ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ವಿಶ್ವ ಪರಿಸರ ದಿನಾಚರಣೆ 2024

1 min read

2024ನೇ ಸಾಲಿನ ವಿಶ್ವ ಪರಿಸರ ದಿನಾಚರಣೆಯು ‘ಭೂಸುಧಾರಣೆ ಹಾಗೂ ಮರುಭೂಮೀಕರಣ ಮತ್ತು ಬರ ಸ್ಥಿತಿಸ್ಥಾಪಕತ್ವ’ ಎಂಬ ವಿಷಯದ ಮೇಲೆ ಕೇಂದ್ರೀಕೃತವಾಗಿದೆ. ಈ ಜಾಗತಿಕ ಆಚರಣೆಯ ಅನುಗುಣವಾಗಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮತ್ತು ಪರಿಸರ ಸಂಘ ಬೆಂಗಳೂರು (ಎನ್ವಿರಾನ್ಮೆಂಟ್ ಅಸೋಸಿಯೇಷನ್ ಆಫ್ ಬೆಂಗಳೂರು) ಜಂಟಿಯಾಗಿ ‘ಭೂಮಿ ಮತ್ತು ಮಣ್ಣಿನ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳು’ ಎಂಬ ಶೀರ್ಷಿಕೆಯಡಿಯಲ್ಲಿ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು 2024ರ ಜೂ.8ರಂದು  ಅಕಾಡೆಮಿಯಲ್ಲಿ ಆಯೋಜಿಸಲಾಗುತ್ತಿದೆ.

ಈ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ (ಕನ್ನಡ & ಇಂಗ್ಲೀಷ್ – 1000 ಪದಗಳಿಗೆ ಮೀರದಂತೆ) ಯನ್ನು ಮತ್ತು ಪದವಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಗಳನ್ನು‘ಮಣ್ಣು ಮತ್ತು ಭೂಮಿಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳು’ ಎಂಬ ವಿಷಯದ ಮೇಲೆ ಆಯೋಜಿಸಲಾಗುತ್ತಿದೆ.

ಕಾರ್ಯಕ್ರಮದ ಕೈಪಿಡಿ

ಪ್ರಬಂಧ ಸ್ಪರ್ಧೆಯ ಮಾರ್ಗಸೂಚಿ

ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸುವ ವಿದ್ಯಾರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಅಕಾಡೆಮಿಯ ಇ-ಮೇಲ್ essay.ksta@gmail.com  ಕಳುಹಿಸಿಕೊಡುವುದು:

ಹೆಸರು (Name):
ಇ-ಮೇಲ್ (e-mail):
ಮೊಬೈಲ್ ನಂ. (Mobile No.)
ಶಾಲೆಯ ಹೆಸರು (Name of the School):
ಪ್ರಬಂಧದ ಭಾಷೆ (Language of the Essay): ಕನ್ನಡ/English

ಪ್ರಬಂಧಗಳನ್ನು ಅಕಾಡೆಮಿಯ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸುವುದು. ಪ್ರಬಂಧ ಕಳುಹಿಸಲು ಕೊನೆಯ ದಿನಾಂಕ 27.05.2024 (ಸೋಮವಾರ).

ರಸಪ್ರಶ್ನೆ ಸ್ಪರ್ಧೆಯ ಮಾರ್ಗಸೂಚಿ

ರಸಪ್ರಶ್ನೆ ಸ್ಪರ್ಧೆಯನ್ನು ‘ಮಣ್ಣು ಮತ್ತು ಭೂಮಿಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳು’ ಎಂಬ ವಿಷಯದ ಮೇಲೆ ಆಯೋಜಿಸಲಾಗುತ್ತಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸುವ ವಿದ್ಯಾರ್ಥಿಗಳು (ಇಬ್ಬರು ವಿದ್ಯಾರ್ಥಿಗಳ ಟೀಂ) ಈ ಕೆಳಗಿನ ಮಾಹಿತಿಯನ್ನು ಅಕಾಡೆಮಿಯ ಇ-ಮೇಲ್ ksta.gok@gmail.com  ಗೆ ದಿನಾಂಕ 27.05.2024 (ಸೋಮವಾರ)ದೊಳಗಾಗಿ ಕಳುಹಿಸಿಕೊಡುವುದು:

ಹೆಸರು (Name) : 1.                        2.
ಇ-ಮೇಲ್ (e-mail):
ಮೊಬೈಲ್ ನಂ. (Mobile No.):
ಕಾಲೇಜಿನ ಹೆಸರು (Name of the College):

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.
Skip to content