ನವೆಂಬರ್ 07: ಈ ದಿನ, ಅಂದು
1 min readನವೆಂಬರ್ 07: ಸರ್ ಸಿ ವಿ ರಾಮನ್ (1888-1970) ಜನ್ಮ ದಿನ
ಚಂದ್ರಶೇಖರ ವೆಂಕಟ ರಾಮನ್
ತಮ್ಮ ಸಂಶೋದನೆಯಿಂದ ವಿಶ್ವವಿಖ್ಯಾತಿಯನ್ನು ಪಡೆದರಲ್ಲದೆ ವೈಜ್ಞಾನಿಕ ಭೂಪಟದಲ್ಲಿ ಭಾರತಕ್ಕೆ ಒಂದು ಸ್ಥಾನವನ್ನು ತಂದುಕೊಟ್ಟರು
ಬೆಳಕಿನ ಚದುರುವಿಕೆಯ ಬಗ್ಗೆ ಅವರ ಸಂಶೋಧನೆಗೆ 1930ರಲ್ಲಿ ಭೌತಶಾಸ್ತ್ರಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ಪಡೆದರು. ಇವರು ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಮೊದಲ ಏಷ್ಯನ್ನರು.
ರಾಮನ್ ಸಂಗೀತ ವಾದ್ಯಗಳ ಅಕೋಸ್ಟಿಕ್ಸ್ ನಲ್ಲಿಯೂ ಸಹ ಕೆಲಸ ಮಾಡಿದ್ದಾರೆ. ಭಾರತೀಯ ತಾಳವಾದ್ಯಗಳಾದ ಮೃದಂಗ ಮತ್ತು ತಬಲಾಗಳ ಮಾದುರ್ಯದ ಧ್ವನಿಯ ಸ್ವರೂಪವನ್ನು ಅಧ್ಯಯನ ಮಾಡಿದವರಲ್ಲಿ ಇವರು ಮೊದಲಿಗರು.
- 1888, ನವೆಂಬರ್ 7 – ತಿರುಚ್ಚಿರಾಪಳ್ಳಿಯ ಸಮೀಪದ ತಿರುವನಾಯ್ಕಲ್ ನಲ್ಲಿ ಜನನ
- 1892-1902 – ವಿಶಾಖಪಟ್ಟಣದಲ್ಲಿ ಆರಂಭಿಕ ಶಿಕ್ಷಣ
- 1900 – ಮೆಟ್ರಿಕ್ಯುಲೇಷನ್ ಪರೀಕ್ಷೆ
- 1904 – ಬಿ. ಎ. ಮೊದಲನೇ ದರ್ಜೆ, ಚಿನ್ನದ ಪದಕ
- 1906 -ಲಂಡನ್ ನ ಫಿಲೊಸೊಫಿಕಲ್ ಮ್ಯಾಗಜಿನ್ ನಲ್ಲಿ ಮೊದಲ ಲೇಖನ ಪ್ರಕಟ
- 1907 – ಎಂ.ಎ. ಫೈನಾನ್ಶಿಯಲ್ ಸಿವಿಲ್ ಸರ್ವೀಸ್ ಪರೀಕ್ಷೆ, ಮೊದಲನೇ ರಾಂಕ್
- ಲೋಕಸುಂದರಿಯೊಂದಿಗೆ ಮದುವೆ
- ಸಹಾಯಕ ಲೆಕ್ಕಾಧಿಕಾರಿ ಜನರಲ್, ಭಾರತೀಯ ಹಣಕಾಸು ಇಲಾಖೆ, ಕಲ್ಕತ್ತ
- ಕಲ್ಕತ್ತಾದ ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್ (ಐಎಸಿಎಸ್) ನಲ್ಲಿ ಸಂಶೋಧನೆ ಆರಂಭ
- 1921 – ಮೊದಲ ವಿದೇಶ ಪ್ರವಾಸ (ಇಂಗ್ಲೆಂಡಿಗೆ) .
