸೆಯ ಯುವ ವೃತ್ತಿಪರರು ವಿಜ್ಞಾನ ಸಂವಹನ/ಜನಪ್ರಿಯಗೊಳಿಸುವುದು ಮತ್ತು ಪ್ರಸರಣಕ್ಕೆ ಸಂಬಂಧಿಸಿದಂತೆ ನೀಡಿರುವ ಕೊಡುಗೆಗಳನ್ನು ಗುರುತಿಸಲು ಫೆಲೋಶಿಪ್, ಸದಸ್ಯತ್ವ ಮತ್ತು ಎಮೆರಿಟಸ್ ಸಮಾಲೋಚಕತ್ವಗಳನ್ನು ನೀಡಲು ಪ್ರಸ್ತಾಪಿಸಲಾಗಿದೆ. ಅಲ್ಲದೆ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಉತ್ತೇಜಿಸಲು ಮತ್ತು ವಿಜ್ಞಾನವನ್ನು ರಾಜ್ಯದಲ್ಲಿ ಜನಪ್ರಿಯಗೊಳಿಸಲು, ಅಕಾಡೆಮಿಯು ಸದರಿ ಕ್ಷೇತ್ರಗಳಲ್ಲಿ ತೊಡಗಿರುವ ಸಾರ್ವಜನಿಕ, ಕಾರ್ಪೊರೇಟ್ ಮತ್ತು ಖಾಸಗಿ ಸಂಸ್ಥೆಗಳೊಂದಿಗೆ ಸಹಯೋಗ ಮಾಡಿಕೊಳ್ಳಲು ಸಹ ಯೋಜಿಸಿದೆ.
ವಿಜ್ಞಾನಿಗಳು ಮತ್ತು ತಾಂತ್ರಜ್ಞಾನಿಗಳು ಹಾಗೂ ಸಂಸ್ಥೆ ನೀಡಿರುವ ಕೊಡುಗೆಗಳನ್ನು ಗೌರವಿಸಿ ಅಕಾಡೆಮಿಯ ಕಾರ್ಯಚಟುವಟಿಕೆಗಳೊಂದಿಗೆ ಒಳಪಡಿಸಿಕೊಳ್ಳುವುದು ಅಕಾಡೆಮಿಯ ಉದ್ದೇಶ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಉತ್ಕೃಷ್ಟತೆಯನ್ನು ಗುರುತಿಸುವುದಕ್ಕಾಗಿ ಮಾತ್ರ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಅಕಾಡೆಮಿಯ ನಿಲುವಿಗೆ ಧಕ್ಕೆಯಾಗದಂತೆ ಈ ಪಕ್ರಿಯೆಯನ್ನು ನಡೆಸಲಾಗುವುದು.
- ಸದಸ್ಯತ್ವ
- ಫೆಲೋಶಿಪ್
- ಎಮೆರಿಟಸ್ ಸಮಾಲೋಚಕತ್ವ
- ಸಾಂಸ್ಥಿಕ ಸಹಯೋಗ