- 1924 – ಲಂಡನ್ನಿನ ರಾಯಲ್ ಸೊಸೈಟಿಯ ಚುನಾಯಿತ ಫೆಲೋ
- 1928, ಫೆಬ್ರವರಿ 28 – ಕಲ್ಕತ್ತಾದ ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್ (ಐಎಸಿಎಸ್) ನಲ್ಲಿ ರಾಮನ್ ಪರಿಣಾಮದ ಆವಿಷ್ಕಾರ
- 1928, ಮಾರ್ಚ್ 16 – ದಕ್ಷಿಣ ಭಾರತೀಯ ವಿಜ್ಞಾನ ಸಂಘದ ವತಿಯಿಂದ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ರಾಮನ್ ಪರಿಣಾಮದ ಬಗ್ಗೆ ಮೊದಲ ಸಾರ್ವಜನಿಕ ಉಪನ್ಯಾಸ
- 1930 – ಭೌತಶಾಸ್ತ್ರಕ್ಕೆ ನೊಬೆಲ್ ಪ್ರಶಸ್ತಿ .
- ರಾಯಲ್ ಸೊಸೈಟಿಯ ಹ್ಯೂಸ್ ಮೆಡಲ್
- 1933, ಮಾರ್ಚ್ 31 – ನಿರ್ದೇಶಕರು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು
- 1934 – ರಾಮನ್ ರಿಂದ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ಪ್ರಾರಂಭ
- 1948 – ರಾಮನ್ ಸಂಶೋಧನಾ ಸಂಸ್ಥೆ ಸ್ಥಾಪನೆ.
- 1954 – ಭಾರತ ರತ್ನ ಪ್ರಶಸ್ತಿ ಪ್ರದಾನ
- 1970, ನವೆಂಬರ್ 21 – ಬೆಂಗಳೂರಿನಲ್ಲಿ ನಿಧನ
ನವೆಂಬರ್ 07: ಪ್ರೊ. ಮೇರಿ ಕ್ಯೂರಿ (1867-1934) ಜನ್ಮ ದಿನ
ಪ್ರೊ. ಮೇರಿ ಸ್ಕ್ಲೋಡೊವ್ಸ್ಕಾ ಕ್ಯೂರಿ ಒಬ್ಬ ಪೋಲಿಷ್-ಫ್ರೆಂಚ್ ರಸಾಯನಶಾಸ್ತ್ರಜ್ಞೆ ಮತ್ತು ಭೌತವಿಜ್ಞಾನಿಯಾಗಿದ್ದು, ಇವರು ಯುರೇನಿಯಂ ಖನಿಜಗಳ ಮೇಲೆ ನಡೆಸಿದ ಪ್ರಯೋಗಗಳಿಂದ ಪೊಲೊನಿಯಂ ಮತ್ತು ರೇಡಿಯಂ ಎಂಬ ಎರಡು ಹೊಸ ಧಾತುಗಳ ಆವಿಷ್ಕಾರಕ್ಕೆ ಕಾರಣವಾಯಿತು.
ಮೇರಿ ಕ್ಯೂರಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ ಹಾಗೂ ಇವರು ರಸಾಯನ ವಿಜ್ಞಾನದಲ್ಲಿಯೂ ಸಹ ನೊಬೆಲ್ ಪ್ರಶಸ್ತಿ ಪಡೆದಿದ್ದಾರೆ. ಇವರು ಎರಡು ಬಾರಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ
ಫ್ರೆಂಚ್ ಭೌತಶಾಸ್ತ್ರಜ್ಞ ಪಿಯರೆ ಕ್ಯೂರಿಯನ್ನು 1895ರ ಜುಲೈ 26ರಂದು ಮೇರಿ ಮದುವೆಯಾದರು.
ಎರಡು ತಲೆಮಾರುಗಳಲ್ಲಿ ಆಕೆಯ ಕುಟುಂಬಕ್ಕೆ ಐದು ನೊಬೆಲ್ ಪ್ರಶಸ್ತಿಗಳು ಲಭಿಸಿವೆ.